ಕೊಲೆಯಾದ ಆರೆಸ್ಸೆಸ್ ಕಾರ್ಯಕರ್ತನ ಮನೆಗೆ ಪರಮೇಶ್ವರ್ ಭೇಟಿ
ಮಂಗಳೂರಿನ ಕೊಣಾಜೆಯ ಪೊಲೀಸ್ ಠಾಣಾ ಬಳಿಯಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಒಡಹುಟ್ಟಿದ ತಂಗಿಯೇ ಸುಪಾರಿ ನೀಡಿ ಆರ್.ಎಸ್.ಎಸ್ ಕಾರ್ಯಕರ್ತ ಕಾರ್ತಿಕ್‍ರಾಜ್ ರನ್ನು ಕೊಲೆ ಮಾಡಿಸಿದ್ದರು.
ಮಂಗಳೂರು, ಮೇ 2: ತಂಗಿಯ ಷಡ್ಯಂತ್ರದಿಂದ ಕೊಲೆಯಾದ ಆರ್.ಎಸ್.ಎಸ್ ಕಾರ್ಯಕರ್ತ ಕಾರ್ತಿಕ್ ರಾಜ್ ಮನೆಗೆ ಗೃಹಸಚಿವ ಡಾ. ಜಿ. ಪರಮೇಶ್ವರ್ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.
ಮಂಗಳೂರಿನ ಕೊಣಾಜೆಯ ಪೊಲೀಸ್ ಠಾಣಾ ಬಳಿಯಲ್ಲಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಒಡಹುಟ್ಟಿದ ತಂಗಿಯೇ ಸುಪಾರಿ ನೀಡಿ ಕಾರ್ತಿಕ್‍ರಾಜ್ ರನ್ನು ಕೊಲೆ ಮಾಡಿಸಿದ್ದರು.[ಆರೆಸ್ಸೆಸ್ ಕಾರ್ಯಕರ್ತ ಕಾರ್ತಿಕ್ ರಾಜ್ ಹಂತಕರ ಬಂಧನ]

ಮಂಗಳವಾರ ಮಧ್ಯಾಹ್ನದಂದು ಗೃಹ ಸಚಿವ ಪರಮೇಶ್ವರ್ ಅವರು ಕೊಣಾಜೆ ಪಜೀರಿನ ನವಗ್ರಾಮದ ಮೃತ ಕಾರ್ತಿಕ್‍ರಾಜ್ ಮನೆಗೆ ಭೇಟಿ ನೀಡಿದರು. ಮನೆಯಲ್ಲಿದ್ದ ಕಾರ್ತಿಕ್ ತಂದೆ ಉಮೇಶ್ ಮತ್ತು ತಾಯಿ ರವಿತಾ ಅವರಿಗೆ ಪರಮೇಶ್ವರ್ ಈ ಸಂದರ್ಭ ಸಾಂತ್ವನ ಹೇಳಿದರು.
ನಡೆಯಬಾರದ ಘಟನೆ ನಡೆದುಹೋಗಿದೆ ಧೈರ್ಯದಿಂದಿರುವಂತೆ ಹೇಳಿದರು. ಸರಕಾರದಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ನೀಡುವ ಭರವಸೆಯನ್ನು ನೀಡಿದರು. ಮನೆಯೊಳಗೇ ಇದ್ದ ಹಂತಕಿ ಕಾವ್ಯ ಮತ್ತು ಆಕೆಯ ಗೆಳೆಯರಿಬ್ಬರನ್ನು ಬಂಧಿಸಿದ ಸಿಸಿಬಿ ಪೊಲೀಸರ ಕಾರ್ಯವನ್ನು ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.[ಆರೆಸ್ಸೆಸ್ ಕಾರ್ಯಕರ್ತ ಕಾರ್ತಿಕ್ ರಾಜ್ ಕೊಲೆಗೆ ತಂಗಿಯಿಂದಲೇ ಸುಪಾರಿ!]
ವಿಧಾನ ಪರಿಷತ್ ಸಚೇತಕ ಐವನ್ ಡಿಸೋಜಾ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಮಾಜಿ ತಾ.ಪಂ ಸದಸ್ಯ ಉಮರ್ ಪಜೀರ್, ಪಜೀರು ಗ್ರಾ.ಪಂ ಅಧ್ಯಕ್ಷ ಸೀತಾರಾಮ ಶೆಟ್ಟಿ, ಮುಖಂಡರಾದ ಗಫೂರ್ ಈ ಸಂದರ್ಭದಲ್ಲಿ ಗೃಹ ಸಚಿವರ ಜತೆಗಿದ್ದರು.












Click it and Unblock the Notifications