ಮೋದಿ ದಂಪತಿ ಒಂದು ಮಾಡುವವರೆಗೂ ವಿಶ್ರಮಿಸುವುದಿಲ್ಲ

ಮಂಗಳೂರು, ಮೇ 3: ಜಶೋದಾಬೆನ್ ಎಂಬುವವರ ಜತೆ ತನಗೆ 16ನೇ ವಯಸ್ಸಿಗೇ ಮದುವೆಯಾಗಿದೆ ಎಂದು ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅಧಿಕೃತವಾಗಿ ಒಪ್ಪಿಕೊಂಡು, ಆ ಬಗ್ಗೆ ಎರಡೂ ಕಡೆಯ ಮೈದುನರು ಸಮಜಾಯಿಶಿ ಕೊಟ್ಟ ಮೇಲೆ ಇದೀಗ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು 'ನೋಡ್ತಿರಿ! ಜಶೋದಾಬೆನ್ ಮತ್ತು ಮೋದಿ ಅವರನ್ನು ಒಂದು ಮಾಡುವವರೆಗೂ ನಾನು ವಿಶ್ರಮಿಸುವುದಿಲ್ಲ' ಎಂದು ಪಟ್ಟಾಂಗ ಹಾಕಿ ಕುಳಿತುಬಿಟ್ಟಿದ್ದಾರೆ.

ಹಾಲಿ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಗೆಲ್ಲುವ ಅಭ್ಯರ್ಥಿ ಎಂದು ಪರಿಗಣಿತರಾಗಿರುವ ಕೆಪಿಸಿಸಿ ಮಾಜಿ ಅಧ್ಯಕ್ಷ ಬಿ ಜನಾರ್ದನ ಪೂಜಾರಿ ಅವರು ಚುನಾವಣಾ ಫಲಿತಾಂಶಕ್ಕಾಗಿ ಎದುರು ನೋಡುತ್ತಾ ಮನೆಯಲ್ಲಿ ವಿಶ್ರಮಿಸಿಕೊಳ್ಳುತ್ತಿರುವಾಗ 'ಜಶೋದಾಬೆನ್ ಅವರು ಮತ್ತೆ ಮೋದಿ ಜತೆ ಸೇರುವವರೆಗೂ ತಾನು ಸುಮ್ಮನಿರುವುದಿಲ್ಲ' ಎಂದು ಗುಟುರು ಹಾಕಿದ್ದಾರೆ.

'ಚುನಾವಣೆಯಲ್ಲಿ ನಾನು ಗೆಲ್ಲುತ್ತೇನೋ ಅಥವಾ ಸೋಲುತ್ತೇನೋ ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಒಬ್ಬ ದೊಡ್ಡ ಮಹಿಳೆಯ ಪರವಾಗಿ ತಾನು ಹೋರಾಡುವುದಂತೂ ನಿಜ' ಎಂದು ಘೋಷಿಸಿದ್ದಾರೆ.

ಮೋದಿ ಪ್ರಧಾನಿಯಾದ್ರೂ ನನ್ನ ಸವಾಲು ಮುಂದುವರಿಯುತ್ತದೆ:

i-will-reunite-modi-jashodaben-janardana-poojary

ಮೋದಿ ಮುಂದೆ ಪ್ರಧಾನಿಯೇ ಆದರೂ ತಾನು ಮಾತ್ರ ಸುಮ್ಮನಾಗುವುದಿಲ್ಲ. ಅವರ ಮತ್ತೆ ತಮ್ಮ ಪತ್ನಿ ಜಶೋದಾಬೆನ್ ಅವರನ್ನು ಸ್ವೀಕರಿಸುವಂತೆ ಮಾಡುತ್ತೇನೆ' ಎಂದೂ ಗಂಡ-ಹೆಂಡಿರ ಮಧ್ಯೆ ಪೂಜಾರಿ ತಮ್ಮ ಶಪಥವನ್ನು ಹರಿಯಬಿಟ್ಟಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ಮೋದಿ ಕೊನೆಗೂ ಜಶೋದಾಬೆನ್ ಅವರನ್ನು ತಮ್ಮ ಪತ್ನಿ ಎಂದು ಅಧಿಕೃತವಾಗಿ ಘೋಷಿಸಿಕೊಂಡಿದ್ದಾರೆ. ಮುಂದೊಂದು ದಿನ ಅವರನ್ನು ಪತ್ನಿಯಾಗಿ ತಮ್ಮ ಮನೆಯೊಳಕ್ಕೆ ಸೇರಿಸಿಕೊಳ್ಳುವುದು ಖಚಿತ/ಉಚಿತ ಎಂದು ಪೂಜಾರಿ ಭವಿಷ್ಯ ನುಡಿದಿದ್ದಾರೆ.

ಮೋದಿ ಅವರಿಂದ ದೂರವಾದ ಮೇಲೆ ಜಶೋದಾಬೆನ್ ಅವರು ತುಂಬಾ ಸಂಕಷ್ಟಪಟ್ಟಿರಬೇಕು. ಆದರೆ ಅದನ್ನು ಅರ್ಥ ಮಾಡಿಕೊಳ್ಳಲು ಮೋದಿ ವಿಫಲವಾಗಿದ್ದಾರೆ ಎಂದು ಪೂಜಾರಿ ಸುದ್ದಿಗಾರರಿಗೆ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+