ಮಂಗಳೂರು ಕೋಸ್ಟ್ ಗಾರ್ಡ್ ಪಡೆಗೆ 'ಇಂಟರ್ಸೆಪ್ಟರ್ ಬೋಟ್' ಆನೆ ಬಲ

ಮಂಗಳೂರು, ಫೆಬ್ರವರಿ 1: ಕೋಸ್ಟ್ ಗಾರ್ಡ್ ಪಡೆಗೆ ನೂತನ ಅತ್ಯಾಧುನಿಕ ಇಂಟರ್ಸೆಪ್ಟರ್ ಬೋಟ್ ಹಸ್ತಾಂತರಿಸಲಾಗಿದೆ.

ಭಾರತೀಯ ಡಿಫೆನ್ಸ್ ಅಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿಡಿಎಲ್) ಸಂಸ್ಥೆಯ ಭಾರತ್ ಮಂಗಳೂರು ಯಾರ್ಡ್ ನಲ್ಲಿ ತಯಾರಾದ ನೂತನ ಮಾದರಿಯ ಇಂಟರ್ಸೆಪ್ಟರ್ ಬೋಟನ್ನು ಕೋಸ್ಟ್ ಗಾರ್ಡ್ ಗೆ ಬುಧವಾರ ಹಸ್ತಾಂತರಿಸಲಾಗಿದೆ .

ಈ ಇಂಟರ್ಸೆಪ್ಟರ್ ಬೋಟ್ ಫೆಬ್ರವರಿ 20 ರಿಂದ ಸಮುದ್ರದಲ್ಲಿ ಕಣ್ಗಾವಲು ಕಾರ್ಯಚರಣೆಯಲ್ಲಿ ನಿರತವಾಗಲಿದೆ. ಈ ಬೋಟ್ 5-410 ಸರಣಿಯ ಇಂಟರ್ಸೆಪ್ಟರ್ ಬೋಟ್ ಆಗಿದ್ದು ಗಂಟೆಗೆ 35 ನಾಟಿಕಲ್ ಮೈಲ್ ಕ್ರಮಿಸುವ ಶಕ್ತಿ ಹೊಂದಿದೆ. ಅಪಾಯದಲ್ಲಿರುವ ಮೀನುಗಾರರ ರಕ್ಷಣೆ ಹಾಗೂ ಸಮುದ್ರ ಕಳ್ಳಸಾಗಾಣಿಕೆ ತಡೆ ಮತ್ತಿತರ ಕಾರ್ಯಾಚರಣೆಗೆ ಈ ಬೋಟ್ ಸಹಾಯ ಮಾಡಲಿದೆ.

Mangaluru Coast Guard launches new interceptor boat for security

ಈ ಇಂಟರ್ಸೆಪ್ಟರ್ ಬೋಟ್ ಎರಡು ಪ್ರಬಲ ಇಂಜಿನ್ ಗಳನ್ನು ಹೊಂದಿದ್ದು ಅಲ್ಯುಮಿನಿಯಂ ಹಾಲ್ ನಿಂದ ತಯಾರಿಸಲಾಗಿದೆ. 28 ಮೀ. ಉದ್ದ ಹಾಗು 60 ಟನ್ ಭಾರವಿರುವ ಈ ಇಂಟರ್ಸೆಪ್ಟರ್ ಬೋಟ್ 11 ಸಿಬ್ಬಂದಿಗಳನ್ನು ಗಸ್ತು ಕಾರ್ಯಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+