ಅಂತೂ ಪತ್ತೆಯಾದನು ಇಂಜಿನಿಯರಿಂಗ್ ವಿದ್ಯಾರ್ಥಿ ವಿನಾಯಕ್, ಎಲ್ಲಿ ಗೊತ್ತಾ?
ಮಂಗಳೂರು, ಡಿಸೆಂಬರ್.02: ಮಾಜಿ ಪೊಲೀಸ್ ಅಧಿಕಾರಿ ಮದನ್ ಅವರೊಂದಿಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿ ವಿನಾಯಕ್ ಈಗ ಪತ್ತೆಯಾಗಿರುವ ಸುದ್ದಿ ಬಂದಿದೆ.
ಕೇರಳದ ಕೊಚ್ಚಿನ್ ನಲ್ಲಿದ್ದ ವಿನಾಯಕ್ ನನ್ನು ಪತ್ತೆ ಮಾಡಿ ಪೊಲೀಸರು ಮಂಗಳೂರಿಗೆ ಕರೆತಂದಿದ್ದಾರೆ. ಹೆತ್ತವರ ಬಗ್ಗೆ ಬೇಸರಗೊಂಡು ಕೊಚ್ಚಿನ್ ಗೆ ತೆರಳಿದ್ದಾಗಿ ವಿನಾಯಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಇತ್ತೀಚೆಗೆ ವಿನಾಯಕ್ ಪೋಷಕರು ಮಗನನ್ನು ಹುಡುಕಿ ತರುವಂತೆ ಹೈಕೋರ್ಟಿಗೆ ಹೆಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದರು.

ಅಷ್ಟೇ ಅಲ್ಲ, ಅ.8ರಂದು ವಿನಾಯಕ್ ದಿಢೀರ್ ಆಗಿ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಮದನ್ ಬಗ್ಗೆ ಸಂಶಯಗೊಂಡು ಉರ್ವಾ ಠಾಣೆಗೆ ವಿನಾಯಕ್ ಪೋಷಕರು ದೂರು ನೀಡಿದ್ದರು. ಆ ನಂತರ ಹೈಕೋರ್ಟ್ ಚಾಟಿ ಬೀಸಿದ್ದರಿಂದ ಈ ಪ್ರಕರಣ ಪೊಲೀಸರ ಕುತ್ತಿಗೆ ಕಟ್ಟಿಕೊಂಡಿತ್ತು.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಮದನ್ ಮಹಿಳೆಯೊಬ್ಬರ ಜೊತೆ ಹೊಂದಿದ್ದ ಸಂಬಂಧ ತಮ್ಮ ಮಗನ ನಾಪತ್ತೆಗೆ ಪ್ರಮುಖ ಕಾರಣ ಎಂದು ವಿನಾಯಕನ ಪೋಷಕರು ಆರೋಪಿಸಿದ್ದರು. ಅದರ ಬೆನ್ನಲ್ಲೇ ಇದೀಗ ನಾಪತ್ತೆಯಾಗಿದ್ದ ವಿನಾಯಕ್ ಪತ್ತೆಯಾಗಿದ್ದು, ಆತ ಪೋಷಕರ ಮೇಲೆಯೇ ಆರೋಪ ಮಾಡಿರುವುದು ಆಶ್ಚರ್ಯಕ್ಕೆ ಎಡೆ ಮಾಡಿದೆ.












Click it and Unblock the Notifications