ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 9.8 ಲಕ್ಷ ಗಿಡ ನೆಡಲು ಮುಂದಾದ ಅರಣ್ಯ ಇಲಾಖೆ

ಮಂಗಳೂರು, ಮೇ. 20: ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನೀರಿನ ಮೂಲಗಳು ಬರಿದಾಗುತ್ತಿವೆ. ಅಂತರ್ಜಲದ ಮಟ್ಟ ಕುಸಿದಿದ್ದು, ಎಲ್ಲೆಡೆ ನೀರಿಗಾಗಿ ಹಾಹಾಕಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾಡು ನಾಶದಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನಹರಿಸಲಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 950 ಹೆಕ್ಟೇರ್‌ ಪ್ರದೇಶದಲ್ಲಿ ಈ ವರ್ಷ ಸುಮಾರು 9.8 ಲಕ್ಷ ಗಿಡ ನೆಟ್ಟು ಬೆಳೆಸುವ ಗುರಿಯನ್ನು ಅರಣ್ಯ ಇಲಾಖೆ ಇರಿಸಿಕೊಂಡಿದೆ.

ರಸ್ತೆ ಬದಿ ಪ್ಲಾಂಟಿಂಗ್‌ ಮತ್ತು ಗ್ರೀನಿಂಗ್‌ ಅರ್ಬನ್‌ ಏರಿಯಾ ಯೋಜನೆಯಡಿ ಜಿಲ್ಲೆಯ 60 ಕಿ.ಮೀ. ವ್ಯಾಪ್ತಿಯಲ್ಲಿ ಗಿಡ ನೆಡಲಾಗುತ್ತದೆ. ಅಲ್ಲದೇ, ಈ ಬಾರಿ ರೈನ್‌ ಟ್ರೀ, ದೇವದಾರು ಗಿಡಗಳನ್ನು ನೆಡದಿರಲು ತೀರ್ಮಾನ ಮಾಡಿದೆ. ಇವು ದುರ್ಬಲ ಮರಗಳಾಗಿದ್ದು, ಗಾಳಿಗೆ ತುಂಡಾಗುತ್ತದೆ. ಇದೇ ಕಾರಣಕ್ಕೆ ಒಣ ವಲಯಗಳಲ್ಲಿ ಗೋಳಿ, ಅರಳಿ ಗಿಡ ನೆಡುವ ಯೋಚನೆ ಇಲಾಖೆಗಿದೆ.

Forest department planing to plant 9.8 saplings

ಈ ಬಾರಿ ಮಳೆ ಬಂದ ಬಳಿಕ ಜೂನ್‌ ತಿಂಗಳ ಅಂತ್ಯದ ವೇಳೆಗೆ ಜಿಲ್ಲೆಯ 8 ವಲಯಗಳಲ್ಲಿ ಗಿಡ ನೆಡಲು ಪ್ರಾರಂಭ ಮಾಡಲಾಗುತ್ತದೆ. ಒಂದು ತಿಂಗಳು ಕಾಲ ಈ ಕಾರ್ಯ ನಡೆಯಲಿದೆ. ರಸ್ತೆ ಬದಿಗಳಲ್ಲಿಯೂ ಗಿಡ ನೆಡುವುದು ಈ ಯೋಜನೆಯಲ್ಲಿದ್ದು, ಜಿಲ್ಲೆಯ ಸುಮಾರು 60 ಕಿ.ಮೀ. ರಸ್ತೆ ಬದಿ ನೆಡಲಾಗುತ್ತದೆ. ಪ್ರತಿ ಕಿ.ಮೀ.ಗೆ 300 ಗಿಡ ನೆಡುವ ಗುರಿಯನ್ನು ಇಲಾಖೆ ಹೊಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+