ಕಡಬ ತಾಲೂಕು ಉದ್ಘಾಟನೆ 5 ನೇ ಬಾರಿಗೆ ಮುಂದೂಡಿಕೆ

ಮಂಗಳೂರು, ನವೆಂಬರ್. 27 : ದಕ್ಷಿಣ ಕನ್ನಡ ಜಿಲ್ಲೆಯ ದಶಕಗಳ ಬೇಡಿಕೆಯಾದ ನೂತನ ಕಡಬ ಹಾಗೂ ಮೂಡಬಿದ್ರೆ ತಾಲೂಕುಗಳ ಉದ್ಘಾಟನೆ ಮತ್ತೆ ಮುಂದೂಡಲಾಗಿದೆ.

ಕನ್ನಡ ಚಿತ್ರರಂಗದ ಹಿರಿಯ ನಟ, ರೆಬೆಲ್ ಸ್ಟಾರ್ ಅಂಬರೀಶ್ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ನಡೆಯುತ್ತಿರುವುದರಿಂದ ಭಾನುವಾರದಂದು ನಡೆಯಬೇಕಾಗಿದ್ದ ಕಡಬ ತಾಲೂಕು ಸಮಾರಂಭ ಹಾಗೂ ಎಲ್ಲಾ ಕಾರ್ಯಕ್ರಮಗಳನ್ನು ಮುಂದೂಡಲಾಯಿತು.

ಕಡಬ ತಾಲೂಕು ಉದ್ಘಾಟನಾ ಸಮಾರಂಭವನ್ನು ವಿವಿಧ ಕಾರಣಗಳಿಗಾಗಿ ಈ ಹಿಂದೆ ನಾಲ್ಕು ಬಾರಿ ಮುಂದೂಡಲಾಗಿತ್ತು. ಈ ಬಾರಿಯಾದರೂ ಕಡಬ ತಾಲೂಕಾಗಿ ಯಾವುದೇ ತೊಡಕುಗಳಿಲ್ಲದೇ ಉದ್ಘಾಟನೆಗೊಳ್ಳಲಿದೆ ಎಂದು ಜನರು ಭಾವಿಸಿದ್ದರು. ನವೆಂಬರ್ 25 ರಂದು ಉದ್ಘಾಟನೆಯ ದಿನಾಂಕ ನಿಗದಿಯಾಗಿತ್ತು. ಕಂದಾಯ ಸಚಿವ ಆರ್ ವಿ ದೇಶಪಾಂಡೆ ಕೂಡ ನಿನ್ನೆ (ನ.26) ಮಂಗಳೂರು ತಲುಪಿದ್ದರು.

Kadaba taluk inauguration postponed for 5 the times

ಆದರೆ ಅಂಬರೀಶ್ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆ ಘೋಷಣೆಯಾದ ಪರಿಣಾಮ ಉದ್ಘಾಟನಾ ಕಾರ್ಯಕ್ರಮ ಮುಂದೂಡಲಾಯಿತು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ನಾಲ್ಕು ಬಾರಿ ಸ್ಥಳೀಯ ಮುಖಂಡರು, ಉಸ್ತುವಾರಿ, ರಾಜ್ಯಮಟ್ಟದ ಸಚಿವರಿಂದ ಉದ್ಘಾಟಿಸಲು ದಿನ ನಿಗದಿಯಾಗಿತ್ತು. ಸಚಿವರ ಡೇಟ್ ಸಿಗದೆ ರದ್ದಾಗಿತ್ತು. ಈ ಬಾರಿಯಾದರೂ ಕಡಬ ತಾಲೂಕು ಉದ್ಘಾಟನೆ ಗೊಳ್ಳಲಿದೆ ಎಂದು ಜನರು ಆಶಾಭಾವ ಹೊಂದಿದ್ದರು.

ಆದರೆ ಉದ್ಘಾಟನಾ ಕಾರ್ಯಕ್ರಮ ಮೂಂದೂಡಲಾದ ಕಾರಣ ಜನರಲ್ಲಿ ಬೇಸರ ತರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+