ಮಂಗಳೂರು; ಒಂದೇ ಕುಟುಂಬದ ಐವರಿಗೆ ಬಂತು ಕೊರೊನಾ
ಮಂಗಳೂರು, ಮೇ 07: ಮಂಗಳೂರಿನ ಬೇಳೂರು ಪ್ರದೇಶದ ಒಂದೇ ಕುಟುಂಬದ ಐವರಲ್ಲಿ ಕೊರೊನಾ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ. ಮೊದಲು ವೃದ್ಧೆಯೊಬ್ಬರನ್ನು ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೃದ್ಧೆಗೆ ಕೊರೊನಾ ತಗುಲಿರುವುದು ದೃಢಪಟ್ಟಿತ್ತು.
ಆನಂತರ ವೃದ್ಧೆಯ ಪತಿ, ಮಗಳು, ಅಳಿಯ ಮತ್ತು ಮೊಮ್ಮಗಳಿಗೆ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ. ಸೋಂಕು ತಗುಲಿದ ಇವರೆಲ್ಲರಿಗೂ ಮಂಗಳೂರಿನ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸದ್ಯ ವೃದ್ಧೆಯ ಆರೋಗ್ಯ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿರಿಸಿ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಒಟ್ಟು 13 ಮಂದಿಗೆ ಕೊರೊನಾ ಹರಡಿದ್ದು, ಎಲ್ಲರೂ ವೆನ್ಲಾಕ್ ಮತ್ತು ಫಸ್ಟ್ ನ್ಯೂರೋ ಐಸೊಲೇಶನ್ ವಾರ್ಡಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕ ಇರುವ ಬಹಳಷ್ಟು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, 15 ದಿನಗಳ ಬಳಿಕ ಕೆಲವರಲ್ಲಿ ಸೋಂಕು ಕಂಡುಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.












Click it and Unblock the Notifications