SDPI ಮುಖಂಡನ ಹತ್ಯೆ: ಐವರು ಆರೋಪಿಗಳ ಬಂಧನ
ಮಂಗಳೂರು, ಜೂನ್ 24 : ಇಲ್ಲಿನ ಬೆಂಜನಪದವಿನಲ್ಲಿ ಎಸ್ ಡಿಪಿಐ ಮುಖಂಡ ಅಶ್ರಫ್ ಕಲಾಯಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು ಶುಕ್ರವಾರ ಐವರನ್ನು ಬಂಧಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ.
ದಿವ್ಯಾರಾಜ್, ಅಭಿನ್, ಪವನ್, ಸಂತೋಷ್ ಮತ್ತು ಶಿವಪ್ರಸಾದ್ ಎನ್ನುವರನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಜೂನ್ 21ರಂದು ಕಲಾಯಿಯ ಎಸ್ ಡಿಪಿಐ ವಲಯಾಧ್ಯಕ್ಷ ಅಶ್ರಫ್ ನನ್ನು ಬೆಂಜನಪದವಿನಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.












Click it and Unblock the Notifications