ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು ರಸ್ತೆಗಳಲ್ಲಿ ಹರಿದ ಮೀನಿನ ತ್ಯಾಜ್ಯ ನೀರು, ಕ್ರಮಕ್ಕೆ ಮೀನಾಮೇಷ

|
Google Oneindia Kannada News

ಮಂಗಳೂರು ಮಾರ್ಚ್ 16 : ಮಂಗಳೂರಿನಲ್ಲಿ ಮತ್ತೆ ಮೀನಿನ ತ್ಯಾಜ್ಯ ನೀರು ನಗರದಲ್ಲಿ ದುರ್ವಾಸನೆ ಹರಡುತ್ತಿದೆ. ನಗರದ ಅಂದವನ್ನು ಹಾಳು ಮಾಡುತ್ತಿದೆ.

ಮಂಗಳೂರಿನ ರಸ್ತೆಗಳಲ್ಲಿ ಮೀನು ತುಂಬಿದ ಲಾರಿಗಳು ಮೀನಿನ ತ್ಯಾಜ್ಯ ನೀರನ್ನು ನಗರದ ರಸ್ತೆಗಳಲ್ಲಿ ಚೆಲ್ಲುತ್ತಾ ಹೋಗುತ್ತಿದ್ದು, ನಗರದಾದ್ಯಂತ ಜನರು ಮೂಗು ಮಚ್ಚಿ ತೆರಳುವ ಸ್ಥತಿ ಎದುರಾಗಿದೆ.

ಮಂಗಳೂರು ಸ್ವಚ್ಛ ನಗರ ಎಂಬ ಹೆಸರನ್ನು ಮೀನಿನ ಲಾರಿಗಳು ಹಾಳು ಮಾಡುತ್ತಿವೆ. ಮೀನಿನ ತ್ಯಾಜ್ಯ ನೀರನ್ನು ಮಂಗಳೂರಿನ ಮೀನುಗಾರಿಕಾ ದಕ್ಕೆಯಿಂದ ಪಾಂಡೆಶ್ವರ, ಎಮ್ಮೆಕೆರೆ , ಮಂಕಿ ಸ್ಟಾಂಡ್ ,ಮಂಗಳಾದೆವಿ, ಜೆಪ್ಪು ಮಾರ್ಕೆಟ್, ಮೊರ್ಗನ್ಸ್ ಗೆಟ್ ಮಹಾಕಾಳಿಪಡ್ಪು ,ಜೆಪ್ಪಿನಮೊಗರು ಆಗಿ ರಾಸ್ಟ್ರಿಯ ಹೆದ್ದಾರಿಯ ಮೂಲಕ ತೊಕ್ಕೊಟ್ಟು ಕಡೆ ಹೊಗುವ ಲಾರಿ ಮತ್ತು ಟೆಂಪೊಗಳಿಂದ ರಸ್ತೆ ಗೆ ಸುರಿದುಕೊಂಡು ಹೋಗುತ್ತಿವೆ.

Discharge of foul-smelling water from fish-carrying lorries has creating problems

ಪೊಲೀಸ್ ಇಲಾಖೆಯ ಎಚ್ಚರಿಕೆ ನಡುವೆಯೂ ಯಾವುದೇ ಆತಂಕ ವಿಲ್ಲದೇ ರಸ್ತೆಯುದ್ದಕ್ಕೂ ಮೀನಿನ ತ್ಯಾಜ್ಯ ನೀರನ್ನು ಹರಿಬಿಟ್ಟು ಹೋಗುತ್ತಿವೆ.

ಈ ಮೀನಿನ ತ್ಯಾಜ್ಯ ನೀರಿನಿಂದಾಗಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೆ ರಸ್ತೆಯಲ್ಲಿ ನಡೆದಾಡುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗುವಂತಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಮೀನಿನ ನೀರಿನ ವಾಸನೆ ನಿಲ್ಲಿಸಿ ಪ್ರಕೃತಿದತ್ತವಾಗಿ ಬಂದ ಗಾಳಿಯ ಸೇವನೆಗೆ ಅವಕಾಶವನ್ನು ಮಾಡಿಕೊಡಿ ಎಂದು ಪರಿಸರದ ನಾಗರಿಕರು ವಿನಂತಿಸಿದ್ದಾರೆ. ಮೀನಿಗ ಲಾರಿಗಳ ಉಪಟಳಗಳ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

English summary
Discharge of foul-smelling water from fish-carrying lorries has been a concern among residents for a long time. While two-wheeler riders have been complaining of road turning slippery, residents have been concerned about health problems. People have been demanding strict action.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X