ಸಾಮರಸ್ಯ, ಸಹಿಷ್ಣುತೆ ಭಾರತ ಸಂಸ್ಕೃತಿಯ ಹೆಗ್ಗುರುತು
ಧರ್ಮಸ್ಥಳ, ಡಿ.10: ಸರ್ವಧರ್ಮ ಸಮ್ಮೇಳನಗಳನ್ನು ಆಯೋಜಿಸುವುದು ಶಾಂತಿ ಸಹಬಾಳ್ವೆಯನ್ನು ಕಾಪಾಡಲು ಪ್ರೇರಕ ಶಕ್ತಿಯಿದ್ದಂತೆ. ಯಾವುದೇ ಧರ್ಮವಿರಲಿ ಅದರ ಅಂತಿಮ ಗುರಿ ಶಾಂತಿ, ಸಹಬಾಳ್ವೆಯನ್ನು ಕಾಪಾಡುವುದು. ಧರ್ಮ ಮೂಲತಹವಾಗಿ ಯಾವುದೇ ಹಿಂಸೆಯನ್ನು ಪ್ರತಿಪಾದಿಸುವುದಿಲ್ಲ ಎಂದು ಕರ್ನಾಟಕ ಸರ್ಕಾರದ ಸಹಕಾರಿ ಸಚಿವ ಎಚ್.ಎಸ್ ಮಹದೇವ ಪ್ರಸಾದ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ ಲಕ್ಷದೀಪೋತ್ಸವದ ಅಂಗವಾಗಿ ಆಯೋಜಿಸಿದ್ದ 83ನೇ ಸರ್ವಧರ್ಮ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. [ಗ್ಯಾಲರಿ: ಕಾರ್ತೀಕ ದೀಪದ ಬೆಳಕಲ್ಲಿ ಮಿಂದೆದ್ದ ಧರ್ಮಸ್ಥಳ]
ಇಂದು ನಾಗರೀಕತೆ ಹೆಚ್ಚಿದಂತೆ ಕ್ರೌರ್ಯವೂ ಈ ಕೂಡ ಹೆಚ್ಚುತ್ತಿದೆ. ಹಿಂಸೆ ನಿರಂತರ ಮತ್ತು ನಿರಾತಂಕವಾಗಿ ನಡೆಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಆಯಾಯ ಧರ್ಮವನ್ನು ಸರಿಯಾಗಿ ಅರಿತುಕೊಳ್ಳದೇ ಇರುವುದು. ಬಹಳ ಶತಮಾನಗಳ ಹಿಂದೆಯೇ ನಮ್ಮ ಹಿರಿಯರು ವಿಶ್ವ ಮಾನವ ಸಂದೇಶವನ್ನು ಜಗತ್ತಿಗೆ ನೀಡಿದ್ದಾರೆ. ಅದರ ಅರ್ಥವನ್ನು ಇಂದು ಸರಿಯಾಗಿ ಅರ್ಥೈಸಿಕೊಳ್ಳಲು ಸರ್ವಧರ್ಮ ಸಮ್ಮೇಳನಗಳು ಸಹಕಾರಿ ಎಂದರು.[ಮರೆಯಾಗಿದ್ದ ಗೋಲಿ ಸೋಡಾ ಲಕ್ಷದೀಪೊತ್ಸವದಲ್ಲಿ ಪ್ರತ್ಯಕ್ಷ]
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬೆಂಗಳೂರಿನ ಶೆರಿಯಾರ್ ಡಿ. ವಕೀಲ್ ಅವರು ಪಾರ್ಸಿ ಧರ್ಮದ ಆಚಾರ ವಿಚಾರಗಳ ಬಗ್ಗೆ ಮಾತನಾಡಿ, ದೇವರು ಮನುಷ್ಯನನ್ನು ಇನ್ನೊಬ್ಬ ಮನುಷ್ಯನ್ನು ನಂಬಲಿ ಎಂದು. ಇಂದು ನಾವು ಯಾರನ್ನೂ ನಂಬದ ಪರಿಸ್ಥಿತಿ ಬಂದೊದಗಿದೆ. ಮಾನವೀಯತೆಯ ಜೊತೆಗೆ ನಂಬಿಕೆಯೂ ಕೂಡ ಇಂದು ಕಳೆದುಹೋಗುತ್ತಿದೆ ನುಡಿದರು. [ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ : ಕೆರೆಕಟ್ಟೆ ಉತ್ಸವ]
ಪ್ರತಿಯೊಬ್ಬರನ್ನು ಪ್ರೀತಿಸಿ, ಪ್ರತಿಯೊಂದು ಧರ್ಮವನ್ನು ಗೌರವಿಸಿ. ನಿಜವಾದ ಪ್ರೀತಿಯಿಂದ ಮಾತ್ರ ಕೆಟ್ಟ ವಿಚಾರಗಳನ್ನು ನಾಶ ಮಾಡಲು ಸಾಧ್ಯ. ಜೀವನದ ಕೆಲವು ಕಾರ್ಯಗಳನ್ನು ಸಮರ್ಥವಾಗಿ ಪೂರೈಸುವುದಕ್ಕಾಗಿಯೇ ನಾವು ಹುಟ್ಟಿರುತ್ತೇವೆ. ಅದಕ್ಕೆ ಸರಿಯಾದ ಪ್ರೋತ್ಸಾಹ ಮುಖ್ಯ. ನಮ್ಮ ಅರ್ಹತೆಗೆ ತಕ್ಕಂತೆ ಆಸೆಯನ್ನು ಪಡಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಚೆನ್ನೈನ ಡಾ. ತಮಿಳ್ ಸೆಲ್ವಿ ಜೈನ ಧರ್ಮದ ಬಗ್ಗೆ
ಜೈನ ಧರ್ಮವು ಕನಾಟಕದ ಭವ್ಯ ಸಂಸ್ಕೃತಿಗೆ ಅಡಿಪಾಯ ಹಾಕಿಕೊಟ್ಟಿದೆ. ಅಹಿಂಸಾ ತತ್ವನ್ನು ಜಗತ್ತಿಗ ಸಾರಿದ ಧರ್ಮವೆಂದರೆ ಅದು ಜೈನ ಧರ್ಮ. ಮಾನವೀಯತೆಯನ್ನು ಕಳೆದುಕೊಳ್ಳಬಾರದೆಂದು ಎಲ್ಲಾ ಧರ್ಮವು ಪ್ರತಿಪಾದಿಸಿದೆ. ಎಲ್ಲಾ ಧರ್ಮಗಳ ತಳಹದಿ ದಯೆ.
ಅಹಿಂಸಾ, ಆಸ್ತೇಯ, ಅಪರಿಮಿಯ, ಸತ್ಯ ಮತ್ತು ಬ್ರಹ್ಮಚಾರ್ಯ ಇವು ಜೈನ ಧರ್ಮದ ಮೂಲ ತತ್ವ. ಇವನ್ನು ಅಳವಡಿಸಿಕೊಂಡ ಮಾನವ ಮಾನವೀಯತೆಯನ್ನು ಎಂದೂ ಮರೆಯುವುದಿಲ್ಲ ಎಂದರು.
ಹಾಸನ ಡಾ. ಸೈಯ್ಯದ್ ಶಹಾಬುದ್ದೀನ್ ಮಾತನಾಡಿ
ಇಂದಿನ ಸಮಾಜಕ್ಕೆ ಸರ್ವಧರ್ಮ ಸಮ್ಮೇಳನಗಳ ಅತೀ ಅಗತ್ಯವಿದೆ. ಸ್ವಾರ್ಥ ಮನುಷ್ಯನನ್ನು ಅಧಪತನಕ್ಕೀಡು ಮಾಡಿದೆ. ಧರ್ಮ ಮಾನವೀಯತೆಯನ್ನು ಎತ್ತಿ ಹಿಡಿಯುತ್ತದೆ. ಧರ್ಮದ ಮೂಲಕ ಸೌಹಾರ್ದವನ್ನು ಬೆಳೆಸುವ ಕಾರ್ಯವನ್ನು ಈ ಸಮ್ಮೇಳನ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.
ಭಯೋತ್ಪಾದನೆಗೂ ಇಸ್ಲಾಂ ಧರ್ಮಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ನಿಜವಾದ ಮುಸಲ್ಮಾನ ಹಿಂಸೆಯನ್ನು ಪ್ರೋತ್ಸಾಹಿಸುವುದಿಲ್ಲ. ನೈತಿಕತೆಯಿಲ್ಲದ ಧರ್ಮವಿಲ್ಲ. ಆದ್ದರಿಂದ ಭಾಷಾ ಸೌಹಾರ್ದತೆ, ಕೋಮು ಸೌಹಾರ್ದತೆಯನ್ನು ಬೆಳೆಸುವ ಕಾರ್ಯ ಇನ್ನೂ ಹೆಚ್ಚಾಗಬೇಕು. ವಿಶ್ವ ಮಾನವರಾಗಬೇಕು ಎಂದು ಕರೆಕೊಟ್ಟರು.

ವಿಶ್ವ ಗಾಯತ್ರಿ ಪರಿವಾರದ ಮುಖ್ಯಸ್ಥ ಡಾ. ಪ್ರಣವ್ ಪಾಂಡ್ಯ
ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಹರಿದ್ವಾರದ ವಿಶ್ವ ಗಾಯತ್ರಿ ಪರಿವಾರದ ಮುಖ್ಯಸ್ಥ ಡಾ. ಪ್ರಣವ್ ಪಾಂಡ್ಯ ಮಾತನಾಡಿ, ವಿಜ್ಞಾನ ಕ್ಷೇತ್ರದಲ್ಲಿ ಇಂದು ಅಪಾರ ಪ್ರಗತಿ ಕಂಡಿದೆ. ಆದರಿಂದಾಗಿ ಇಡೀ ಜಗತ್ತು ಕಿರದಾಗಿದೆ. ವಿಶ್ವ ಮಾನವತೆಯ ಬಗ್ಗೆ ನಂಬಿಕೆಯಿರುವ ಅನೇಕ ಜನರು ವಸುದೈವ ಕುಟುಂಬಕಂನ ಬಗ್ಗೆ ಅರಿತಿರುತ್ತಾರೆ. ಸಮಾಜ ಕಾರ್ಯಕ್ಕಾಗಿ, ಬಡವರ ಉದ್ದಾರಕ್ಕಾಗಿ ಸಿರಿವಂತರು ಮುಂದಾಗಬೇಕು ಎಂದು ಹೇಳಿದರು.

ಎಲ್ಲಾ ಧರ್ಮಗಳ ತಳಹದಿ ದಯೆ
ಕಾರ್ಯಕ್ರಮದಲ್ಲಿ ಸ್ವಾಗತ ಸಮಿತಿಯ ಉಪಾಧ್ಯಕ್ಷ ಡಿ.ಸುರೇಂದ್ರ ಕುಮಾರ್ ಉಪಸ್ಥಿತರಿದ್ದರು. ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಸ್ವಾಗತಿಸಿದರು. ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಧರ್ಮಸ್ಥಳದ ಎಸ್.ಕೆ.ಡಿ.ಆರ್.ಡಿ.ಪಿ ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಎಚ್ ಮಂಜುನಾಥ್ ವಂದಿಸಿದರು. ಉಪನ್ಯಾಸಕ ಡಾ.ಬಿ.ಪಿ ಸಂಪತ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು.












Click it and Unblock the Notifications