ಕರಾವಳಿ ಬೆಚ್ಚಿಬೀಳಿಸಿದ ವಿದ್ಯಾರ್ಥಿನಿಯರ ಕಿಡ್ನಾಪ್

ಮಂಗಳೂರು, ಡಿ.21: ಇಬ್ಬರು ವೈದ್ಯಕೀಯ ವಿದ್ಯಾರ್ಥಿನಿಗಳನ್ನು ಅಪಹರಿಸಿ, ಪೋರ್ನ್ ವಿಡಿಯೋ ಮಾಡಿ ಬ್ಲಾಕ್ ಮೇಲ್ ಮಾಡಿದ ಘಟನೆ ಬಗ್ಗೆ ತಿಳಿದ ಕರಾವಳಿ ಜನತೆ ಬೆಚ್ಚಿದ್ದಾರೆ. ನಗರದ ಮೆಡಿಕಲ್ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಗಳಿಬ್ಬರನ್ನು ನಿಗೂಢ ಸ್ಥಳಕ್ಕೆ ಕರೆದೊಯ್ದ 6 ಜನರಿದ್ದ ತಂಡವೊಂದು ಲಕ್ಷಾಂತರ ದುಡ್ಡು ಡಿಮ್ಯಾಂಡ್ ಮಾಡಿರುವ ಘಟನೆ ನಡೆದಿದೆ.

ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳನ್ನ ಅಪಹರಿಸಿ, ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬಳಿಕ ಅವರಿಬ್ಬರನ್ನ ಬ್ಲ್ಯಾಕ್'ಮೇಲ್ ಮಾಡುತ್ತಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಗರದ ಕ್ಷೇಮಾ ಮೆಡಿಕಲ್ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ವಿಹಾರಕ್ಕೆಂದು ಹೊರಗೆ ಹೋಗಿದ್ದಾಗ ಅವರನ್ನ ಹಿಂಬಾಲಿಸಿದ ಆರು ವ್ಯಕ್ತಿಗಳ ತಂಡವೊಂದು ಈ ಕೃತ್ಯ ಎಸಗಿದೆ.

ಬಿಹಾರ ಮೂಲದ ನೇತ್ರಾ(ಹೆಸರು ಬದಲಾಯಿಸಲಾಗಿದೆ) ಮತ್ತು ಕೇರಳ ಮೂಲಕ ಸಮೀನಾ ಅವರು ಡಿಸೆಂಬರ್ 19ರಂದು ವಾಯು ವಿಹಾರಕ್ಕೆಂದು ಹೋಗಿದ್ದಾಗ ದುಷ್ಕರ್ಮಿಗಳು ಅಪಹರಿಸಿ ಅಜ್ಞಾತ ಸ್ಥಳವೊಂದಕ್ಕೆ ಕರೆದೊಯ್ದಿದ್ದಾರೆ. ಬಲವಂತವಾಗಿ ಅವರನ್ನ ಅಶ್ಲೀಲ ಭಂಗಿಗಳಲ್ಲಿ ನಿಲ್ಲಿಸಿ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಬಳಿಕ, 25 ಲಕ್ಷ ರು ನೀಡುವಂತೆ ಕೊಡುವಂತೆ ಬೆದರಿಕೆ ಹಾಕಿದ್ದಾರೆ.

Mangalore Students kidnapped, blackmailed

ವಿದ್ಯಾರ್ಥಿಯರು ತಮ್ಮ ಬಳಿ ಇದ್ದ ನೂರು ರುಪಾಯಿ, ಚಿನ್ನದ ಉಂಗುರವನ್ನು ನೀಡಿದ್ದಾರೆ. ಆದರೆ, ಅಪಹರಣಕಾರರು ಇದನ್ನು ಸ್ವೀಕರಿಸಲು ಒಪ್ಪಲಿಲ್ಲ. ನಂತರ ವಿದ್ಯಾರ್ಥಿನಿಯರ ಜತೆ ಗ್ಯಾಂಗ್ ಲಕ್ಷಾಂತರ ರುಪಾಯಿ ಡಿಮ್ಯಾಂಡ್ ಮುಂದುವರೆಸಿದೆ. 25 ಲಕ್ಷ ರು ನಿಂದ ಕಡೆಗೆ 10 ಲಕ್ಷ, 5 ಲಕ್ಷ ತು ತನಕ ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಅಪಹರಣಕ್ಕೊಳಗಾದ ವಿದ್ಯಾರ್ಥಿಗಳು ಮಂಗಳೂರಿನ ವಕೀಲರೊಬ್ಬರ ಸಹಾಯದಿಂದ ಪೊಲೀಸರಿಗೆ ಈ ವಿಷಯ ತಿಳಿಸಿದ್ದಾರೆ. ಆದರೆ, ಪೊಲೀಸರು ಕಾರ್ಯಾಚರಣೆ ನಡೆಸುವಷ್ಟರಲ್ಲಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರ್ನಾಟಕ-ಕೇರಳ-ಗೋವಾ ಕರಾವಳಿಯಲ್ಲಿ ವಿದ್ಯಾರ್ಥಿನಿಗಳ ಅಪಹರಣ ಮಾಡಿ ಪೋರ್ನ್ ವಿಡಿಯೋ ಚಿತ್ರೀಕರಿಸಿ ಬೆದರಿಕೆ ಒಡ್ಡುವ ತಂಡವೊಂದು ಸಕ್ರಿಯವಾಗಿದೆ. ಕಳೆದ ತಿಂಗಳುಗಳ ಹಿಂದೆ ಈ ಗ್ಯಾಂಗಿನ 4 ಮಂದಿಯನ್ನ ಅರೆಸ್ಟ್ ಕೂಡ ಮಾಡಲಾಗಿತ್ತು. ಮೆಡಿಕಲ್ ವಿದ್ಯಾರ್ಥಿಗಳ ಬ್ಲ್ಯಾಕ್'ಮೇಲ್ ಪ್ರಕರಣದಲ್ಲೂ ಈ ಪ್ರಕರಣದಲ್ಲಿ ಗ್ಯಾಂಗಿನ ಕೈವಾಡ ಇದೆ ಎಂದು ಕೊಣಾಜೆ ಪೊಲೀಸರು ಶಂಕಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+