ಆಳ್ವಾಸ್ ನಲ್ಲಿ ಫೆ.8 ರಿಂದ ಆಹಾರ ವಿಜ್ಞಾನ ಕುರಿತು ಅಂತಾರಾಷ್ಟ್ರೀಯ ವಿಚಾರ ಸಂಕಿರಣ

ಮಂಗಳೂರು, ಫೆಬ್ರವರಿ 06: ಮೂಡಬಿದಿರೆಯ ಆಳ್ವಾಸ್ ನಲ್ಲಿ ಫೆಬ್ರವರಿ 8 ಮತ್ತು 9ರಂದು ಆಹಾರ ವಿಜ್ಞಾನ ಕುರಿತ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ.

ಆಳ್ವಾಸ್ ಕಾಲೇಜಿನ ಆಹಾರ ವಿಜ್ಞಾನ ಮತ್ತು ಪೋಷಣೆ ಪದವಿ ಮತ್ತು ಸ್ನಾತಕೋತ್ತರ ಪದವಿ ವಿಭಾಗಗಳ ಆಶ್ರಯದಲ್ಲಿ ಆಹಾರ ಭದ್ರತೆ ಕಾರ್ಯವಿಧಾನಗಳು, ಪೋಷಕಾಂಶಗಳು-ಅಗತ್ಯ, ಪ್ರಸ್ತುತತೆ, ಸವಾಲುಗಳು ಹಾಗೂ ಆಯಾಮಗಳು' ಕುರಿತಾಗಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿದ ವಿಚಾರ ಸಂಕಿರಣದ ಮುಖ್ಯ ಸಂಯೋಜಕಿ, ಆಳ್ವಾಸ್ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗ ಮುಖ್ಯಸ್ಥೆ ಡಾ.ಅರ್ಚನಾ ಪ್ರಭಾತ್, ವಿಚಾರ ಸಂಕಿರಣದ ಉದ್ಘಾಟನ ಸಮಾರಂಭದಲ್ಲಿ ಶ್ರೀಲಂಕಾದ ಅಮರ್ ರಾಜ್ ಸಿಂಗ್ ಆಶಯ ಭಾಷಣ ಮಾಡಲಿದ್ದಾರೆ.

International conference on food science in Alvas

ಡಾ. ಎಂ. ಮೋಹನ ಆಳ್ವರು ಅಧ್ಯಕ್ಷತೆ ವಹಿಸಲಿದ್ದು, ಮಂಗಳೂರು ವಿ.ವಿ. ವೈಸ್ ಚಾನ್ಸೆಲರ್ ಪ್ರೊ. ಈಶ್ವರ್ ಪಿ., ಜಿ.ಪಂ. ಸಿಇಒ ಡಾ.ಸೆಲ್ವಮಣಿ, ಆಳ್ವಾಸ್ ನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ ಆಳ್ವ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೋ. ಕುರಿಯನ್ ಭಾಗವಹಿಸಲಿದ್ದಾರೆ ಎಂದರು.

ಫೆ.8ರಂದು ಥಾಯ್ಲೆಂಡ್ ನ ಡಾ.ಸೂಟ್ಟಾವಟ್ ಬೆಂಜಕುಲ್ (ಸಾಗರೋತ್ಪನ್ನ ಸಂಸ್ಕರಣೆಯಲ್ಲಿ ಉಷ್ಣರಹಿತ ತಾಂತ್ರಿಕತೆ), ತಮಿಳ್ನಾಡು ಪೆರಿಯಾರ್ ವಿ.ವಿ.ಯ ಡಾ. ಪಿ. ನಝ್ನಿ (ಆರೋಗ್ಯದಾಯಕ ಸಿರಿಧಾನ್ಯಗಳು), ಬಾಂಗ್ಲಾ ದೇಶದ ಆಹಾರ ಸಂರಕ್ಷಣ ಪ್ರಾಧಿಕಾರದ ಸದಸ್ಯ ಡಾ.ಇಕ್ಬಾಲ್ ರವೂಫ್ ಮಾಮುನ್ (ಬಾಂಗ್ಲಾದೇಶದಲ್ಲಿ ಆಹಾರ ಸಂರಕ್ಷಣೆಗಾಗಿರುವ ಕಾನೂನುಗಳು, ಗುಣಮಟ್ಟ ಮಾಪನಗಳು), ಕೋಡೆಕ್ಸ್ ಇಂಡಿಯಾದ ಅಧ್ಯಕ್ಷ ಸಂಜಯ್ ದವೆ (ಆಹಾರ ಉದ್ಯಮ ಪ್ರವರ್ಧನೆಯಲ್ಲಿ ಭಾರತೀಯ ಆಹಾರ ನಿಬಂಧನೆಗಳು), ಹಿಮಾಲಯ ಡ್ರಗ್ ಕಂಪೆನಿಯ ಪೂರ್ಣಿಮಾ ಶಂಕರ್ (ನ್ಯೂಟ್ರಾಸ್ಯೂಟಿಕಲ್ಸ್ ನಲ್ಲಿ ಸಿಹಿ-ಇತ್ತೀಚಿನ ಬೆಳವಣಿಗೆಗಳು) ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಫೆ.9ರಂದು ಶ್ರೀಲಂಕಾದ ಪೋಷಕಾಂಶ ತಜ್ಞೆ ನಿಲುಷಿ ಮುದಲಿಗೆ (ಅಸುರಕ್ಷಿತ ಆಹಾರ-ರೋಗಗಳಿಗೆ ಚಾಲಕ), ಮುಂಬಯಿಯ ಇಂಟೆಗ್ರೇಟೆಡ್ ಫುಡ್ ಪಾರ್ಕ್‍ನ ಸಿಇಓ ಸಂಜಯ್ ಮುಲ್ಪಾನಿ (ಭಾರತದಲ್ಲಿ ಆಹಾರ ಬಳಕೆ ಮತ್ತು ಸಂಸ್ಕರಣೆಯಲ್ಲಿ ಮಾದರಿ ಬದಲಾವಣೆಗಳು) ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಡಾ.ಅರ್ಚನಾ ಪ್ರಭಾತ್ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+