ಬಂಟ್ವಾಳ : ತಂದೆಯನ್ನೇ ಗುಂಡಿಕ್ಕಿ ಕೊಂದ ಮಗ
ಮಂಗಳೂರು, ಜನವರಿ. 14 : ಬಂಟ್ವಾಳದ ನೆಕ್ಕರೆಕಾಡು ಎಂಬಲ್ಲಿ ಶೂಟೌಟ್ ನಿಂದ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನೆಡದಿದೆ.
ಮೃತ ವ್ಯಕ್ತಿಯನ್ನು ಬಂಟ್ವಾಳ ಸಮೀಪದ ಬ.ಕಸಬಾ ಗ್ರಾಮದ ನೆಕ್ಕರೆಕಾಡು ನಿವಾಸಿ ಇಂದ್ರೇಶ್ (55) ಎಂದು ಗುರುತಿಸಲಾಗಿದೆ. ಮೃತನ ಮಗ ಚಂದ್ರಹಾಸನಿಂದಲೇ ಈ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಕೌಟುಂಬಿಕ ಕಲಹವೇ ಈ ಕೊಲೆಗೆ ಕಾರಣ ಎಂದು ತಿಳಿದು ಬಂದಿದೆ. ತಂದೆ ಮಗನ ನಡುವೆ ಪ್ರತಿ ದಿನ ಜಗಳ ನಡೆಯುತ್ತಿದ್ದು, ತಾಯಿ ಪಕ್ಕದ ಮನೆಗೆ ಹೋದ ಸಂದರ್ಭದಲ್ಲಿ ಈ ಶೂಟೌಟ್ ನಡೆದಿದೆ ಎನ್ನಲಾಗುತ್ತಿದೆ.

ನಾಡಕೋವಿಯಿಂದ 3 ಸುತ್ತು ಗುಂಡು ಹಾರಿಸಲಾಗಿದ್ದು , ಈ ಸಂದರ್ಭ ಮಗನ ಕೈಗೆ ಗಾಯವಾಗಿದೆ. ಮಗನನ್ನು ಆಸ್ಪತ್ರಗೆ ದಾಖಲಿಸಲಾಗಿದೆ.
ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಪೊಲೀಸರು ಎರಡೂ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದು, ನಿಜವಾದ ವಿಷಯ ಇನ್ನಷ್ಟೇ ಹೊರಬರಬೇಕಿದೆ.












Click it and Unblock the Notifications