ಖುರೇಷಿ ಮೇಲೆ ಪೊಲೀಸ್ ದೌರ್ಜನ್ಯ: ಸಿಐಡಿ ತನಿಖೆಗೆ ಆದೇಶ
ಮಂಗಳೂರು, ಎಪ್ರಿಲ್ 17 : ಅಹಮ್ಮದ್ ಖುರೇಷಿಗೆ ಪೊಲೀಸ್ ದೌರ್ಜನ್ಯ ಆರೋಪ ಹಿನ್ನೆಲೆಯಲ್ಲಿ ಈ ಪ್ರಕರಣದ ತನಿಖೆಯನ್ನು ಸೋಮವಾರ ಕರ್ನಾಟಕ ಸರಕಾರ ಸಿಐಡಿಗೆ ವಹಿಸಿದೆ.
ಪ್ರಕಾಶ್ ಪೂಜಾರಿ ಕೊಲೆಯತ್ನ ಪ್ರಕರಣದ ಆರೋಪಿಯಾಗಿರುವ ಮಹಮ್ಮದ್ ಖುರೇಷಿಯನ್ನ ಮಾರ್ಚ್ 27ರಂದು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈ ವೇಳೆ ಸಿಸಿಬಿ ಪೊಲೀಸರು ದೌರ್ಜನ್ಯವೆಸಗಿದ್ದರು. ಹೀಗಾಗಿ ಖುರೇಷಿ ಕಿಡ್ನಿ ವೈಫಲ್ಯವಾಗಿದೆ ಎಂಬ ಆರೋಪ ಕೇಳಿಬಂದಿತ್ತು. [ಮಂಗಳೂರು: ವಾಟ್ಸಾಪಲ್ಲಿ ಅಹ್ಮದ್ ಖುರೇಶಿ ಸಾವಿನ ವದಂತಿ]

ಇದೇ ವೇಳೆ ಅಹ್ಮದ್ ಖುರೇಷಿ ಪ್ರಕರಣದಲ್ಲಿ ಪೊಲೀಸ್ ಇಲಾಖೆ ತಾರತಮ್ಯವೆಸಗಿದೆ ಎಂದು ಆರೋಪಿಸಿರುವ ಮುಸ್ಲಿಂ ಸಂಘಟನೆಗಳ ಒಕ್ಕೂಟ ಎಪ್ರಿಲ್ 28 ರಂದು 'ಮಂಗಳೂರು ಚಲೋ' ಕರೆ ನೀಡಿದೆ.
ನಗರದ ಜಮೀಯತುಲ್ ಫಲಾಹ್ ಕಚೇರಿಯಲ್ಲಿ 'ಜಸ್ಟೀಸ್ ಫಾರ್ ಖುರೇಷಿ' ವತಿಯಿಂದ ಸೋಮವಾರ ನಡೆದ ಸಭೆಯಲ್ಲಿ 'ಮಂಗಳೂರು ಚಲೋ' ನಡೆಸಲು ನಿರ್ಧರಿಸಲಾಯಿತು.












Click it and Unblock the Notifications