ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜನರ ಮನಸೂರೆಗೊಂಡ ಮಂಗಳೂರು ವೈನ್ ಮೇಳ

|
Google Oneindia Kannada News

ಮಂಗಳೂರು, ಡಿಸೆಂಬರ್ 10: 'ಅಂತಾರಾಷ್ಟ್ರೀಯ ದ್ರಾಕ್ಷಾರಸ ಉತ್ಸವ - 2017'ಕ್ಕೆ ಮಂಗಳೂರಿನ ಕದ್ರಿ ಪಾರ್ಕ್ ನಲ್ಲಿ ಚಾಲನೆ ದೊರೆತಿದೆ.

ಆಹಾರ ಸಂಸ್ಕೃತಿ: ವೈನ್ ಕುಡಿದು ವೈನಾಗಿರಿ!ಆಹಾರ ಸಂಸ್ಕೃತಿ: ವೈನ್ ಕುಡಿದು ವೈನಾಗಿರಿ!

'ಕರ್ನಾಟಕ ದ್ರಾಕ್ಷಾರಸ ಮಂಡಳಿ' ಮತ್ತು 'ತೋಟಗಾರಿಕೆ ಇಲಾಖೆ' ಸಹಯೋಗದಲ್ಲಿ ನಡೆಯುತ್ತಿರುವ ಈ ವೈನ್ ಮೇಳದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಸುಮಾರು 15 ವೈನರಿ ಸಂಸ್ಥೆಗಳು ಭಾಗವಹಿಸಿದ್ದು ಸುಮಾರು 150ಕ್ಕೂ ಹೆಚ್ಚು ಬ್ರಾಂಡ್‍ಗಳನ್ನು ಉತ್ಸವದಲ್ಲಿ ಪ್ರದರ್ಶಿಸಲಾಗಿದೆ.

ವೈನ್ ಕುಡಿಯಿರಿ ಮಧುಮೇಹದಿಂದ ದೂರವಿರಿ!ವೈನ್ ಕುಡಿಯಿರಿ ಮಧುಮೇಹದಿಂದ ದೂರವಿರಿ!

ಯುರೋಪ್ ನ ವೈನ್ ಗಳು ಸೇರಿದಂತೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಚಿಲಿ, ಅಮೆರಿಕಾ ಮೊದಲಾದ ದೇಶಗಳ ವೈನ್‍ಗಳನ್ನು ಇಲ್ಲಿ ಪ್ರದರ್ಶನ ಮತ್ತು ಮಾರಾಟ ನಡೆಸಲಾಗುತ್ತಿದೆ.

ವಿವಿಧ ವೈನ್ ಮಾರಾಟ

ವಿವಿಧ ವೈನ್ ಮಾರಾಟ

ಉತ್ಸವದಲ್ಲಿ ವಿವಿಧ ಕಂಪೆನಿಗಳ 10ಕ್ಕೂ ಹೆಚ್ಚಿನ ಮಳಿಗೆಗಳಲ್ಲಿ ಬೇರೆ ಬೇರೆ ಬ್ರ್ಯಾಂಡ್‍ಗಳ ವೈನ್‍ಗಳನ್ನು ಮಾರಾಟಕ್ಕಿಡಲಾಗಿದೆ. ಗ್ರಾಹಕರಿಗೆ ವೈನ್ ಗಳನ್ನು ಟೇಸ್ಟ್ ನೋಡುವ ಅವಕಾಶಗಳನ್ನು ಕೆಲವು ಮಳಿಗೆಗಳಲ್ಲಿ ನೀಡಲಾಗಿದ್ದು ವೈನ್ ಪ್ರೀಯರು ವೈನ್ ಖರೀದಿಗೆ ಮುಗಿಬೀಳುತ್ತಿದ್ದಾರೆ.

ವೈನ್ ಬಗ್ಗೆ ಅರಿವು

ವೈನ್ ಬಗ್ಗೆ ಅರಿವು

ರಾಜ್ಯದಲ್ಲಿ ವೈನ್ ಬಳಕೆಯನ್ನು ಉತ್ತೇಜಿಸುವ ಹಾಗೂ ವೈನ್ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ .

ಜನರಿಂದ ಉತ್ತಮ ಸ್ಪಂದನೆ

ಜನರಿಂದ ಉತ್ತಮ ಸ್ಪಂದನೆ

ಕಳೆದ ಬಾರಿ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ವೈನ್ ಮೇಳಕ್ಕೆ ದೊರೆತ ಉತ್ತಮ ಸ್ಪಂದನೆಯ ಹಿನ್ನೆಲೆಯಲ್ಲಿ ಈ ಬಾರಿಯೂ ಮೇಳ ಆಯೋಜಿಸಲಾಗಿದೆ.

10ಕ್ಕೂ ಹೆಚ್ಚು ಬ್ರ್ಯಾಂಡ್ ವೈನ್ ಮಾರಾಟ

10ಕ್ಕೂ ಹೆಚ್ಚು ಬ್ರ್ಯಾಂಡ್ ವೈನ್ ಮಾರಾಟ

ಈ ವೈನ್ ಉತ್ಸವದಲ್ಲಿ ಮಳಿಗೆಯನ್ನು ಹಾಕಿದ್ದ ಬೆಂಗಳೂರಿನ ಗೌತಮ್ ಎಂಬವರು ಸ್ಪೇನ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಫ್ರಾನ್ಸ್ ಸೇರಿದಂತೆ ಹತ್ತು ದೇಶಗಳ ವಿವಿಧ ಬ್ರ್ಯಾಂಡ್‍ಗಳ ವೈನ್‍ಗಳನ್ನು ಮಾರಾಟಕ್ಕೆ ಇರಿಸಿದ್ದಾರೆ.

English summary
International Wine Festival – 2017 organised in Kadri Park. Which is conducted under the joint auspices of Karnataka Wine Board and Horticulture Department. The festival will continue till Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X