ದೀಪಕ್ ಕೊಲೆ: ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದೇನು?
Recommended Video

ಬೆಂಗಳೂರು, ಜನವರಿ 04: ಮಂಗಳೂರಿನ ಕಾಟಿಪಳ್ಯದಲ್ಲಿ ನಿನ್ನೆ (ಜನವರಿ 3) ನಡೆದ ದೀಪಕ್ ರಾವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಪ್ರತಿಕ್ರಿಯಿಸಿದ ರಾಮಲಿಂಗಾ ರೆಡ್ಡಿ, "ದೀಪಕ್ ರಾವ್ ಕೊಲೆ ದುಃಖಕರ ಸಂಗತಿಯಾಗಿದ್ದು, ಈ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ. ಸರ್ಕಾರ ಯಾರ ಪರವು ಇಲ್ಲ ವಿರೋಧವು ಇಲ್ಲ ತಪ್ಪು ಮಾಡಿದರನ್ನು ಶಿಕ್ಷಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಮಂಗಳೂರಲ್ಲಿ ದೀಪಕ್ ಹತ್ಯೆ: ಚಿತ್ರಗಳಲ್ಲಿ ಪ್ರಕ್ಷುಬ್ಧ ಕರಾವಳಿ

ಪರಿಹಾರದ ಬಗ್ಗೆ ಸಿಎಂ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಜತೆ ಚರ್ಚಿಸಿ ಪರಿಹಾರ ಕೊಡುವುದಾಗಿ ಹೇಳಿದರು. ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಶವಯಾತ್ರೆಗೆ ಪೊಲೀಸರು ಅವಕಾಶ ನೀಡಿಲ್ಲವೆಂದು ಸಮಜಾಯಿಸಿ ನೀಡಿ ಮಾಧ್ಯಮಗಳ ಮುಂದೆ ಹೆಚ್ಚಿಗೆ ಮಾತನಾಡದೆ ನಡೆದರು.
ಅತ್ತ ಮಂಗಳೂರಿನ ಕಾಟಿಪಾಳ್ಯದಲ್ಲಿ ಸ್ಥಳಕ್ಕೆ ಗೃಹ ಸಚಿವರು ಬರಬೇಕು ಕನಿಷ್ಟ 25 ಲಕ್ಷ ರು. ಪರಿಹಾರ ಚೆಕ್ ನೀಡಬೇಕು ಎಂದು ಕಾಟಿಪಳ್ಯದ ಗ್ರಾಮಸ್ಥರು ಸೇರಿದಂತೆ ಅಕ್ಕ-ಪಕ್ಕದ ಸಾರ್ವಜನಿಕರು ಬಿಗಿಪಟ್ಟು ಹಿಡಿದಿದ್ದಾರೆ.












Click it and Unblock the Notifications