ಮಳಲಿ ಮಸೀದಿಯಲ್ಲಿ ಹಿಂದೂ ದೇಗುಲದ ವಿವಾದ: ಶನಿವಾರ ವಿಚಾರಣೆ
ದಕ್ಷಿಣ ಕನ್ನಡ: ಮಂಗಳೂರಿನ ಹೊರವಲಯ ಗಂಜಿಮಠ ಬಳಿಯ ಮಳಲಿ ಮಸೀದಿ ವಿವಾದದ ಪ್ರಕರಣದಲ್ಲಿ ಇಂದು ಸುದೀರ್ಘ ವಿಚಾರಣೆ ನಡೆದಿದ್ದು, ನಾಳೆ ಶನಿವಾರಕ್ಕೆ ಮುಂದೂಡಲಾಗಿದೆ. ವಾದ-ವಿವಾದ ಆಲಿಸಿದ ಕೋರ್ಟ್ ಮುಂದಿನ ವಿಚಾರಣೆಯನ್ನು ಮುಂದೂಡಿದೆ. ಏ.21 ರಂದು ನವೀಕರಣ ಕಾಮಗಾರಿ ವೇಳೆ ದೇಗುಲ ಶೈಲಿ ಕಟ್ಟಡ ಪತ್ತೆಯಾಗಿತ್ತು. ಈ ವಿಚಾರದಲ್ಲಿ ವಿಹಿಂಪ ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿತ್ತು. ಇದರ ವಿಚಾರಣೆ ಮಂಗಳೂರಿನ ಮೂರನೇ ಜೆಎಂಎಫ್ಸಿ ನ್ಯಾಯಾಲಯದಲ್ಲಿ ಮಳಲಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ.ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ನ್ಯಾಯಾಲಯದ ವ್ಯಾಪ್ತಿಯ ಬಗ್ಗೆ ವಿಚಾರಣೆ ನಡೆಯಿತು.
1991ರ ಪೂಜಾ ಸ್ಥಳ ಕಾಯ್ದೆಯಡಿಯಲ್ಲಿಯೂ ಈ ಅರ್ಜಿಯನ್ನು ವಜಾಗೊಳಿಸಲು ಆಗುವುದಿಲ್ಲ. ಪೂಜಾ ಸ್ಥಳ ಕಾಯ್ದೆಯಲ್ಲಿ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆಯ ಬಗ್ಗೆ ಹೇಳಲಾಗಿದೆ. ಎಲ್ಲ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಬಗ್ಗೆ ಇಲ್ಲಿ ಉಲ್ಲೇಖವಿದ್ದು, ಹೀಗಿರುವಾಗ ನಮ್ಮ ಅರ್ಜಿದಾರರ ವಾದದಂತೆ ಅಲ್ಲಿರುವ ಸ್ಮಾರಕ ಬಗ್ಗೆ ಗೊತ್ತಾಗಬೇಕಾಗಿದೆ. ಆದ್ದರಿಂದ ಈಗ ಇರುವ ತಡೆಯಾಜ್ಞೆಯನ್ನು ತೆರವು ಮಾಡಿದರೆ ಅಲ್ಲಿ ಮಸೀದಿ ನಿರ್ಮಾಣ ಆಗಲಿದ್ದು,ಇದರಿಂದ ಐತಿಹಾಸಿಕ ಸ್ಮಾರಕವೊಂದರ ಸಂರಕ್ಷಣೆ ಅಸಾಧ್ಯ ಎಂದು ವಾದಿಸಿದರು.
ವಿಹೆಚ್ಪಿ ಪರ ವಕೀಲರು, ನಮ್ಮ ಅರ್ಜಿದಾರರು ಸಲ್ಲಿಸಿರುವ ಅರ್ಜಿಯು ವಕ್ಫ್ ಟ್ರಿಬ್ಯುನಲ್ ವ್ಯಾಪ್ತಿಗೆ ಬರುವುದಿಲ್ಲ. ವಕ್ಫ್ ಆಸ್ತಿ ಹೌದೋ, ಅಲ್ಲವೋ ಎಂಬುದನ್ನು ನಾವು ಪ್ರಶ್ನಿಸಿಲ್ಲ. ಅದೊಂದು ಐತಿಹಾಸಿಕ ಸ್ಮಾರಕ ಅಥವಾ ದೇವಸ್ಥಾನವಾಗಿತ್ತು. ಹೀಗಾಗಿ ಅದರ ಸಂರಕ್ಷಣೆ ಮಾಡುವಂತೆ ನಮ್ಮ ಅರ್ಜಿದಾರರು ಹೇಳಿದ್ದಾರೆ. ಮಸೀದಿಯ ಕಟ್ಟಡ ಮಸೀದಿಯೋ ಅಥವಾ ಐತಿಹಾಸಿಕ ಸ್ಮಾರಕವೋ ಎಂಬುದನ್ನು ವಕ್ಫ್ ಟ್ರಿಬ್ಯೂನಲ್ ತೀರ್ಮಾನಿಸಲು ಆಗುವುದಿಲ್ಲ. ಹೀಗಾಗಿ ಅದನ್ನು ಸಿವಿಲ್ ಕೋರ್ಟ್ ನಿರ್ಧರಿಸಬೇಕು. ಹೀಗಾಗಿ ಆ ಜಾಗದ ಸರ್ವೆಗೆ ಆದೇಶ ಮಾಡಿದರೆ ಅಲ್ಲಿನ ಸ್ಮಾರಕ ಯಾವುದು ಎಂಬುದು ತಿಳಿಯಲಿದೆ ಎಂದು ವಿಹೆಚ್ ಪಿ ಪರ ವಕೀಲ ಚಿದಾನಂದ ಕೆದಿಲಾಯ ವಾದಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮಳಲಿ ಮಸೀದಿ ವಿವಾದ ಪ್ರಕರಣದ ವಿಚಾರಣೆಯನ್ನು ಮತ್ತೆ ಕೋರ್ಟ್ ಮುಂದೂಡಿದೆ. ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ಕೋರ್ಟ್ ನಲ್ಲಿ ವಿಚಾರಣೆ ನಡೆಯಿತು.

ಮುಚ್ಚಿದ ಕವರ್‌ನಲ್ಲಿ ಏನನ್ನು ಕಂಡುಹಿಡಿಯಿರಿ..
ಮಳಲಿ ಮಸೀದಿಯಲ್ಲಿ ನಡೆದ ತಾಂಬೂಲ ಪ್ರಶ್ನೆಯ ಬಳಿಕ ಮಂಗಳೂರಿನ ಪ್ರಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ಅವರು ಜ್ಯೋತಿಷಿಗಳಿಗೆ ವಿಶಿಷ್ಟ ರೀತಿಯಲ್ಲಿ ಸವಾಲೆಸಿದಿದ್ದರು. ಆದರೆ ಈ ಸವಾಲನ್ನು ಸ್ವೀಕರಿಸಿರುವ ನಾಲ್ವರು ನಿಖರವಾದ ಉತ್ತರ ಹೇಳಲು ಸಫಲರಾಗದೆ ಸೋತಿದ್ದಾರೆ.
ಮೇ 26ರಂದು ಬೆಳಗ್ಗೆ 11.33ಕ್ಕೆ ಏಳು ಲಕೋಟೆಗಳಲ್ಲಿ ವಿವಿಧ ದೇಶಗಳ ಕರೆನ್ಸಿ, ಕಾಗದಗಳು, ಬರವಣಿಗೆ ಬರೆದಿಟ್ಟ ಪೇಪರ್ ಅನ್ನು ಸೀಲ್ ಮಾಡಿ ಇಟ್ಟಿದ್ದಾರೆ. ಈ ಸವಾಲನ್ನು ಸ್ವೀಕರಿಸುವವರು ಏಳು ಲಕೋಟೆಗಳಲ್ಲಿ ಆರು ಕವರ್ ಗಳನ್ನು ಆಯ್ಕೆ ಮಾಡಿ ಅದರಲ್ಲಿ ಐದಕ್ಕೆ ನಿಖರವಾದ ಉತ್ತರ ಹೇಳಿದರೆ ಅವರಿಗೆ ಒಂದು ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದರು. ಸರಿ ಉತ್ತರವನ್ನು ತಮ್ಮ ವಾಟ್ಸ್ಆಯಪ್ ನಂಬರ್ ಹಾಗೂ ಇಮೈಲ್ ಗೆ ಕಳುಹಿಸಬಹುದು ಎಂದಿದ್ದರು.

ಹೊಸ ಹೊಸ ಆಯಾಮ ಹುಟ್ಟುಹಾಕಿದ ತಾಂಬೂಲ ಪ್ರಶ್ನೆ
ಮಳಲಿಯಲ್ಲಿನ ಮಂದಿರ -ಮಸೀದಿ ವಿವಾದದ ತಾಂಬೂಲ ಪ್ರಶ್ನೆಯು ಹೊಸ ಹೊಸ ಆಯಾಮವನ್ನು ಹುಟ್ಟುಹಾಕುತ್ತಿದೆ. ಇದೀಗ ಮಂಗಳೂರಿನ ಖ್ಯಾತ ವಿಚಾರವಾದಿ ನರೇಂದ್ರ ನಾಯಕ್ ಅವರು ತಾಂಬೂಲ ಪ್ರಶ್ನೆಯ ಹಿನ್ನೆಲೆಯಲ್ಲಿ ಜೋತಿಷ್ಯಕ್ಕೆ ಸವಾಲೆಸೆದಿದ್ದಾರೆ. ಅವರು ಶುಕ್ರವಾರ ಬೆಳಗ್ಗೆ 11.33 ಗಂಟೆಗೆ ಏಳು ಲಕೋಟೆಗಳನ್ನು ಸೀಲ್ ಮಾಡಿ ಇಟ್ಟಿದ್ದಾರೆ. ಅದರಲ್ಲಿ ಕರೆನ್ಸಿ, ಕಾಗದಗಳನ್ನು ಇಟ್ಟಿದ್ದಾರೆ. ಸವಾಲು ಸ್ವೀಕರಿಸುವವರು ಏಳು ಲಕೋಟೆಗಳಲ್ಲಿ ಆರು ಕವರ್ ಗಳನ್ನು ಆಯ್ಕೆ ಮಾಡಿ ಅದರಲ್ಲಿ ಐದಕ್ಕೆ ನಿಖರವಾದ ಉತ್ತರ ಹೇಳಿದ 50 ಮಂದಿಗೆ ತಲಾ ಒಂದು ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದಾರೆ.
ಈ ಹಿಂದೆಯೇ ನರೇಂದ್ರ ನಾಯಕ್ ರವರು ಹೇಳಿರುವಂತೆ ಇಂದು ಪ್ರೆಸ್ ಕ್ಲಬ್ ನಲ್ಲಿ ಪತ್ರಕರ್ತರ ಸಮ್ಮುಖದಲ್ಲಿ ಕವರ್ ಅನ್ನು ತೆರೆದಿದ್ದಾರೆ. ಇದರಲ್ಲಿ ಮೊದಲನೆಯದ್ದು ಖಾಲಿ ಕವರ್, 2ನೆಯ ಕವರ್ ನಲ್ಲಿ ಪೇಪರ್ ನೊಳಗಿಟ್ಟ ಒಂದು ಡಾಲರ್, 3ನೆಯ ಕವರ್ 10 ದಿರಮ್, 4ನೆಯ ಕವರ್ ನಲ್ಲಿ ನೇಪಾಳದ 20 ರೂ., 5ನೆಯ ಕವರ್ ನಲ್ಲಿ ಸಿಂಗಾಪುರದ 10 ಡಾಲರ್ ದ ಬಿಲ್, 6ನೆಯದ್ದರಲ್ಲಿ Astrology Flopped Miserably Once ಎಂದು ಬರೆಯಲಾಗಿತ್ತು. 7ನೆಯರದ್ದರಲ್ಲಿ 10 ರೂ. ನ ಇಂಡಿಯಾದ ಕರೆನ್ಸಿ ಇಡಲಾಗಿತ್ತು.

ಆರು ಖಾಲಿ ಲಕೋಟೆಗಳು ಎಂದು ಉತ್ತರ ನೀಡಿದ ಓರ್ವರು
ಈ ಸವಾಲನ್ನು ಸ್ವೀಕರಿಸಿರುವ ನಾಲ್ವರು ಉತ್ತರ ನೀಡಲು ಯತ್ನಿಸಿದ್ದಾರೆ. ಆದರೆ ನಾಲ್ವರು ನಿಖರವಾದ ಉತ್ತರ ನೀಡಲು ಸಫಲರಾಗಿಲ್ಲ. ಈ ನಾಲ್ಕು ಉತ್ತರದಲ್ಲಿ ಒಂದು ಕೇಳಿರುವ ಪ್ರಶ್ನೆಗೆ ಹೊರತಾಗಿರುವುದರಿಂದ ಮೂರನ್ನು ಮಾತ್ರ ಪರಿಗಣಿಸಲಾಗಿದೆ. ಇದರಲ್ಲಿ ಓರ್ವರು ಆರು ಖಾಲಿ ಲಕೋಟೆಗಳು ಎಂದು ಉತ್ತರಿಸಿದ್ದಾರೆ. ಮತ್ತೋರ್ವರು ಎಲ್ಲವೂ ಖಾಲಿ ಲಕೋಟೆಗಳು ಎಂದಿದ್ದಾರೆ. ಮತ್ತೊಬ್ಬರು ವಿವಿಧ ಲಕೋಟೆಗಳಲ್ಲಿ 500 ರೂ. ನೋಟು, ವೀಳ್ಯ, ಹೂ, ಕುಂಕುಮ- ಭಸ್ಮ, ಗಾಂಧಿ ಫೋಟೊ, ದೈವದ ಪೈಯಿಂಟಿಂಗ್ ಫೋಟೋ ಎಂದು ಉತ್ತರಿಸಿದ್ದಾರೆ. ಈ ಮೂಲಕ ಎಲ್ಲಾ ಉತ್ತರಗಳು ತಪ್ಪಾಗಿದೆ. ಈ ಮೂಲಕ ಜೋತಿಷ್ಯ ಸುಳ್ಳು ಎಂಬ ತಮ್ಮ ವಾದವೇ ಗೆದ್ದಿದೆ ಎಂದು ನರೇಂದ್ರ ನಾಯಕ್ ಅವರು ಹೇಳಿದ್ದಾರೆ.

ಜ್ಯೋತಿಷ್ಯಕ್ಕೆ ಸವಾಲೊಡ್ಡಿದ್ದ ಫ್ರೊ.ನರೇಂದ್ರ ನಾಯಕ್
ಈ ಮೂಲಕ ವಿಚಾರವಾದಿ ಫ್ರೊ.ನರೇಂದ್ರ ನಾಯಕ್ ಜ್ಯೋತಿಷ್ಯಕ್ಕೆ ಸವಾಲೊಡ್ಡಿದ್ದಾರೆ. ತಾವು ಸೀಲ್ ಮಾಡಿರುವ ಕವರ್ ನಲ್ಲಿ ಏನಿದೆ ಎಂದು ಹೇಳಿದ 50 ಮಂದಿಗೆ ತಲಾ 1ಲಕ್ಷ ರೂ. ಬಹುಮಾನ ಘೋಷಿಸಿದ್ದರು. ತಾಂಬೂಲ ಪ್ರಶ್ನೆಯ ಹಿನ್ನೆಲೆಯಲ್ಲಿ ಜೋತಿಷ್ಯಕ್ಕೆ ಸವಾಲೆಸೆದಿದ್ದರು. ಅವರು ಮೇ 26ರಂದು ಬೆಳಗ್ಗೆ 11.33 ಗಂಟೆಗೆ ಏಳು ಲಕೋಟೆಗಳನ್ನು ಸೀಲ್ ಮಾಡಿ ಇಟ್ಟಿದ್ದರು. ಅದರಲ್ಲಿ ಕರೆನ್ಸಿ, ಕಾಗದಗಳನ್ನು ಇಟ್ಟಿದ್ದರು. ಸವಾಲು ಸ್ವೀಕರಿಸುವವರು ಏಳು ಲಕೋಟೆಗಳಲ್ಲಿ ಆರು ಕವರ್ ಗಳನ್ನು ಆಯ್ಕೆ ಮಾಡಿ ಅದರಲ್ಲಿ ಐದಕ್ಕೆ ನಿಖರವಾದ ಉತ್ತರ ಹೇಳಿದ 50 ಮಂದಿಗೆ ತಲಾ ಒಂದು ಲಕ್ಷ ರೂ. ಬಹುಮಾನ ಘೋಷಣೆ ಮಾಡಿದ್ದರು.
(ಒನ್ಇಂಡಿಯಾ ಸುದ್ದಿ)











Click it and Unblock the Notifications