ಕಾರ್ಕಳ: ಭ್ರಷ್ಟ ಕಂಟ್ರಾಕ್ಟ್ ರನ್ನು ಕಪ್ಪುಪಟ್ಟಿಗೆ ಸೇರಿಸಲು ಆಗ್ರಹ
ಕಾರ್ಕಳ, ಅಕ್ಟೋಬರ್,29 : ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಕಳಪೆ ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರ ಚಂದ್ರಶೇಖರ ಕುಂದಾಪುರ ಇವರನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಬೇಕೆಂದು ಸ್ಥಾಯೀ ಸಮಿತಿ ಅಧ್ಯಕ್ಷೆ ಪ್ರಯಾ ಪ್ರಸಾದ್ ಅಕ್ಟೋಬರ್ 28ರ ಬುಧವಾರದಂದು ಸಲ್ಲಿಸಿದ ನಿರ್ಣಯಕ್ಕೆ ಪುರಸಭಾ ಸಾಮಾನ್ಯ ಸಭೆಯಲ್ಲಿ ಪ್ರಬಲ ಆಕ್ಷೇಪಗಳು ವ್ಯಕ್ತವಾದವು.
ನಗರದ ಪುರಸಭಾ ಕಾರ್ಯಲಯದ ಸದಾನಂದ ಕಾಮತ್ ಸಭಾಂಗಣದಲ್ಲಿ ಆರಂಭಗೊಂಡ ಸಾಮಾನ್ಯ ಸಭೆಯಲ್ಲಿ ಮಾಜಿ ಪುರಸಭಾ ಅಧ್ಯಕ್ಷ ಅಕ್ಷೇಪ ವ್ಯಕ್ತಪಡಿಸಿ 'ಕೇವಲ ಓರ್ವ ಕಂಟ್ರಾಕ್ಟದಾರರನ್ನು ಗುರಿಪಡಿಸಿ ನಿರ್ಣಯ ಕೈಗೊಳ್ಳುವುದು ಸಭೆಗೆ ಶೋಭೆ ತರುವುದಿಲ್ಲ. ಕಳಪೆ ಕಾಮಗಾರಿಗೆ ಕಂಟ್ರಾಕ್ಟ್ ದಾರರ ಜೊತೆ ಇಂಜಿನಿಯರ್ ಗಳು ಹೊಣೆಗಾರರಾಗಿರುತ್ತಾರೆ' ಎಂದು ಸಮಜಾಯಿಷಿ ನೀಡಿದರು.
ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣದ ಶುಚಿತ್ವದ ಕಾಮಗಾರಿಯ ಕಂಟ್ರಾಕ್ಟ್ ದಾರರಿಗೆ ವಾರ್ಷಿಕವಾಗಿ ಸುಮಾರು 4 ಲಕ್ಷ ರೂ.ನ್ನು ಪುರಸಭೆಯು ನೀಡುತ್ತಿದೆ. ಆದರೆ ನಿರ್ವಹಣೆ ಪರಿಪೂರ್ಣವಾಗಿಲ್ಲ. ಇದರ ಬಗ್ಗೆ ಕಳೆದ ಎರಡು ಸಭೆಗಳಲ್ಲಿ ಪ್ರಸ್ತಾಪಿಸಿದ್ದೇನೆ. ಇಷ್ಟಾದರೂ ಕಂಟ್ರಾಕ್ಟರ್ ದಾರ ಅನಂತಕೃಷ್ಣ ಶೆಟ್ಟಿ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ನಗರದಲ್ಲಿ ಹಲವೆಡೆ ಪೈಪ್ ಲೈನ್ ಸೋರಿಕೆಯಾಗುತ್ತಿದೆ. ಕುಡಿಯುವ ನೀರು ಪೋಲಾಗುತ್ತಿದೆ. ಅವರನ್ನು ಕೂಡಾ ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಬೇಕೆಂದು ಸಭೆಯಲ್ಲಿ ಒತ್ತಾಯಿಸಿದರು.[ಸರ್ಕಾರಿ ಕಚೇರಿಗಳಲ್ಲಿ ಲಂಚ ಕೇಳಿದರೆ ಕರೆ ಮಾಡಿ]

ಈಡೇರಿಸಬೇಕಾದ ಬೇಡಿಕೆಗಳು ಯಾವುವು?
ಅನೈತಿಕ ಕೂಪ :
ಇಂದಿರಾಗಾಂಧಿ ವಾಣಿಜ್ಯ ಸಂಕೀರ್ಣ ಅನೈತಿಕ ಕೂಪವಾಗಿ ಮಾರ್ಪಡುತ್ತಿದ್ದು, ಪುಂಡ ಪೋಕರಿಗಳ ಹಾವಳಿ ಎಲ್ಲೆ ಮೀರಿದೆ. ಇದಕ್ಕೆ ಕಡಿವಾಣ ಹಾಕುವ ಅಗತ್ಯ ಇದೆ ಎಂದು ಅಶ್ವಕ್ ಅಹಮದ್ ತಿಳಿಸಿದ್ದು, ಇದಕ್ಕೆ ಕಡಿವಾಣ ಹಾಕಲು ಸಿಸಿ ಕ್ಯಾಮರ ಅಳವಡಿಸುವ ಅಗತ್ಯ ಇದೆ ಎಂದರು.
ದಾರಿದೀಪ ಇಲ್ಲದೇ ಬರೀ ಕತ್ತಲು :
ಆನೆಕರೆಯಿಂದ ಕೆರೆಬಸದಿಯ ವರೆಗೆ ಬೀದಿ ದೀಪ ಉರಿಯದೇ ರಾತ್ರಿ ವೇಳೆಗೆ ಬರೀ ಕತ್ತಲು ಆವರಿಸಿದೆ. ಇದನ್ನು ದುರಸ್ಥಿ ಪಡಿಸುವಂತೆ ಇಲಾಖಾಧಿಕಾರಿಯವರಿಗೂ ತಿಳಿಸಿದರೂ ಯಾವುದೇ ಸ್ವಂದನೆ ಸಿಗಲಿಲ್ಲ. ಆದಷ್ಟು ಬೇಗ ಈ ಬೇಡಿಕೆ ಈಡೇರಿಸಬೇಕೆಂದು ಪ್ರತಿಪಕ್ಷ ಸದಸ್ಯ ಪ್ರಕಾಶ್ ರಾವ್ ವಿನಂತಿಸಿದರು.[ರಾಜ್ಯದ ವಿದ್ಯುತ್ ಸಮಸ್ಯೆ ಏಕೆ, ನಿವಾರಣೆ ಹೇಗೆ?]
ಸ್ವಚ್ಚತೆಗಾಗಿ ಹೊರಗುತ್ತಿಗೆ :
ಘನತ್ಯಾಜ್ಯ ವಸ್ತು ವಿಲೇವಾರಿ ಮತ್ತು ದೈನಂದಿನ ಸ್ವಚ್ಚತಾ ಕೆಲಸ-ಕಾರ್ಯಗಳಿಗಾಗಿ ಬೇಕಾಗುವ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ಸೇವೆಯನ್ನು ಪಡೆದುಕೊಳ್ಳಲು ಪುರಸಭಾ ನಿಧಿಯಲ್ಲಿ ತಯಾರಿಸಿದ ವಾರ್ಷಿಕ ಅಂದಾಜು ಪಟ್ಟಿ ಮೊತ್ತ . 13.75 ಲಕ್ಷಕ್ಕೆ ಆಡಳಿತಾತ್ಮಕ ಮಂಜೂರಾತಿ ಕೋರಲಾಯಿತು.
ಬಾವಿಯ ಕೆಸರು ತೆಗೆಯಲು ಒತ್ತಾಯ :
ಹಿರಿಯಂಗಡಿ ಪ್ರದೇಶದ ಬಾವಿಯಲ್ಲಿನ ಕೆಸರು ಮಣ್ಣನ್ನು ತೆಗೆದು ಬಾವಿಯನ್ನು ಸ್ವಚ್ಚಗೊಳಿಸುವ ಕಾಮಗಾರಿಯನ್ನು ರತ್ನವರ್ಮ ಅಜ್ರಿ 52,200 ರೂ ವಹಿಸಿಕೊಂಡಿದ್ದಾರೆ. ಬಾವಿಯ ಕೆಸರು ತೆಗೆಯುವ ಕಾರ್ಯವಾಗಿಲ್ಲ. ಆದಷ್ಟು ಬೇಗ ಈ ಕಾರ್ಯವನ್ನು ಮಾಡಿ ಮುಗಿಸಬೇಕು ಎಂದು ಪ್ರತಿಪಕ್ಷ ಸದಸ್ಯರಾದ ಪ್ರಕಾಶ್ ರಾವ್, ಪಾರ್ಶ್ವನಾಥ ವರ್ಮ, ಯೋಗೀಶ್ ದೇವಾಡಿಗ ನೇರ ಆರೋಪ ಗೈದರು.
ಕುಡಿಯುವ ನೀರಿನ ಬಗ್ಗೆ ನಿಗಾವಹಿಸಬೇಕು
ಮಳೆ ಪ್ರಮಾಣ ಈ ವರ್ಷ ಕ್ಷೀಣಿಸಿರುವ ಹಿನ್ನಲೆಯಲ್ಲಿ ಬೇಸಿಗೆ ಆರಂಭವಾಗುವ ಹೊತ್ತಿನಲ್ಲಿ ಕುಡಿಯುವ ನೀರಿಗೆ ತೊಂದರೆ ಎದುರಾಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪುರಸಭೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರನ್ನು ಕಟ್ಟಡ ನಿರ್ಮಾಣ ಸೇರಿದಂತೆ ಇನ್ನಿತರೆ ಯಾವುದೇ ಕಾಮಗಾರಿ ಬಳಕೆಗೆ ಉಪಯೋಗಿಸುವುದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಹಿರಿಯ ಸದಸ್ಯ ಎನ್.ಆರ್. ಸುಭೀತ್ ಕುಮಾರ್ ಹೇಳಿದರು.[ಮಂಗಳೂರು ನಗರಕ್ಕೆ 24/7 ಕುಡಿಯುವ ನೀರು]
ಕಂಪ್ಯೂಟರೀಕರಣ :
ಮುಖ್ಯಾಧಿಕಾರಿ ರಾಯಪ್ಪ ಮಾತನಾಡಿ ನೀರಿನ ಸಂಗ್ರಹಣೆಗೆ ಕಂಪ್ಯೂಟರೀಕರಣ ಜಾರಿಗೊಳಿಸುವ ಜೊತೆಗೆ ಮುಂಡ್ಲಿ ಡ್ಯಾಂನಿಂದ ರಾಮಸಮುದ್ರಕ್ಕೆ ದಿನವೊಂದಕ್ಕೆ ಸಂಗ್ರಹಣೆಯಾಗುವ ನೀರು. ಅಲ್ಲಿಂದ ವಾಣಿಜ್ಯ ವ್ಯವಹಾರ ಹಾಗೂ ಮನೆಗಳಿಗೆ ನೀಡಲಾಗುತ್ತಿರುವ ನೀರಿನ ಪ್ರಮಾಣ, ಅದರಿಂದ ಸಂಗ್ರಹವಾಗುತ್ತಿರುವ ಹಣ ಇದರ ಎಲ್ಲಾ ಮಾಹಿತಿಯನ್ನು ಗಣನೆಗೆ ತೆಗೆದುಕೊಂಡು ಕುಡಿಯುವ ನೀರು ಪೋಲಾಗುತ್ತಿರುವುದಕ್ಕೆ ಕಡಿವಾಣ ಹಾಕಲಿದ್ದೇವೆ ಎಂದರು.












Click it and Unblock the Notifications