ಮಾನಸ ಗಂಗೋತ್ರಿ ವಿವಿ ಘಟಿಕೋತ್ಸವದ ಚಿತ್ರಗಳು
ಮಂಗಳೂರು, ಜೂ.18: ವಿಶ್ವವಿದ್ಯಾನಿಲಯಗಳು ತಮ್ಮ ಸ್ವಾಯತ್ತತೆ ಕಾಯ್ದುಕೊಂಡು ಬರಬೇಕು ಗುಣಮಟ್ಟದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಂರಕ್ಷಣೆ ಮತ್ತು ಪ್ರೋತ್ಸಾಹ ನೀಡುತ್ತಿರಬೇಕು ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಪ್ರೊ.ಗೋವರ್ಧನ ಮೆಹ್ತಾ ಕರೆ ನೀಡಿದ್ದಾರೆ.
ಗೋವರ್ಧನ ಮೆಹ್ತಾ ಅವರು ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ 33ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಘಟಿಕೋತ್ಸವ ಭಾಷಣ ಮಾಡಿದರು.
ಗುಣಮಟ್ಟದ ಶಿಕ್ಷಣ ಒದಗಿಸುವುದು ವಿಶ್ವವಿದ್ಯಾನಿಲಯಗಳ ಪ್ರಾಥಮಿಕ ಜವಾಬ್ದಾರಿ., ದುರ್ಬಲ ನಾಯಕತ್ವ ಮತ್ತು ಆಡಳಿತಾನುಭವದ ಕೊರತೆಯಿಂದ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ ಅವರು, ಪದವೀಧರರಲ್ಲಿ ಶೇ. 20ರಷ್ಟು ಮಂದಿ ಮಾತ್ರ ಉದ್ಯೋಗ ಪಡೆಯಲು ಅರ್ಹರಾಗಿರುತ್ತಾರೆ. ಆದ್ದರಿಂದ ಶಿಕ್ಷಣದ ಗುಣಮಟ್ಟ ಕಾಪಾಡಲು ಮುಂದಾಗದಿದ್ದರೆ ಯುವಜನರ ಆಶೆ ಆಕಾಂಕ್ಷೆಗಳು ಈಡೇರಲಾರವು ಎಂದರು.
ಇಂದಿನ ಜ್ಞಾನಾಧಾರಿತ ಯುಗದಲ್ಲಿ ವಿಶ್ವವಿದ್ಯಾನಿಲಯಗಳು ಕೇವಲ ಜ್ಞಾನದ ಗ್ರಾಹಕ, ಪ್ರಸಾರಕ ಮತ್ತು ಸೃಷ್ಟಿಕರ್ತ ಮಾತ್ರ ಆಗಿರದೆ ಜ್ಞಾನವನ್ನು ಒಟ್ಟುಗೂಡಿಸಿ ಬೌದ್ಧಿಕ ಆಸ್ತಿ ನಿರ್ಮಾಣ ಮತ್ತು ಜಾಗತಿಕ ನಾಯಕತ್ವ ನೀಡುವಂತಾಗಬೇಕು. ಬೋಧನೆ ಮತ್ತು ಸಂಶೋಧನೆ ಜತೆಜತೆಯಾಗಿ ಸಾಗಬೇಕು. ವಿಶ್ವವಿದ್ಯಾನಿಲಯದ ಪ್ರತಿಯೊಬ್ಬ ಪ್ರಾಧ್ಯಾಪಕರೂ ಸಂಶೋಧನೆಯಲ್ಲಿ ನಿರತರಾಗಬೇಕು ಎಂದರು.
ಚಂದ್ರ ಯಾನ, ಮಂಗಳ ಯಾನದ ಸಾಮರ್ಥಯದ ಬಗ್ಗೆ ಹೆಮ್ಮೆ ಪಡುವ ನಾವು ನಮ್ಮ ಶಾಲೆಗಳಲ್ಲಿ ಪ್ರತಿಯೋರ್ವ ಹೆಣ್ಣು ಮಗುವಿಗೆ ಶೌಚಾಲಯ ಸೌಲಭ್ಯ ಒದಗಿಸಲು ಸಾಧ್ಯವಾಗಿಲ್ಲ. ಇದು ವಿಪರ್ಯಾಸ ಎಂದು ಡಾ| ಗೋರ್ಧನ್ ಮೆಹ್ತಾ ಹೇಳಿದರು.

ಗ್ರಾಮ ದತ್ತು ಸ್ವೀಕಾರ ಮಾಡುವ ಯೋಜನೆ
ವಿಶ್ವವಿದ್ಯಾನಿಲಯದ ವಿವಿಧ ಚಟುವಟಿಕೆಗಳನ್ನು ಮತ್ತು ಮುಂದಿನ ಯೋಜನೆಗಳನ್ನು ವಿವರಿಸಿದ ಪ್ರೊ| ಕೆ. ಭೈರಪ್ಪ ಅವರು ಮುಂದಿನ ದಿನಗಳಲ್ಲಿ ಗ್ರಾಮ ದತ್ತು ಸ್ವೀಕಾರ ಮಾಡುವ ಯೋಜನೆ ಇದೆ ಎಂದರು.

ಮೂವರಿಗೆ ಗೌರವ ಡಾಕ್ಟರೇಟ್
ಪ್ರಸಿದ್ಧ ವಿಜ್ಞಾನಿ ಹಾಗೂ ಭಾರತೀಯ ವಿಜ್ಞಾನ ಸಂಸ್ಥೆಯ ವಿಶ್ರಾಂತ ನಿರ್ದೇಶಕ ಪ್ರೊ| ಗೋವರ್ಧನ್ ಮೆಹ್ತಾ ಅವರಿಗೆ ವಿಜ್ಞಾನ ವಿಭಾಗದಲ್ಲಿ ಮತ್ತು ಮುಂಬಯಿಯ ಅಲ್ಕಾರ್ಗೊ ಲಾಜಿಸ್ಟಿಕ್ಸ್ ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಕೈಗಾರಿಕೋದ್ಯಮಿ ಶಶಿ ಕಿರಣ್ ಶೆಟ್ಟಿ ಮತ್ತು ಎನ್ಯುಎಸ್ ಇಂಡಿಯಾ ರಿಸರ್ಚ್ ಇನಿಶಿಯೇಟಿವ್ ನ್ಯಾಶನಲ್ ಯೂನಿವರ್ಸಿಟಿ ಆಫ್ ಇಂಡಿಯಾದ ಶಿಕ್ಷಣ ತಜ್ಞ ಪ್ರೊ| ಬಿ.ವಿ.ಆರ್. ಚೌಧರಿ ಅವರಿಗೆ ಸಾಹಿತ್ಯದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಪ್ರಥಮ ಶ್ರೇಯಾಂಕ ಪಡೆದವರಿಗೆ ಬಹುಮಾನ
ಮಾನವಿಕ, ವಿಜ್ಞಾನ ಮತ್ತು ತಂತ್ರಜ್ಞಾನ, ವಾಣಿಜ್ಯ ಹಾಗೂ ಶಿಕ್ಷಣ ಎಂಬ ನಾಲ್ಕು ನಿಕಾಯಗಳಲ್ಲಿ ಡಾಕ್ಟರೇಟ್, ಸ್ನಾತಕೋತ್ತರ ಪದವಿ ಮತ್ತು ಪದವಿ ತರಗತಿಗಳಲ್ಲಿ ಪ್ರಥಮ ಶ್ರೇಯಾಂಕ ಪಡೆದವರಿಗೆ ರಾಜ್ಯಪಾಲರು ಪದವಿ ಪ್ರಮಾಣ ಪತ್ರ ಮತ್ತು ಬಹುಮಾನಗಳನ್ನು ಪ್ರದಾನ ಮಾಡಿದರು.ಪ್ರೊ| ರವಿ ಶಂಕರ ರಾವ್ ಕಾರ್ಯಕ್ರಮ ನಿರ್ವಹಿಸಿದರು.

ಮಂಗಳೂರು ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವ
ಮಂಗಳೂರು ವಿಶ್ವವಿದ್ಯಾಲಯದ 33ನೇ ಘಟಿಕೋತ್ಸವ ಸಮಾರಂಭದಲ್ಲಿ ಕುಲಪತಿ ವಜುಭಾಯಿ ಪಟೇಲ್

ಪದವಿ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ
23,385 ವಿದ್ಯಾರ್ಥಿಗಳು ಈ ವರ್ಷ ಪದವಿ ಪಡೆದಿದ್ದು, ಸಮಾರಂಭದಲ್ಲಿ 1,315 ವಿದ್ಯಾರ್ಥಿಗಳು ಖುದ್ದು ಹಾಜರಾಗಿ ಪದವಿ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ.

ಗೌರವ ಡಾಕ್ಟರೇಟ್ ಪ್ರದಾನ
ಘಟಿಕೋತ್ಸವದಲ್ಲಿ ರಾಷ್ಟ್ರಮಟ್ಟದಲ್ಲಿ ಉತ್ತಮ ಹೆಸರು ಸಂಪಾದಿಸಿರುವ ಇಬ್ಬರು ಪ್ರೊಫೆಸರ್‌ಗಳಿಗೆ ಹಾಗೂ ಮಂಗಳೂರು ವಿವಿಯ ಹಳೆವಿದ್ಯಾರ್ಥಿಯೂ ಆಗಿರುವ ಓರ್ವ ಉದ್ಯಮಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ.ಕೆ.ಭೈರಪ್ಪ ಹೇಳಿದರು.

ಸಮಾರಂಭದ ಅರಂಭದಲ್ಲಿ ಗೀತ ಗಾಯನ
ಘಟಿಕೋತ್ಸವ ಕಾರ್ಯಕ್ರಮ ಸಮಾರಂಭದ ಅರಂಭದಲ್ಲಿ ಗೀತ ಗಾಯನ

ಮಂಗಳಾ ಸಭಾಂಗಣದಲ್ಲಿ ನಡೆದ ಸಮಾರಂಭ
ರಾಜ್ಯಪಾಲರೂ, ಕುಲಾಧಿಪತಿಗಳೂ ಆಗಿರುವ ವಜೂಭಾಯಿ ರುಢಾಭಾಯಿ ವಾಲಾ ಅವರ ಅಧ್ಯಕ್ಷತೆಯಲ್ಲಿ ಮಂಗಳಾ ಸಭಾಂಗಣದಲ್ಲಿ ಘಟಿಕೋತ್ಸವ ನಡೆಯಿತು.

ಮಾನಸ ಗಂಗೋತ್ರಿ ವಿವಿ
2013-14ನೇ ಸಾಲಿನಲ್ಲಿ 34,627 ವಿದ್ಯಾರ್ಥಿಗಳು ವಿವಿಧ ಪರೀಕ್ಷೆ ಬರೆದಿದ್ದು 23,385 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ

ಸ್ನಾತಕೋತ್ತರ ಪರೀಕ್ಷೆ
ಸ್ನಾತಕೋತ್ತರ ಪರೀಕ್ಷೆ ಬರೆದ 4,829 ವಿದ್ಯಾರ್ಥಿಗಳ ಪೈಕಿ 4,579 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 1,620 ಹುಡುಗರು ಹಾಗೂ 2,969 ಹುಡುಗಿಯರು ಇದ್ದಾರೆ. ಪದವಿ ಪರೀಕ್ಷೆಯಲ್ಲಿ 26,708 ವಿದ್ಯಾರ್ಥಿಗಳ ಪೈಕಿ 18,716 ಮಂದಿ ಉತ್ತೀರ್ಣರಾಗಿದ್ದು 6,497 ಹುಡುಗರು ಹಾಗೂ 12,219 ಹುಡುಗಿಯರು ಇದ್ದಾರೆ.

ಸ್ನಾತಕೋತ್ತರ ಡಿಪ್ಲೊಮಾ ಪರೀಕ್ಷೆ
ಸ್ನಾತಕೋತ್ತರ ಡಿಪ್ಲೊಮಾ ಪರೀಕ್ಷೆಗೆ ಹಾಜರಾದ ಇಬ್ಬರು ವಿದ್ಯಾರ್ಥಿನಿಯರೂ ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗ-11, ವಿಜ್ಞಾನ-63, ವಾಣಿಜ್ಯ-9, ಶಿಕ್ಷಣ-5 ಒಟ್ಟು 88 ಮಂದಿಗೆ ಪಿಹೆಚ್‌ಡಿ, 37 ಮಂದಿಗೆ ಚಿನ್ನದ ಪದಕ, 63 ಮಂದಿಗೆ ನಗದು ಬಹುಮಾನ ನೀಡಲಾಗಿದೆ.












Click it and Unblock the Notifications