ಸಿಎಂ ಕುಮಾರಸ್ವಾಮಿ ಸುಬ್ರಹ್ಮಣ್ಯನಿಗೆ ಚಿನ್ನದ ರಥ ನೀಡುತ್ತಿರುವುದೇಕೆ?

ಮಂಗಳೂರು, ಏಪ್ರಿಲ್ 29:ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ನೂತನ ಚಿನ್ನದ ರಥ ಅರ್ಪಿಸಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮುಂದಾಗಿದ್ದಾರೆ. 2006 ರಲ್ಲಿ ಕುಮಾರಸ್ವಾಮಿ ರಥ ಸಮರ್ಪಣೆಗೆ ಯೋಚಿಸಿದ್ದರು ಎಂದು ಹೇಳಲಾಗಿದ್ದು, ಈಗ ದಿಢೀರನೇ ಚಿನ್ನದ ರಥ ಸಮರ್ಪಣೆಗೆ ವೇಗ ಕಲ್ಪಿಸಲಾಗಿದೆ. ಈ ಬೆಳವಣಿಗೆ ರಾಜಕೀಯ ಕ್ಷೇತ್ರದಲ್ಲಿ ಚರ್ಚೆಗೆ ಕಾರಣವಾಗಿದೆ.

ಮುಖ್ಯಮಂತ್ರಿಯ ಗಾದಿಗೆ ಅಡೆತಡೆಯಾಗದ ರೀತಿಯಲ್ಲಿ ಹಾಗೂ ಸಮಸ್ಯೆಗಳು ಬಾರದಂತೆ ಜ್ಯೋತಿಷಿಗಳ ಸಲಹೆ ಮೇರೆಗೆ ಶೀಘ್ರ ಚಿನ್ನದ ರಥ ಅರ್ಪಿಸಲು ಮುಖ್ಯಮಂತ್ರಿ ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಜ್ಯೋತಿಷಿಗಳ ಸಲಹೆಯಂತೆ ಸಿಎಂ ರಥ ನಿರ್ಮಾಣಕ್ಕೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಕುಮಾರಸ್ವಾಮಿ ಮೊದಲ ಬಾರಿಗೆ ಸಿಎಂ ಆದಾಗ ದೇವರಿಗೆ ಸ್ವರ್ಣ ರಥ ನಿರ್ಮಿಸಿ ಅರ್ಪಿಸುವ ಉದ್ದೇಶ ಹೊಂದಿದ್ದರು ಎಂದು ಹೇಳಲಾಗಿದೆ.

HD Kumaraswamy to offer golden chariot to Kukke Subramanya

ಈಗ ಜ್ಯೋತಿಷಿಗಳ ಸಲಹೆಯಂತೆ ನೂತನ ಚಿನ್ನದ ರಥ ನಿರ್ಮಾಣ ಕೆಲಸ ಚುರುಕುಗೊಳಿಸಲಾಗಿದ್ದು, ಈ ಸಂಬಂಧ ಬೆಂಗಳೂರಿನಲ್ಲಿ ಮುಜರಾಯಿ ಇಲಾಖೆಯ ಉನ್ನತ ಅಧಿಕಾರಿಗಳ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಸಭೆ ನಡೆದಿದೆ.

ಜ್ಯೋತಿಷಿಯೊಬ್ಬರು ಚಿನ್ನದ ರಥ ನಿರ್ಮಾಣ ಪೂರ್ಣಗೊಳ್ಳದಿದ್ದಲ್ಲಿ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರಿಗೆ ಸಮಸ್ಯೆ ಉಂಟು. ಒಂದು ವೇಳೆ ಚಿನ್ನದ ರಥ ಸಮರ್ಪಣೆಯಾದರೆ ಎಲ್ಲಾ ಅಡೆತಡೆಗಳೂ ನಿವಾರಣೆಯಾಗುತ್ತವೆ. ಸರ್ಕಾರಕ್ಕೂ ಧಕ್ಕೆ ಬಾರದು, ಮಂಡ್ಯದಲ್ಲಿ ಪುತ್ರ ನಿಖಿಲ್ ಗೆಲ್ಲಬಹುದು ಎಂದು ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ. ರಥ ನಿರ್ಮಾಣಕ್ಕೆ 240 ಕೆ.ಜಿ.ಚಿನ್ನ ಅಗತ್ಯವಿದ್ದು, ನೂತನ ರಥ ಸುಮಾರು 80ರಿಂದ 85 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+