ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿದ್ದಾ - ಕರ್ನಾಟಕ ಕಲ್ಚರಲ್ ಫೌಂಡೇಶನಿನಿಂದ ಅಪಘಾತಕ್ಕೀಡಾದ ವ್ಯಕ್ತಿಗೆ ನೆರವು

|
Google Oneindia Kannada News

ಜಿದ್ದಾ, ಆಗಸ್ಟ್ 16: ಫಕ್ರುದ್ದೀನ್ ಅಬ್ದುಲ್ಲಾ ಮಂಬಾಡಿಯವರು ಕೆಲವು ದಿನಗಳ ಹಿಂದೆ ರಸ್ತೆ ಅಫಘಾತಕ್ಕೀಡಾಗಿದ್ದು ಇವರಿಗೆ ಕರ್ನಾಟಕ ಕಲ್ಚರಲ್ ಫೌಂಡೇಶನ್ ವತಿಯಿಂದ 50,000ರೂ. ದಾನ ನೀಡಲಾಯಿತ್ತು. ಇವರು ಕೆಸಿಎಫ್ ಜಿದ್ದಾ ಝೋನ್ ಅಧೀನದಲ್ಲಿರುವ ಮಕ್ಕತುಲ್-ಮುಕರ್ರಂ ಸೆಕ್ಟರ್ ಸದಸ್ಯರಾಗಿದ್ದಾರೆ.

ಕೆ.ಸಿ.ಎಫ್ ಅನಿವಾಸಿ ಕನ್ನಡಿಗ ಸದಸ್ಯರಿಗಾಗಿ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಅಧೀನದಲ್ಲಿ ಮೆಂಬರ್ಸ್ ರಿಲೀಫ್ ಫಂಡ್(ಎಂಆರ್'ಎಫ್) ರಚಿಸಲಾಗಿದೆ. ಇದರ ವತಿಯಿಂದ ಜಿದ್ದಾ ಝೋನಲ್ ನೇತಾರರು ಫಕ್ರುದ್ದೀನ್ ಅಬ್ದುಲ್ಲಾರವರಿಗೆ ಜಿದ್ದಾದಲ್ಲಿ ಎಂ .ಆರ್. ಎಫ್ ಫಂಡ್ ನಿಂದ 50,000 ರೂಪಾಯಿಯನ್ನು ನೀಡಿದರು.

KCF of Saudi Srabia shares helping hands to accident victim at Saudi

ಇದಕ್ಕೂ ಮುಂಚೆ ಜಿದ್ದಾ ಝೋನಲ್ ಅಧ್ಯಕ್ಷರ ನೇತ್ರತ್ವದಲ್ಲಿ ಕೆಲವು ಕಾರ್ಯಕರ್ತರು ಅವರನ್ನು ಭೇಟಿಯಾಗಿದ್ದಲ್ಲದೆ, ಪ್ರಾಥಮಿಕ ಹಂತವಾಗಿ ಒಂದು ಸಾವಿರ ರಿಯಾಲ್ ನೀಡಿ ಅವರಿಗೆ ಸಾಂತ್ವನ ಹೇಳಿದ್ದಾರೆ.

ಫಕ್ರುದ್ದೀನ್ ಅಬ್ದುಲ್ಲಾ ಊರಿಗೆ ಹೋಗಲು ಉದ್ದೇಶಿಸಿದ್ದು ಕಂಪನಿಯಿಂದ ಅದಕ್ಕೆ ಅನುಮತಿ ಸಿಗಲು ಕೆಲವು ವಿಳಂಬಗಳು ಸಂಭವಿಸುತ್ತಿತ್ತು. ಈ ವಿಷಯ ತಿಳಿದು ಕೆಸಿಎಫ್ ಕಾರ್ಯಕರ್ತರು ಈ ವಿಷಯದಲ್ಲಿ ಕಂಪನಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಊರಿಗೆ ಹೋಗಲು ಕಂಪನಿಯಿಂದ ಸಮ್ಮತಿ ದೊರಕುವಂತೆ ಮಾಡಿದ್ದಾರೆ.

English summary
Karnataka Cultural Federation of Saudi Arabia shares a helping hand to accident victim at Saudi Arabia. The Federation has helped Abdulla with an amount of Rs.50,000 here on Aug 16. It is said that Abdula wanted to return back to Mangaluru but the company was not permitting him, but KCF has taken initiative to bring him back to the town.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X