ಧರ್ಮಸ್ಥಳದ ಬಗ್ಗೆ ಹಿಂದೊಮ್ಮೆ ಅಪಚಾರ ಮಾಡಿದ್ದೇನೆ: ಕುಮಾರಸ್ವಾಮಿ

ಮಂಗಳೂರು, ಫೆಬ್ರವರಿ 09: 'ಧರ್ಮಸ್ಥಳದ ವಿಷಯದಲ್ಲಿ ಹಿಂದೊಮ್ಮೆ ನಾನು ಅಪಚಾರ ಮಾಡಿದ್ದೇನೆ' ಎಂದು ಕುಮಾರಸ್ವಾಮಿ ಅವರು ಆಣೆ ಪ್ರಮಾಣದ ವಿಷಯ ನೆನಪಿಸಿಕೊಂಡು ಆತ್ಮನಿವೇದನೆ ಮಾಡಿಕೊಂಡರು.

ಧರ್ಮಸ್ಥಳದ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಜನಪ್ರತಿನಿಧಿಗಳು ಕೆಲವೊಂದು ರಾಜಕೀಯ ವಿಚಾರ ಸಂಬಂಧಿಸಿ ಅಪಚಾರ ನಡೆಸಿದ್ದೇವೆ ಎಂದು ತೆರೆದ ಮನಸ್ಸಿನಿಂದ ಮತನಾಡಿದರು.

ಅಪಚಾರ ನಡೆಸಿದರೆ ಯಾವ ಸ್ಥಾನದಲ್ಲಿದ್ದರೂ ಮಂಜುನಾಥ ಸ್ವಾಮಿ ಬಿಡುವುದಿಲ್ಲ, ಮಂಜುನಾಥ ಸ್ವಾಮಿಯ ಜತೆ ಯಾರೂ ಚೆಲ್ಲಾಟವಾಡಬಾರದು ಎಂದು ನನಗೂ ಅನುಭವವಾಗಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

I did mistake once in Dharmasthala Manjunatha Swamy matter: Kumaraswamy

ಸಿಎಂ ಕುಮಾರಸ್ವಾಮಿ ಹಾಗೂ ಸಚಿವರುಗಳಿಗೆ ಸನ್ಮಾನ ಮಾಡಿದ ಪೇಜಾವರ ಶ್ರೀಗಳು ಮಾತನಾಡಿ, ಮುಖ್ಯಮಂತ್ರಿ ಆದ ನಂತರ ಮೊದಲ ಬಾರಿಗೆ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಪೇಜಾವರ ಶ್ರೀಗಳು ಕುಮಾರಸ್ವಾಮಿ ಮಂಡಿಸಿದ ಬಜೆಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮಧ್ಯಮ ಬಡ ವರ್ಗಕ್ಕೆ ಕುಮಾರಸ್ವಾಮಿ ಉತ್ತಮ ಕೊಡುಗೆ ನೀಡಿದ್ದಾರೆ, ರಾಜ್ಯದ ಅಭವೃದ್ಧಿ ಚೆನ್ನಾಗಿ ನಡೆಸಲಿ, ಆಧ್ಯಾತ್ಮಿಕ ಹಾಗೂ ಕೃಷಿ ಕ್ಷೇತ್ರಕ್ಕೂ ಸಿಎಂ ಹೆಚ್ಚಿನ ಅನುದಾನ ನೀಡಿದ್ದಾರೆ ಎಂದು ಪೇಜಾವರ ಅವರು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+