'ಚಿಲ್ಲರೆ' ವ್ಯಾಜ್ಯಕ್ಕೆ ನೊಂದು ನದಿಗೆ ಹಾರಿದ ಕಂಡಕ್ಟರ್
ದಕ್ಷಿಣ ಕನ್ನಡ, ಸೆಪ್ಟೆಂಬರ್ 26: ಯುವತಿಯೊಬ್ಬಳು ಚಿಲ್ಲರೆ ಹಣದ ವಿಚಾರವಾಗಿ ಮಾತಿಗೆ ಮಾತು ಬೆಳೆಸಿದ ಕಾರಣಕ್ಕೆ ಬೇಸರ ಮಾಡಿಕೊಂಡ ಕೆಎಸ್ ಆರ್ ಟಿಸಿ ಬಸ್ ಕಂಡಕ್ಟರ್ ಚಲಿಸುತ್ತಿದ್ದ ಬಸ್ ನಿಂದಲೇ ಕುಮಾರಧಾರ ನದಿಗೆ ಜಿಗಿದು, ಕೊಚ್ಚಿಹೋದ ಘಟನೆ ಭಾನುವಾರ ಸಂಭವಿಸಿದೆ.
ಮಂಗಳೂರಿನ ಗುರುಪುರ ಕೈ ಕಂಬದ ನಲವತ್ತು ವರ್ಷ ವಯಸ್ಸಿನ ದೇವದಾಸ್ ನದಿಗೆ ಹಾರಿದ ಕಂಡಕ್ಟರ್. ಭಾನುವಾರ ಸಂಜೆವರೆಗೆ ಅವರಿಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಮಂಗಳೂರಿನ ಒಂದನೇ ಘಟಕದ ಬಸ್ ನಲ್ಲಿ ದೇವದಾಸ್ ಕಂಡಕ್ಟರ್ ಆಗಿದ್ದರು. ಬೆಳಗ್ಗೆ ಹೊರಟು ಉಪ್ಪಿನಂಗಡಿ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯ ಕಡೆ ಸಂಚರಿಸುತ್ತಿತ್ತು.[ಬೆಂಗಳೂರಿನ ಗಿರಿನಗರದ ಭರತ್ ನೇತ್ರಾವತಿ ಪಾಲು]

ಮಂಗಳೂರಿನಲ್ಲಿ ಬಸ್ ಹತ್ತಿದ ಯುವತಿ ಟಿಕೆಟ್ ಪಡೆಯುವ ಸಂದರ್ಭದಲ್ಲೇ ಗೊಂದಲ ಉಂಟಾಗಿತ್ತು. ಆ ಯುವತಿ ಟಿಕೆಟ್ ಖರೀದಿಗಾಗಿ 500 ರು. ನೀಡಿದ್ದಾಗಿ ಹೇಳಿದರೆ, ದೇವದಾಸ್ 100 ರುಪಾಯಿ ಕೊಟ್ಟಿದ್ದೀರಿ ಎಂದಿದ್ದಾರೆ. ಈ ವಿಚಾರವಾಗಿ ಯುವತಿ ಮತ್ತು ಕಂಡಕ್ಟರ್ ಮಧ್ಯೆ ಮಾತಿನ ಚಕಮಕಿ ನಡೆದಿತ್ತು.
ಈ ಘಟನೆಯನ್ನು ದೇವದಾಸ್ ಕಡಬ ಪೊಲೀಸ್ ಠಾಣೆಯಲ್ಲಿ ವಿವರಿಸಿದ್ದರು. ಯುವತಿ ಅಲ್ಲಿಯೇ ಬಸ್ ಇಳಿದು, ಹೋಗಿದ್ದರು. ಬಳಿಕ ಬಸ್ ಸುಬ್ರಹ್ಮಣ್ಯದತ್ತ ತೆರಳಿತ್ತು. ಕುಮಾರಧಾರ ನದಿ ಸೇತುವೆ ಮೇಲೆ ಬಸ್ ಹೋಗುತ್ತಿದ್ದಾಗ ಕಂಡಕ್ಟರ್ ಸೀಟಿ ಊದಿದ್ದಾರೆ. ಬಸ್ ನಿಧಾನವಾಗುತ್ತದಲೇ ನೇರವಾಗಿ ನೀರಿಗೆ ಧುಮುಕಿದ ದೇವದಾಸ್ ನೀರುಪಾಲಾದರು.[ಹತ್ಯೆ ರಹಸ್ಯ: ಇಸ್ಮಾಯಿಲ್ ರನ್ನು ಕೊಂದಿದ್ದು ಸುಪಾರಿ ಕಿಲ್ಲರ್ಸ್!]
ಡೆತ್‌ನೋಟ್: ಕಡಬದಿಂದ ಸುಬ್ರಹ್ಮಣ್ಯದತ್ತ ಬಸ್ ಚಲಿಸುತ್ತಿದ್ದಾಗಲೇ ಕಂಡಕ್ಟರ್ ಆತ್ಮಹತ್ಯೆ ಮಾಡಿಕೊಳ್ಳಲು ಯೊಚಿಸಿರಬೇಕು ಎಂದು ಶಂಕಿಸಲಾಗಿದೆ. ಟಿಕೆಟ್ ಎಂಟ್ರಿಯ ಲಾಗ್‌ಶೀಟ್‌ನಲ್ಲಿ ಡೆತ್‌ನೋಟ್ ಬರೆದಿಟ್ಟಿದ್ದಾರೆ. 'ಮರ್ಯಾದೆ ಹೋಗಿ ಬದುಕುವುದಕ್ಕಿಂತ ಸಾಯುವುದೇ ಲೇಸು, ನನ್ನ ಸಹಪಾಠಿಗಳಿಗೆ ಕೊನೆ ಸಮಸ್ಕಾರ' ಎಂದು ಅವರು ಬರೆದಿರುವ ಡೆತ್ ನೋಟ್ ಅನ್ನು ಸುಬ್ರಹ್ಮಣ್ಯ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications