ಮಂಗಳೂರು: ಭೀಕರ ಅಪಘಾತಕ್ಕೆ ಮೂವರು ಬಲಿ

ಮಂಗಳೂರು, ಮೇ.12: ನಗರದ ಹೊರವಲಯದ ಸುರತ್ಕಲ್ ಸಮೀಪದ ಮುಕ್ಕ ಎಂಬಲ್ಲಿ ಸೋಮವಾರ ಬೆಳಗ್ಗೆ ಲಾರಿ ಹಾಗೂ ರಿಕ್ಷಾ ನಡುವೆ ನಡೆದ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮೂವರು ದಾರುಣವಾಗಿ ಮೃತಪಟ್ಟು, ಮಹಿಳೆಯೋರ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಮೃತ ಮೂವರಲ್ಲಿ ಇಬ್ಬರು ಮಕ್ಕಳಾಗಿದ್ದು, ಇನ್ನೋರ್ವರು ಆಟೋ ಚಾಲಕರೆಂದು ತಿಳಿದುಬಂದಿದೆ. ಘಟನೆಯಲ್ಲಿ ರಿಕ್ಷಾದಲ್ಲಿದ್ದ ಮಹಿಳೆಯೋರ್ವರು ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಮೃತರ ಕುರಿತು ಹೆಚ್ಚಿನ ವಿವರ ಈವರೆಗೆ ಲಭ್ಯವಾಗಿಲ್ಲ.

ರಿಕ್ಷಾ ಚಾಲಕ ಉಡುಪಿ-ಮಂಗಳೂರು ಹೆದ್ದಾರಿಯಲ್ಲಿ ಚಲಿಸುತ್ತಿರುವಾಗ ಯಾವುದೇ ಸೂಚನೆ ನೀಡದೆ ತಿರುಗಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ರಿಕ್ಷಾ ಲಾರಿಯಡಿಗೆ ಸಿಲುಕಿ ಅಪ್ಪಚ್ಚಿಯಾಗಿತ್ತು. ಬಳಿಕ ಜೆಸಿಬಿಯ ಮೂಲಕ ತೆರವುಗೊಳಿಸಿ ಮೃತಪಟ್ಟವರ ದೇಹವನ್ನು ಹೊರತೆಗೆಯಲಾಯಿತು. ಘಟನೆಯ ಸಂಬಂಧ ಲಾರಿ ಚಾಲಕನನ್ನು ವಶಕ್ಕೆ ಪಡೆದಿರುವ ಸುರತ್ಕಲ್ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿರುವುದಾಗಿ ತಿಳಿದುಬಂದಿದೆ.

Mangalore three Crushed to death
ಹಲ್ಲೆ ಪ್ರಕರಣ : ಕೋಟ: ಪಿರ್ಯಾದಿ ರವಿ ಕುಮಾರ್ ‌(28), ತಂದೆ: ಮಾರಪ್ಪ, ಹೊಸಳ್ಳಿ, ಹೊನ್ನಾಳಿ ತಾಲೂಕು, ದಾವಣಗೆರೆ ಜಿಲ್ಲೆ ಇವರು ಕೆಎ 20 ಸಿ 3257 ನೇ ದುರ್ಗಾಂಬ ಬಸ್ಸಿನ ಚಾಲಕರಾಗಿದ್ದು, ದಿನಾಂಕ 11/05/2014 ರಂದು ಬಸ್ಸನ್ನು ಮಂಗಳೂರಿನಿಂದ ದಾವಣಗೆರೆಗೆ ಚಲಾಯಿಸಿಕೊಂಡು ಹೋಗುತ್ತಾ ಸಾಲಿಗ್ರಾಮ ಬಸ್ ‌ ನಿಲ್ದಾಣದಲ್ಲಿ ಬಸ್ ‌ನ್ನು ನಿಲ್ಲಿಸಿದ್ದಾಗ ಹಿಂದಿನಿಂದ ಭಾರತಿ ಕಂಪೆನಿಯ ಬಸ್ಸು ನಂ ಕೆಎ 20 ಸಿ 779 ನ್ನು ಅದರ ಚಾಲಕ ಬಸ್ಸಿಗೆ ಮುಂದುಗಡೆ ಹೋಗದಂತೆ ಅಡ್ಡವಾಗಿ ನಿಲ್ಲಿಸಿ ಅದರ ನಿರ್ವಾಹಕಿ ರೇಖಾರವರು ಅವಾಚ್ಯ ಶಬ್ದಗಳಿಂದ ಬೈದಿದ್ದು ನಂತರ 07:35 ಗಂಟೆಗೆ ಕೋಟ ಮೂರುಕೈ ಬಸ್ ‌ಸ್ಟ್ಯಾಂಡ್ ‌ ಹತ್ತಿರ ಬಸ್ಸನ್ನು ನಿಲ್ಲಿಸಿದ್ದಾಗ ಭಾರತಿ ಬಸ್ಸಿನ ಚಾಲಕರಲ್ಲಿ ಈ ಬಗ್ಗೆ ಕೇಳಲು ಹೋಗಿದ್ದು, ಭಾರತಿ ಬಸ್ಸಿನ ಚಾಲಕ ರಾಜೇಶ ಅವಾಚ್ಯ ಶಬ್ದಗಳಿಂದ ಬೈದು ಕೊರಳ ಪಟ್ಟಿಗೆ ಕೈಹಾಕಿ ಲಿವರ್ ‌ನಿಂದ ಹೊಡೆದಿದ್ದಾರೆ. ಇದನ್ನು ತಪ್ಪಿಸಲು ಬಂದ ನಿರ್ವಾಹಕರಿಗೆ ಭಾರತಿ ಬಸ್ಸಿನ ನಿರ್ವಾಹಕಿ ರೇಖಾರವರು ಟಿಕೆಟ್ ‌ ನೀಡುವ ಕಂಪ್ಯೂಟರ್ ‌ ನಿಂದ ಹೊಡೆದು ರಕ್ತ ಗಾಯವಾಗಿರುತ್ತದೆ. ಈ ಬಗ್ಗೆ ರವಿ ಕುಮಾರ್ ‌ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 121/2014 ಕಲಂ: 341,504,324ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+