ಮಂಗಳೂರು ಸೆಂಟ್ರಲ್-ಮಾಡಗಾಂವ್ ಮೆಮು ವೇಳಾಪಟ್ಟಿ ಬದಲು
ಮಾರ್ಚ್ 12ರಿಂದ ಮಂಗಳೂರು ಸೆಂಟ್ರಲ್-ಮಡಗಾಂವ್ ನಡುವಿನ ಮೆಮು ರೈಲಿನ ವೇಳಾಪಟ್ಟಿ ಬದಲು, ಹೊಸ ವೇಳಾಪಟ್ಟಿ ನೋಡಿ.
ಮಂಗಳೂರು, ಮಾರ್ಚ್ 12; ಭಾರತೀಯ ರೈಲ್ವೆ ಮಂಗಳೂರು ಸೆಂಟ್ರಲ್-ಮಡಗಾಂವ್ ನಡುವಿನ ಮೆಮು ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ. ಈಗಿರುವ ವೇಳಾಪಟ್ಟಿ ಜನರಿಗೆ ಅನುಕೂಲವಾಗುತ್ತಿಲ್ಲ ಎಂಬ ದೂರು ಇತ್ತು. ವೇಳಾಪಟ್ಟಿ ಬದಲಾವಣೆ ಪ್ರಸ್ತಾವನೆ ಬೋರ್ಡ್ ಮುಂದೆ ಬಾಕಿ ಇತ್ತು. ಈಗ ಪ್ರಯಾಣಿಕರ ಬೇಡಿಕೆಯಂತೆ ವೇಳಾಪಟ್ಟಿ ಬದಲಾವಣೆಯಾಗಿದೆ. ಮಾರ್ಚ್ 15ರಿಂದಲೇ ನೂತನ ವೇಳಾಪಟ್ಟಿ ಜಾರಿಗೆ ಬರಲಿದೆ ಎಂದು ಭಾರತೀಯ ರೈಲ್ವೆ ಹೇಳಿದೆ.
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಮೆಮು ರೈಲು ಮುಂಗಾರು ಮತ್ತು ಮುಂಗಾರು ಇಲ್ಲದ ಸಮಯದಲ್ಲಿಯೂ ಮಧ್ಯಾಹ್ನ 3.30ಕ್ಕೆ ಹೊರಡಲಿದೆ. ಬೇಸಿಗೆ ಅವಧಿಯಲ್ಲಿ ರಾತ್ರಿ 10.20, ಮುಂಗಾರು ಅವಧಿಯಲ್ಲಿ ರಾತ್ರಿ 10.30ಕ್ಕೆ ಮಡಗಾಂವ್ ರೈಲು ನಿಲ್ದಾಣ ತಲುಪಲಿದೆ ಎಂದು ಕೊಂಕಣ ರೈಲ್ವೆ ತನ್ನ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಈ ಮಾರ್ಗದಲ್ಲಿ ಮೆಮು ರೈಲು ಸುರತ್ಕಲ್‌ಗೆ 4.34ಕ್ಕೆ, ಮುಲ್ಕಿಗೆ 4.44ಕ್ಕೆ, ಉಡುಪಿಗೆ 5.11ಕ್ಕೆ, ಬಾರ್ಕೂರು 5.27ಕ್ಕೆ, ಕುಂದಾಪುದ 5.41ಕ್ಕೆ, ಸೇನಾಪುರ 5.52ಕ್ಕೆ, ಮೂಕಾಂಬಿಕ ರೋಡ್ ಬೈಂದೂರು 6.10ಕ್ಕೆ ಆಗಮಿಸಲಿದೆ. ಮುಂಗಾರು ಮತ್ತು ಬೇಸಿಗೆ ಅವಧಿಯಲ್ಲಿ ಇದೇ ಸಮಯದಲ್ಲಿ ರೈಲು ಓಡಲಿದೆ ಎಂದು ಹೊಸ ವೇಳಾಪಟ್ಟಿ ಹೇಳಿದೆ.
ಈ ರೈಲು ಭಟ್ಕಳದಿಂದ ಬೇಸಿಗೆ ಸಮಯದಲ್ಲಿ 6.23ಕ್ಕೆ ಮತ್ತು ಮುಂಗಾರು ಅವಧಿಯಲ್ಲಿ 6.29ಕ್ಕೆ ಹೊರಡಲಿದೆ. ರೈಲು ಮುರುಡೇಶ್ವರಕ್ಕೆ 6.36ಕ್ಕೆ, ಮುಂಗಾರು ಅವಧಿಯಲ್ಲಿ 6.46ಕ್ಕೆ ಬರಲಿದೆ. ಹೊನ್ನಾವರಕ್ಕೆ 7.01 ಮತ್ತು 7.13ಕ್ಕೆ, ಕುಮುಟ 7.19 ಮತ್ತು 7.31ಕ್ಕೆ, ಗೋಕರ್ಣ ರಸ್ತೆಗೆ 7.41 ಮತ್ತು 7.50ಕ್ಕೆ, ಅಂಕೋಲಕ್ಕೆ 7.52 ಮತ್ತು 8.03ಕ್ಕೆ, ಕಾರವಾರಕ್ಕೆ 8.11 ಮತ್ತು 8.30ಕ್ಕೆ ಆಗಮಿಸಲಿದೆ.

ರೈಲ್ವೆ ಪ್ರಯಾಣಿಕರು ಮೆಮು ರೈಲು ಮಂಗಳೂರು ಸೆಂಟ್ರಲ್‌ನಿಂದ ಸಂಜೆ 4.30ಕ್ಕೆ ಹೊರಟರೆ ಕಚೇರಿಗೆ ಹೋಗುವವರಿಗೆ, ವಿದ್ಯಾರ್ಥಿಗಳಿಗೆ, ಆಸ್ಪತ್ರೆಗೆ ಆಗಮಿಸಿದ ರೋಗಿಗಳಿಗೆ ಸಹಾಯಕವಾಗಲಿದೆ ಎಂದು ಹೇಳಿದೆ. ಅಲ್ಲದೇ ರೈಲು ನಂಬರ್ 10107 ಮಡಗಾಂವ್-ಮಂಗಳೂರು ಸೆಂಟ್ರಲ್ ಮೆಮು ರೈಲು ಬೆಳಗ್ಗೆ 10.30ಕ್ಕೆ ಆಗಮಿಸಬೇಕು ಎಂದು ಬೇಡಿಕೆ ಇಟ್ಟಿದೆ. ಸದ್ಯ ರೈಲು 12.30ಕ್ಕೆ ಆಗಮಿಸುತ್ತಿದೆ.
ಆದರೆ ಕೊಂಕಣ ರೈಲ್ವೆ ಮೆಮು ರೈಲು ಮಂಗಳೂರು ಸೆಂಟ್ರಲ್ ನಿಲ್ದಾಣಕ್ಕೆ ಆಗಮಿಸುವ ಸಮಯವನ್ನು ಪರಿಷ್ಕರಣೆ ಮಾಡುವ ಕುರಿತು ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ.












Click it and Unblock the Notifications