ಅರಣ್ಯಾಧಿಕಾರಿಗೆ "ಲೋ.. ನನ್ ಮಗ" ಎಂಬ ಶಬ್ಧ ಬಳಕೆ ಆರೋಪ: BJP ಶಾಸಕ ಹರೀಶ್ ಪೂಂಜಾ ವಿರುದ್ಧ FIR ದಾಖಲು
ಮಂಗಳೂರು, ಅಕ್ಟೋಬರ್, 18: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಅವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಯಾಕೆ ಗೊತ್ತಾ ಮಾಹಿತಿ ಇಲ್ಲಿದೆ ಗಮನಿಸಿ.
ಅರಣ್ಯಾಧಿಕಾರಿ ಜಯಪ್ರಕಾಶ್ ಕೆಕೆ ದೂರಿನ ಹಿನ್ನೆಲೆ ಶಾಸಕ ಹರೀಶ್ ಪೂಂಜಾ ಅವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 8ರಂದು ಚಾರ್ಮಾಡಿ ಅರಣ್ಯದಲ್ಲಿ ಮನೆ ನಿರ್ಮಾಣ-ತೆರವು ಸಂಬಂಧ ಅರಣ್ಯಾಧಿಕಾರಿಗಳು-ಶಾಸಕರ ನಡುವೆ ಭಾರೀ ಜಟಾಪಟಿ ನಡೆದಿತ್ತು. ಈ ವೇಳೆ ಅರಣ್ಯಾಧಿಕಾರಿ ಜಯಪ್ರಕಾಶ್‌ಗೆ (ಲೋಫರ್ ನನ್ ಮಗ) ಅವಾಚ್ಯ ಶಬ್ಧಗಳಿಂದ ಶಾಸಕರು ನಿಂದಿಸಿದ್ದರು ಎಂದು ದೂರು ನೀಡಲಾಗಿತ್ತು.

ನಂತರ ಬೇಸರಗೊಂಡ ಅರಣ್ಯಾಧಿಕಾರಿ ಶಾಸಕ ಹಾಗೂ ಬೆಂಬಲಿಗರ ವಿರುದ್ಧ ದೂರು ದಾಖಲಿಸಿದ್ದರು. ಐಪಿಸಿ 1860 (ಯು/ಎಸ್-143, 353, 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 149) ಅಡಿ ಪ್ರಕರಣ ದಾಖಲು ಆಗಿತ್ತು. ಸದ್ಯ ಹರೀಶ್ ಪೂಂಜಾ ಅವರು ಬಂಧನದ ಭೀತಿಯಲ್ಲಿದ್ದಾರೆ ಎನ್ನಲಾಗಿದೆ.
ಸಿಎಂ ಇಬ್ರಾಹಿಂ ಕಾಂಗ್ರೆಸ್‌ಗೆ ಬಂದ್ರೆ ಸ್ವಾಗತಿಸುವೆ
ಜೆಡಿಎಸ್ ರಾಜ್ಯಾಧ್ಯಕ್ಷ ಆಗಿರುವ ಸಿಎಂ ಇಬ್ರಾಹಿಂ ಅವರು ಕಾಂಗ್ರೆಸ್ ಪಕ್ಷಕ್ಕೆ ಬಂದರೆ ಸ್ವಾಗತಿಸುವೆ ಎಂದು ಸಚಿವ ಜಮೀರ್ ಅಹಮ್ಮದ್ ಖಾನ್ ಚಿತ್ರದುರ್ಗದಲ್ಲಿ ತಿಳಿಸಿದರು.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಇಬ್ರಾಹಿಂ ಕಾಂಗ್ರೆಸ್‌ಗೆ ಬೆಂಬಲದ ವಿಚಾರದ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು ಅದು ಅವರ ಪಕ್ಷದ ವಿಚಾರ. ಜೆಡಿಎಸ್ ಬಗ್ಗೆ ಕೇಳಿದರೆ ಹೇಗೆ ಹೇಳೋದು. ಆದರೆ ಸಿಎಂ ಇಬ್ರಾಹಿಂ ಕಾಂಗ್ರೆಸ್‌ಗೆ ಬಂದರೆ ಸ್ವಾಗತ ಮಾಡುತ್ತೇನೆ, NDAಗೆ ಬೆಂಬಲ ಅಂತಾ ಹೇಳಿದ್ದಾರೆ ಅದನ್ನು ಸ್ವಾಗತ ಮಾಡುವೆ ಎಂದರು.
ಐಟಿ ದಾಳಿ ವೇಳೆ ಸಿಕ್ಕಿರುವ ಕೋಟಿ ಕೋಟಿ ಹಣ ವಿಚಾರದಲ್ಲಿ ಟೀಕಿಸುವ ಬಿಜೆಪಿಯವರಿಗೆ ಹೇಳೋಕೆ ಬೇರೆ ಏನಿದೆ. ಅವರ ಅವಧಿಯಲ್ಲಿ ಕಲೆಕ್ಷನ್ ಮಾಡೋದು ಅಭ್ಯಾಸ ಆಗಿದೆ. ಆರೋಪವನ್ನು ಸಾಬೀತು ಮಾಡ್ಬೇಕಲ್ವ, ಅದನ್ನು ಸಾಬೀತು ಮಾಡದೆ ಹಿಂಗೆ ಮಾತಾಡ್ತಾರೆ ಎಂದು ಬಿಜೆಪಿ ಆರೋಪಕ್ಕೆ ಟಾಂಗ್ ಕೊಟ್ಟರು.
ಇನ್ನು ಗ್ಯಾರಂಟಿ ನೋಡಿ ಬಿಜೆಪಿಯವರಿಗೆ ಸಹಿಸಲು ಆಗುತ್ತಿಲ್ಲ. ಬಿಜೆಪಿಯವರು ಹೇಳೋದು ಅಲ್ಲ, ಅದನ್ನು ಸಾಬೀತು ಮಾಡಬೇಕು ಎಂದು ಹೇಳಿದರು.
ಸಿಎಂ ಕಲೆಕ್ಷನ್ ಮಾಸ್ಟರ್ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಚಿವರು, ಬಿಜೆಪಿಯವರಿಗೆ ಹೇಳೋಕೆ ಇನ್ನೇನಿದೆ? ಎಂದು ಪ್ರಶ್ನೆ ಹಾಕಿದರು. ಅವರ ಆಡಳಿತಾವಧಿಯಲ್ಲಿ ಕಲೆಕ್ಷನ್ ಮಾಡಿ ಅವರಿಗೆ ರೂಢಿ ಆಗಿದೆ. ಎಲ್ಲರೂ ಕೂಡ ಅವರಂತೆ ಅಂತಾ ತಿಳಿದಿದ್ದಾರೆ. ನಮ್ಮ ಉತ್ತಮ ಕೆಲಸ ನೋಡಿ ಬಿಜೆಪಿಯವರಿಗೆ ಸಹಿಸಕ್ಕೆ ಆಗುತ್ತಿಲ್ಲ ಎಂದು ಕಿಡಿಕಾರಿದರು.
ಪೊಲೀಸ್ ಕ್ಚಾಟ್ರಸ್ ವಾಸಮಾಡಲು ಯೋಗ್ಯವಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, 2015-2023ರವರೆಗೆ ಮನೆಗಳು ಘೋಷಣೆ ಆಗಿದ್ದವು. 2ಲಕ್ಷ 38 ಸಾವಿರ ಮನೆ ಘೋಷಣೆ ಮಾಡಲಾಗಿತ್ತು. ಸ್ಲಂ ಬೋರ್ಡಲ್ಲಿ 1ಲಕ್ಷ 80ಸಾವಿರದ 200ಮನೆ ಘೋಷಣೆ ಆಗಿದ್ದವು. ರಾಜೀವಗಾಂಧಿ ಯೋಜನೆಯಡಿ 50 ಸಾವಿರ ಮನೆ ಮಂಜೂರು ಮಾಡಲಾಗಿತ್ತು. ಆದರೆ ಬಿಜೆಪಿ ಅವಧಿಯಲ್ಲಿ 4 ವರ್ಷದಲ್ಲಿ ಒಂದು ಮನೆನೂ ಕೊಡುವುದಕ್ಕೆ ಆಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಎಎಚ್‌ಪಿ ಸ್ಕೀಂನಲ್ಲಿ ಒಂದು ಮನೆ ಕಟ್ಟುವುದಕ್ಕೆ 7 ಲಕ್ಷ ಖರ್ಚು ಆಗುತ್ತದೆ. ಕೇಂದ್ರ ಒಂದೂವರೆ ಲಕ್ಷ ರೂಪಾಯಿ ಕೊಡಬೇಕು. ರಾಜ್ಯ ಸರ್ಕಾರ ಜಿಎಂಗೆ 1ಲಕ್ಷ 20 ಸಾವಿರ, ಎಸ್‌ಸಿಗಳಿಗೆ 2 ಲಕ್ಷ ರೂಪಾಯಿ ಕೊಡುತ್ತಾರೆ ಎಂದರು. ಕೇಂದ್ರ ಜಿಎಸ್‌ಟಿ ಮೂಲಕ 1 ಲಕ್ಷ 30 ಸಾವಿರ ವಾಪಸ್ ಪಡೆಯುತ್ತಾರೆ. ಮುಂದೆ ಕೊಟ್ಟು ಹಿಂದಿಂದ ಕಿತ್ತುಕೊಳ್ಳುತ್ತಾರೆ. ಈಗಾಗಲೇ ಈ ವಿಚಾರವನ್ನು ನಮ್ಮ ಇಲಾಖೆ ಅಧಿಕಾರಿಗಳು ಸಿಎಂ ಹತ್ರ ಮಾತಾಡಿದ್ದಾರೆ ಎಂದರು.
ಇನ್ನು ಮುಂದೆ ಈ ಹಣ ಫಲಾನುಭವಿಗಳು ಕಟ್ಟಂಗಿಲ್ಲ. ಸರ್ಕಾರದಿಂದ ಇದನ್ನು ಕಟ್ಟುವ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸಿಎಂ ಈ ಕುರಿತು ಒಂದು ವಾರ ಸಮಯಾವಕಾಶ ಕೇಳಿದ್ದಾರೆ ಎಂದು ತಿಳಿಸಿದರು.












Click it and Unblock the Notifications