ಮಂಗಳೂರು-ಅಹಮದಾಬಾದ್ ರೈಲು ಸಂಚಾರ ಸ್ಥಗಿತ
ಮಂಗಳೂರು, ಮೇ 12 : ಕಳೆದ ನಾಲ್ಕು ವರ್ಷಗಳಿಂದ ಮಂಗಳೂರಿನಿಂದ ಅಹಮದಾಬಾದ್‌ಗೆ ಸಂಚಾರ ನಡೆಸುತ್ತಿದ್ದ ಬೇಸಿಗೆ ರಜಾ ಕಾಲದ ವಿಶೇಷ ರೈಲಿನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಮೇ ಮತ್ತು ಜೂನ್ ತಿಂಗಳಿನಲ್ಲಿ ಈ ರೈಲು ಸಂಚಾರ ನಡೆಸುತ್ತಿತ್ತು.
ಈ ರೈಲಿನಿಂದಾಗಿ ಮಂಗಳೂರಿನಲ್ಲಿ ನೆಲೆಸಿರುವ ಗುಜರಾತ್ ಮೂಲದವರಿಗೆ ಹೆಚ್ಚು ಪ್ರಯೋಜನವಾಗುತ್ತಿತ್ತು. ಆದರೆ, ಈ ಬಾರಿ ನೈರುತ್ಯ ರೈಲ್ವೆ ವಲಯ ಯಾವುದೇ ಮುನ್ಸೂಚನೆ ನೀಡದೆ ರೈಲಿನ ಸಂಚಾರವನ್ನು ಸ್ಥಗಿತಗೊಳಿಸಿದ್ದು, ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. [ಬೆಂಗಳೂರು :ರೈಲ್ವೆ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆ]

ರೈಲು ಸೇವೆಯನ್ನು ರದ್ದುಗೊಳಿಸಲು ಕಾರಣ ಕೇಳಿ ಮಂಗಳೂರಿನ ಪಶ್ಚಿಮ ಕರಾವಳಿ ರೈಲು ಯಾತ್ರಿ ಅಭಿವೃದ್ಧಿ ಸಮಿತಿ ವತಿಯಿಂದ ಕೇಂದ್ರ ರೈಲ್ವೆ ಇಲಾಖೆಗೆ ಪತ್ರ ಬರೆಯಲಾಗಿತ್ತು. ಸದ್ಯ, ಹೆಚ್ಚುವರಿ ರೈಲು ಕೋಚ್, ಇಂಜಿನ್ ಲಭ್ಯವಿಲ್ಲ. ಆದ್ದರಿಂದ ರೈಲನ್ನು ಓಡಿಸಲು ಸಾಧ್ಯವಾಗುತ್ತಿಲ್ಲ ಎಂದು ಪತ್ರಕ್ಕೆ ಇಲಾಖೆ ಉತ್ತರ ನೀಡಿದೆ. [ರೈಲ್ವೆ ಟಿಕೆಟ್ ಖರೀದಿಗೆ ಮೊಬೈಲ್ ಅಪ್ಲಿಕೇಶನ್]
ಕೇರಳದ ಲಾಬಿ : ಮಂಗಳೂರಿಗೆ ಸಂಬಂಧಪಟ್ಟಂತೆ ಯಾವುದೇ ರೈಲ್ವೆ ಯೋಜನೆ ಕೈ ತಪ್ಪಿದರೆ ಅದಕ್ಕೆ ಕೇರಳದ ಲಾಬಿ ಪ್ರಮುಖ ಕಾರಣವಾಗಿರುತ್ತದೆ. ಈ ವಿಶೇಷ ರೈಲು ಆರಂಭವಾಗದೇ ಇರಲು ಕೂಡಾ ಕೇರಳದ ಲಾಬಿ ಕೆಲಸ ಮಾಡಿದೆಯೇ? ಎಂಬ ಅನುಮಾನ ಮೂಡಿದೆ.
ಮಂಗಳೂರು-ಅಹಮದಾಬಾದ್ ರೈಲು ಸಂಚಾರ ಸ್ಥಗಿತಗೊಂಡಿದೆ. ಆದರೆ, ಈ ಬಾರಿ ಕೇರಳದ ರಾಜಧಾನಿ ತಿರುವನಂತಪುರದಿಂದ ಮಧ್ಯಪ್ರದೇಶದ ಇಂಧೋರ್‌ಗೆ ಬೇಸಿಗೆ ಕಾಲದ ವಿಶೇಷ ರೈಲು ಸೇವೆಯನ್ನು ಆರಂಭಿಸಲಾಗಿದೆ.












Click it and Unblock the Notifications