ಮಂಗಳೂರು ನಗರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡ 'ಬಬ್ಲಿ'
ಮಂಗಳೂರು, ಮಾರ್ಚ್ 18; ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿನ ಅಪರಾಧ ಪತ್ತೆಯ ಕರ್ತವ್ಯಕ್ಕೆ ಹೊಸಬರ ನೇಮಕವಾಗಿದೆ. 'ಬಬ್ಲಿ' ಎಂಬ ಶ್ವಾನ ತರಬೇತಿ ಪೂರ್ಣಗೊಳಿಸಿದ್ದು, ಕರ್ತವ್ಯಕ್ಕೆ ನಿಯೋಜನೆಗೊಂಡಿದೆ.
'ಬಬ್ಲಿ' ಶ್ವಾನವು ಬೆಂಗಳೂರು ಸಿಎಆರ್ ಅಡುಗೋಡಿ ಶ್ವಾನದಳ ತರಬೇತಿ ಕೇಂದ್ರದಲ್ಲಿ ಅಪರಾಧ ಪತ್ತೆ ತರಬೇತಿಯನ್ನು ಪಡೆದಿದೆ. ಕುಶಾಲಪ್ಪ ಪೂಜಾರಿ ಮತ್ತು ರವಿ ಗೌಡ ಮಂಗಳೂರಿನಲ್ಲಿ ಇದರ ಹ್ಯಾಂಡ್ಲರ್ ಆಗಿದ್ದಾರೆ.
ಮಂಗಳೂರು ಕಮೀಷನರೇಟ್ ಶ್ವಾನದಳದ ವಿಭಾಗದಲ್ಲಿ ಈಗಾಗಲೇ ಮೂರು ಶ್ವಾನಗಳಿವೆ. ಈಗ ಬಬ್ಲಿ ಸೇರ್ಪಡೆಯಿಂದಾಗಿ ಶ್ವಾನಗಳ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿನ ಅಪರಾಧ ಪತ್ತೆಯ ಕರ್ತವ್ಯಕ್ಕೆ ಬಬ್ಲಿ ನಿಯೋಜನೆಗೊಂಡಿದೆ.

'ಬಬ್ಲಿ' ಸುಮಾರು 1 ವರ್ಷ ವಯಸ್ಸಿನ ನಾಯಿಯಾಗಿದ್ದು, ಬೆಂಗಳೂರಿನಲ್ಲಿ ತರಬೇತಿ ಪೂರ್ಣಗೊಳಿಸಿದೆ. ಮಂಗಳೂರು ನಗರದಲ್ಲಿ ಸ್ಫೋಟಕ ಪತ್ತೆ ಕಾರ್ಯಕ್ಕೆ ಇದನ್ನು ನಿಯೋಜನೆ ಮಾಡಲಾಗಿದೆ.
ಮಂಗಳೂರು ನಗರ ಪೊಲೀಸ್ ಶ್ವಾನದಳದಲ್ಲಿರುವ ಎರಡು ನಾಯಿಗಳನ್ನು ಅಪರಾಧ ಹಾಗೂ ಮಾದಕ ವಸ್ತುಗಳ ಪತ್ತೆಗೆ ನಿಯೋಜನೆ ಮಾಡಲಾಗಿದೆ. ಮಂಗಳೂರಿನಲ್ಲಿ ವಿಮಾನ ನಿಲ್ದಾಣವು ಇರುವುದರಿಂದ ಶ್ವಾನದಳಕ್ಕೆ ಹೆಚ್ಚಿನ ಕೆಲಸಗಳಿರುತ್ತದೆ.
ಬಬ್ಲಿ ಎಂಬ ಶ್ವಾನವು ಬೆಂಗಳೂರು ಸಿ.ಎಆರ್.ಅಡುಗೋಡಿ ಶ್ವಾನದಳ ತರಬೇತಿ ಕೇಂದ್ರದಲ್ಲಿ ಅಪರಾಧ ಪತ್ತೆ ತರಬೇತಿಯನ್ನು ಪಡೆದು ಮಂಗಳೂರು ನಗರಕ್ಕೆ ಕರ್ತವ್ಯ ನಿಯೋಜನೆಗೊಂಡಿರುತ್ತದೆ. ಶ್ರೀ ಕುಶಾಲಪ್ಪ ಪೂಜಾರಿ, ಶ್ರೀ ರವಿ ಗೌಡ ಇದರ ಹ್ಯಾಂಡ್ಲರ್ ಆಗಿರುತ್ತಾರೆ.ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿನ ಅಪರಾಧ ಪತ್ತೆಯ ಕರ್ತವ್ಯಕ್ಕೆ ನಿಯೋಜಿಸಲಾಗುವುದು pic.twitter.com/zOglxNDzHn
— N. Shashi Kumar CP Mangaluru City (@compolmlr) March 17, 2022
ಕಳೆದ ವರ್ಷ ರಾಣಿ ಸೇರ್ಪಡೆ; ಮಂಗಳೂರು ನಗರ ಪೊಲೀಸ್ ಶ್ವಾನದಳಕ್ಕೆ 2021ರಲ್ಲಿ 'ರಾಣಿ' ಎಂಬ ಶ್ವಾನ ಸೇರ್ಪಡೆಗೊಂಡಿತ್ತು. ಇದು ಸಹ ಬೆಂಗಳೂರು ಶ್ವಾನದಳ ತರಬೇತಿ ಕೇಂದ್ರದಲ್ಲಿ ಸ್ಫೋಟಕ ಪತ್ತೆ ತರಬೇತಿಯನ್ನು ಪಡೆದು ಮಂಗಳೂರು ನಗರಕ್ಕೆ ಕರ್ತವ್ಯ ನಿಯೋಜನೆಗೊಂಡಿತ್ತು. ಮನೋಜ್ ಶೆಟ್ಟಿ ಮತ್ತು ನಾಗೇಂದ್ರ ಇದರ ಹ್ಯಾಂಡ್ಲರ್ ಆಗಿರುತ್ತಾರೆ.
ಡೋಲಿ ಮೃತಪಟ್ಟಿತ್ತು; 2021ರ ನವೆಂಬರ್‌ನಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಪ್ರೀತಿಯಿಂದ ಡೋಲಿ ಎಂದು ಕರೆಯುತ್ತಿದ್ದ 'ಲೀನಾ' ಎಂಬ ಶ್ವಾನ ಮೃತಪಟ್ಟಿತ್ತು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಶ್ವಾನದಳದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿತ್ತು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಆದಿತ್ಯ ರಾವ್ ಬಾಂಬ್ ಇಟ್ಟಾಗ ಇದೇ ಲೀನಾ ಶ್ವಾನ ಅದನ್ನು ಪತ್ತೆ ಹಚ್ಚಿತ್ತು. ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ವಾನಕ್ಕೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶ್ವಾನ ಮೃತಪಟ್ಟಿತ್ತು.












Click it and Unblock the Notifications