ಮಂಗಳೂರು: ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ
ಮಂಗಳೂರು, ಜೂ.24: ನಗರದ ಬೊಕ್ಕಪಟ್ಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೇ ವಿದ್ಯಾರ್ಥಿ ಸಂಘದ ವತಿಯಿಂದ ಸೋಮವಾರ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣ ಕಾರ್ಯಕ್ರಮ ನಡೆಯಿತು.
ಬೊಕ್ಕಪಟ್ಣದ ಸರಕಾರಿ ಪದವಿಪೂರ್ವ ಕಾಲೇಜು, ಸರಕಾರಿ ಪ್ರೌಢಶಾಲೆ, ಸರಕಾರಿ ಪ್ರಾಥಮಿಕ ಶಾಲೆ ಹಾಗೂ ಯು.ಬಿ.ಎಂ.ಸಿ ಶಾಲಾ ವಿದ್ಯಾರ್ಥಿಗಳಿಗೆ ಪೈ ಇಂಟರ್‌ನ್ಯಾಷನಲ್ ಮಾಲಿಕರಾದ ಅಜಿತ್ ಪೈಯವರು ಉಚಿತ ಪುಸ್ತಕಗಳನ್ನು ವಿತರಿಸಿದರು.[ಬೆಂಗಳೂರು:ರಕ್ಷಾ ಫೌಂಡೇಶನ್‌ನಿಂದ ಪುಸ್ತಕ ವಿತರಣೆ]

ಕಾಲೇಜಿನ ಪ್ರಾಂಶುಪಾಲರಾದ ಡಿ.ಶ್ಯಾಮ್ ಮೊಯಿಲಿ, ಅಜಿತ್ ಪೈ ಯವರಿಗೆ ಕೃತಜ್ಞತೆ ಅರ್ಪಿಸಿದರು. ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷರಾದ ಮೋಹನ್ ಶೆಟ್ಟಿ ,ಹಳೆವಿದ್ಯಾರ್ಥಿಸಂಘದ ಗೌರವಾಧ್ಯಕ್ಷರಾದ ಪ್ರವೀಣ್ ಕುಮಾರ್, ಮುಖ್ಯೋಪಾಧ್ಯಾಯರಾದ ರೋಸಲಿನ್ ಹಾಗೂ ಸಂಜಯ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.











Click it and Unblock the Notifications