ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಳ್ತಂಗಡಿ: ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಸಾವು

ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಅಂತ್ರಾಯಿಪಲ್ಕೆ ಗಡಾಯಿಕಲ್ಲು ಬಳಿ ಹೊಳೆಯ ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಸಾವಪ್ಪಿದ ಖೇದಕರ ಸಂಗತಿ ವರದಿಯಾಗಿದೆ. ಇನ್ನೊಬ್ಬರು ನೀರಿನಲ್ಲಿ ಮುಳುಗಿದ್ದರೂ ಅಪಾಯದಿಂದ ಪಾರಾಗಿದ್ದಾರೆ.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 11 : ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಅಂತ್ರಾಯಿಪಲ್ಕೆ ಗಡಾಯಿಕಲ್ಲು ಬಳಿ ಹೊಳೆಯ ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಸಾವಪ್ಪಿದ ಖೇದಕರ ಸಂಗತಿ ವರದಿಯಾಗಿದೆ. ಇನ್ನೊಬ್ಬರು ನೀರಿನಲ್ಲಿ ಮುಳುಗಿದ್ದರೂ ಅಪಾಯದಿಂದ ಪಾರಾಗಿದ್ದಾರೆ.

ರಹೀಮ್(30), ರಹೀಮ್ ಅವರ ಪತ್ನಿ ರುಬೀನಾ(25), ರುಬೀನಾ ಸಹೋದರರಾದ ಯಾಸ್ಮಿನ್(23), ಸುಬಾನ್(15) ಎಂಬವರು ಸ್ನಾನ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

Four members of a family from Kaup drown at Nada village,Belthangadi,

ಉಡುಪಿ ಜಿಲ್ಲೆಯ ಕಾಪು ಪಕೀರನಕಟ್ಟೆ ನಿವಾಸಿಗಳಾಗಿದ್ದು, ಕಾಜೂರು ದರ್ಗಾಕ್ಕೆ ಭೇಟಿ ನೀಡಿ ಬರುವ ಸಮಯದಲ್ಲಿ ಜಮಾಲಾಬಾದ್ ಕೋಟೆ ವೀಕ್ಷಿಸಿ ಮರಳುವಾಗ ಹೊಳೆಗೆ ಸ್ನಾನ ಮಾಡಲು ಇಳಿದಿದ್ದರು. ಇನ್ನೊಬ್ಬಾಕೆ ಮೈಮೂನಾ ಎಂಬವರು ನೀರಲ್ಲಿ ಮುಳುಗಿ ಅಸ್ವಸ್ಥ ಗೊಂಡವರು ಬೆಳ್ತಂಗಡಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
English summary
In a tragic incident, four persons from same family drowned in a pond near Nada village, Beltangady on Wednesday January 11. The deceased have been identified as Rahim (30), his wife Rubina (25), and Rubina's siblings Yasmin (23) and Suban (15), all residents of Pakeeranakatte, Kaup in Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X