ಬಂಟ್ವಾಳ: ನಾರಾಯಣ ಗುರು ಸರ್ಕಲ್‌ನಲ್ಲಿ ಭಗವಾಧ್ವಜ-ಹಸಿರು ಬಾವುಟ ವಿವಾದ
ಬಂಟ್ವಾಳದ ಬಿ.ಸಿ. ರೋಡ್‌ನ ಬ್ರಹ್ಮ ಶ್ರೀ ನಾರಾಯಣ ಗುರು ಸರ್ಕಲ್‌ನಲ್ಲಿ ಕೇಸರಿ, ಹಸಿರು ಬಾವುಟಗಳ ಪೈಪೋಟಿ ಏರ್ಪಟ್ಟಿದ್ದು, ಸ್ಥಳದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಮಂಗಳೂರು, ಫೆಬ್ರವರಿ, 23: ಹಿಜಾಬ್, ಜಿಹಾದ್, ಹಲಾಲ್ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಧರ್ಮ ದಂಗಲ್ ಆರಂಭವಾಗಿದೆ. ಬಂಟ್ವಾಳದ ಒಂದೇ ಸರ್ಕಲ್‌ನಲ್ಲಿ ಕೇಸರಿ-ಹಸಿರು ಬಾವುಟದ ಪೈಪೋಟಿ ಏರ್ಪಟ್ಟಿದೆ. ಒಂದೇ ಜಾತಿ, ಒಂದೇ ಮತ, ಒಂದೇ ಧರ್ಮ ಎಂದು ಸಾರಿದ ನಾರಾಯಣ ಗುರು ಹೆಸರಿರುವ ಸರ್ಕಲ್ ಮೇಲೆಯೇ ಕೇಸರಿ-ಹಸಿರು ಬಾವುಟದ ವಿವಾದ ಆರಂಭಗೊಂಡಿದೆ.
ಅತೀ ಸೂಕ್ಷ್ಮ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿ.ಸಿ. ರೋಡ್‌ನ ಬ್ರಹ್ಮ ಶ್ರೀ ನಾರಾಯಣ ಗುರು ಸರ್ಕಲ್‌ನಲ್ಲಿ ಕೇಸರಿ, ಹಸಿರು ಬಾವುಟಗಳ ಪೈಪೋಟಿ ಏರ್ಪಟ್ಟಿದೆ. ಬಂಟ್ವಾಳದ ಪೇಟೆ ಮಸೀದಿಯ ಊರೂಸ್ ಹಿನ್ನೆಲೆ ಸರ್ಕಲ್‌ನಲ್ಲಿ ಮುಸ್ಲಿಂ ಯುವಕರು ಹಸಿರು ಬಾವುಟ ಅಳವಡಿಸಿದ್ದು,ಇದೀಗ ಹಸಿರು ಬಾವುಟದ ಮೇಲೆಯೇ ಹಿಂದೂ ಜಾಗರಣ ವೇದಿಕೆ ಕೇಸರಿ ಪತಾಕೆ ಹಾರಿಸಿದೆ.
ಬಿ.ಸಿ. ರೋಡ್‌ನ ಚಂಡಿಕಾ ಪರಮೇಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸವ ಪ್ರಯುಕ್ತ ಹಿಂದೂ ಜಾಗರಣ ವೇದಿಕೆ ಸರ್ಕಲ್‌ನಲ್ಲಿ ಕೇಸರಿ ಬಾವುಟಗಳನ್ನು ಹಾಕಿದೆ. ಸರ್ಕಲ್‌ನಲ್ಲಿ ಭಗವಾಧ್ವಜ ಮತ್ತು ಕೇಸರಿ ಬಂಟಿಗ್ಸ್ ಹಾಕಿದ್ದು, ಇದೀಗ ಬಂಟಿಂಗ್ಸ್ ತೆರವು ಗೊಳಿಸಲು ಬಂಟ್ವಾಳ ಪೊಲೀಸರು ಹಿಂದೂ ಜಾಗರಣ ವೇದಿಕೆ ಪ್ರಮುಖರಿಗೆ ಸೂಚನೆ ನೀಡಿದ್ದಾರೆ.

ಹಿಂದೂ ಜಾಗರಣ ವೇದಿಕೆಯ ವಾದ ಏನು?
ಆದರೆ ಬಂಟಿಂಗ್ಸ್ ತೆರವುಗೊಳಿಸಲು ಹಿಂದೂ ಜಾಗರಣ ವೇದಿಕೆ ಹಿಂದೇಟು ಹಾಕಿದೆ. ಪೊಲೀಸರು ಬಂಟಿಂಗ್ಸ್ ತೆರವುಗೊಳಿಸಿದರೇ ಇಡೀ ಬಂಟ್ವಾಳ, ಬಿ.ಸಿ. ರೋಡ್ ಪೇಟೆಯಲ್ಲಿ ಭಗವಾಧ್ವಜ ಹಾಕುತ್ತೇವೆ ಎಂದು ಹಿಂದೂ ಜಾಗರಣ ವೇದಿಕೆ ಪಟ್ಟು ಹಿಡಿದಿದೆ. ಈ ಹಿನ್ನೆಲೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ.

ನರಸಿಂಹ ಮಾಣಿಯ ಹೇಳಿದ್ದೇನು?
ಪತಾಕೆ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಹಿಂದೂ ಜಾಗರಣ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಮಾಣಿ, ನಾರಾಯಣ ಗುರು ಸರ್ಕಲ್ ಹಿಂದೂಗಳಿಗೆ ಸೇರಿದ್ದು. ಈ ಸರ್ಕಲ್‌ನಲ್ಲಿ ಅನ್ಯಧರ್ಮದ ಬಾವುಟಗಳನ್ನು ಹಾಕಲು ನಾವು ಬಿಡುವುದಿಲ್ಲ. ನಾವು ಪ್ರತಿವರ್ಷ ಚಂಡಿಕಾ ಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವಕ್ಕೆ ಸರ್ಕಲ್‌ನಲ್ಲಿ ಕೇಸರಿ ಬಾವುಟಗಳನ್ನು ಹಾಕುತ್ತೇವೆ ಎಂದರು.

ಕೇಸರಿ ಬಾವು ಕಟ್ಟಿದರೆ ಒಪ್ಪುತ್ತಾರಾ?
ಈ ಬಾರಿ ನಾವು ಕೇಸರಿ ಪತಾಕೆ ಹಾಕದಂತೆ ಮೊದಲೇ ಹಸಿರು ಬಾವುಟ ಹಾಕಿದ್ದಾರೆ. ಮಸೀದಿ ಬಳಿಯ ಸರ್ಕಲ್‌ಗೆ ಕೇಸರಿ ಬಾವು ಕಟ್ಟಿದರೆ ಅವರು ಒಪ್ಪುತ್ತಾರಾ? ನಾವು ಪ್ರತಿವರ್ಷ ಚಂಡಿಕಾ ಪರಮೇಶ್ವರಿ ದೇವಸ್ಥಾನದ ಜಾತ್ರೋತ್ಸವಕ್ಕೆ ಸರ್ಕಲ್‌ನಲ್ಲಿ ಕೇಸರಿ ಬಾವುಟಗಳನ್ನು ಹಾಕುತ್ತೇವೆ. ಈ ಬಾರಿ ಕೇಸರಿ ಬಾವುಟಗಳನ್ನು ಹಾಕದಂತೆ ಅವರು ಮೊದಲೇ ಹಸಿರು ಬಾವುಟ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾವುಟ ಹಾಕುವ ಅವಶ್ಯಕತೆ ಏನಿದೆ?
ಬಂಟ್ವಾಳದ ಪೇಟೆ ಮಸೀದಿಯ ಊರೂಸ್‌ಗೆ ಇಲ್ಲಿ ಪತಾಕೆ ಹಾಕುವ ಅವಶ್ಯಕತೆ ಏನಿದೆ? ಸರ್ಕಲ್‌ನಿಂದ ಮಸೀದಿ ಒಂದೂವರೆ ಕಿಲೋ ಮೀಟರ್ ದೂರದಲ್ಲಿದೆ. ಪೊಲೀಸರು ನಮಗೇ ಬಾವುಟಗಳನ್ನು ತೆಗೆಯಲು ಸೂಚಿಸಿದ್ದಾರೆ. ಬಂಟ್ವಾಳ ಪೊಲೀಸರು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಕೇಸರಿ ಬಾವುಟಗಳನ್ನು ಮುಟ್ಟಿದರೆ ಬಂಟ್ವಾಳ, ಬಿ.ಸಿ. ರೋಡ್ ಪೇಟೆಯಲ್ಲಿ ಎಲ್ಲೆಡೆ ಭಗವಾಧ್ವಜ ಅಳವಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ಕರಾವಳಿಯಲ್ಲಿ ಈ ಬಾವುಟ ವಿವಾದ ಜೋರಾಗುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಾಗಿದೆ. ಸರ್ವಧರ್ಮ ಸಮಾನತೆಯ ಬಗ್ಗೆ ಸಂದೇಶ ಸಾರಿದ ನಾರಾಯಣ ಗುರು ವೃತ್ತದಲ್ಲಿ ಬಾವುಟ ವಿವಾದ ಆಗಿರುವುದು ದುರಾದೃಷ್ಟಕರ ಸಂಗತಿಯಾಗಿದೆ ಎಂದು ಇಲ್ಲಿನ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.












Click it and Unblock the Notifications