Get Updates
Get notified of breaking news, exclusive insights, and must-see stories!

ಮಂಗಳೂರಿನಲ್ಲಿ ಜಲಕ್ಷಾಮ ಆತಂಕ: ಜನರ ಆರೋಗ್ಯ ದೃಷ್ಟಿಯಿಂದ ಡಿಸಿ ವಿಶೇಷ ಸೂಚನೆ

ಮಂಗಳೂರಿನಲ್ಲಿ ಈ ಬೇಸಿಗೆಯಲ್ಲಿ ಜಲಕ್ಷಾಮ ಆತಂಕ ಎದುರಾಗಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ತುಂಬೆ ವೆಂಟೆಂಡ್ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕ್ಷೀಣಿಸುತ್ತಿರುವುದೇ ಆತಂಕಕ್ಕೆ ಕಾರಣವಾಗಿದೆ.

ಮಂಗಳೂರು, ಮಾರ್ಚ್‌ 8: ಕರಾವಳಿಯಲ್ಲಿ ಬಿಸಿಲ ಝಳಕ್ಕೆ ಜಲಮೂಲ ಬತ್ತುತ್ತಿದೆ. ಇದೀಗ ಮಂಗಳೂರಿಗೆ ನೀರು ಪೂರೈಸುವ ತುಂಬೆ ಡ್ಯಾಂನಲ್ಲಿ ಒಳಹರಿವು ಒಂದೇ ಸಮನೆ ಇಳಿಕೆಯಾಗುತ್ತಿದೆ. ಎಪ್ರಿಲ್ ಅಂತ್ಯದೊಳಗೆ ಬೇಸಿಗೆ ಮಳೆ ಸುರಿಯದಿದ್ದಲ್ಲಿ ನಗರದಲ್ಲಿ ಜಲಕ್ಷಾಮದ ಆತಂಕ ಎದುರಾಗುವ ಸಂಭವವಿದೆ. ಸದ್ಯ ಡ್ಯಾಂನಲ್ಲಿ ಶೇಖರಣೆಯಾಗಿರುವ ನೀರು ಮುಂದಿನ 50 ರಷ್ಟು ದಿನಗಳಿಗೆ ಮಾತ್ರ ಸಾಕಾಗಬಹುದು.

ಮಂಗಳೂರಿನಲ್ಲಿ ಈ ಬೇಸಿಗೆಯಲ್ಲಿ ಜಲಕ್ಷಾಮ ಆತಂಕ ಎದುರಾಗಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುವ ತುಂಬೆ ವೆಂಟೆಂಡ್ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕ್ಷೀಣಿಸುತ್ತಿರುವುದೇ ಈ ಆತಂಕಕ್ಕೆ ಕಾರಣ. ಡ್ಯಾಂನಲ್ಲಿ 6 ಮೀಟರ್ ನೀರು ನಿಲ್ಲಿಸಲಾಗಿದ್ದು ನೀರಿನ ಮಟ್ಟ ಇಳಿಕೆಯಾಗಿ ಒಳಹರಿವು ಕುಸಿತವಾಗಿದೆ. ನೇತ್ರಾವತಿ ನದಿಯಲ್ಲಿ ಒಳಹರಿವು ಕುಸಿತವಾಗಿದ್ದರಿಂದ ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಲಿದೆ.

Dakshina Kannada DC Special Suggestions For Mangaluru People On Summer

ತುಂಬೆ ವೆಂಟೆಡ್ ಡ್ಯಾಂನಲ್ಲಿ ಶುಕ್ರವಾರ ಸಂಜೆಗೆ ನೀರಿನ ಮಟ್ಟ 5.85ಕ್ಕೆ ಇಳಿಕೆಯಾಗಿದೆ. ಮಂಗಳೂರು ಮಹಾನಗರ ಪಾಲಿಕೆ ಹಾಗೂ ಜನತೆ ಈಗಲೇ ಮುಂಜಾಗ್ರತೆ ವಹಿಸದಿದ್ದಲ್ಲಿ 2019ರಲ್ಲಿ ಎದುರಾದ ನೀರಿನ ಸಮಸ್ಯೆ ಈ ಬಾರಿಯೂ ತಲೆದೋರಲಿದೆ. ಎಂಸಿಎಫ್, ಎಂಆರ್‌ಪಿಎಲ್ ಸೇರಿದಂತೆ ಹಲವಾರು ಕೈಗಾರಿಕೆಗಳಿಗೂ ತುಂಬೆ ಹಾಗೂ ಎಎಂಆರ್ ಡ್ಯಾಂನಿಂದ ನೀರು ಪೂರೈಸಲಾಗುತ್ತಿದೆ. ಸದ್ಯ ನೀರಿನ ಮಟ್ಟ ಕಡಿಮೆಯಾಗುತ್ತಿರುವ ಹಿನ್ನಲೆಯಲ್ಲಿ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಅನಿವಾರ್ಯವಾದಲ್ಲಿ ಕಟ್ಟಡ ಕಾಮಗಾರಿ ಹಾಗೂ ಕೈಗಾರಿಕೆಗಳಿಗೆ ನೀರು ಸ್ಥಗಿತ ಮಾಡಲು ಚಿಂತಿಸಲಾಗಿದೆ.

ಎಎಂಆರ್‌ನಲ್ಲಿ 18.9ರಷ್ಟು ನೀರು ಶೇಖರಣೆಯಿದ್ದು, ಇದರಲ್ಲಿ 14.5ಮೀಟರ್ ನೀರನಷ್ಟೇ ಬಳಸಬಹುದು. ಅನಿವಾರ್ಯವಾದಲ್ಲಿ ಮಾತ್ರ ಈ ನೀರನ್ನು ಬಳಸಲು ನಿರ್ಧರಿಸಲಾಗಿದೆ. ಆದ್ದರಿಂದ ಮಳೆ ಬರುವವರೆಗೆ ಲಭ್ಯವಿರುವ ನೀರನ್ನು ಕುಡಿಯಲು ಮಾತ್ರ ಬಳಸಲು ಜನತೆ ಒತ್ತು ನೀಡಬೇಕು. ನೀರನ್ನು ಪೋಲು ಮಾಡದೆ ಮುಂಜಾಗ್ರತೆವಹಿಸಿ ನೀರಿನ ಅಭಾವ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳಬೇಕಾಗಿದೆ.

Dakshina Kannada DC Special Suggestions For Mangaluru People On Summer

ಸಾರ್ವಜನಿಕರಿಗೆ ಜಿಲ್ಲಾಧಿಕಾರಿಗಳಿಂದ ಸೂಚನೆ

ಇನ್ನು ಬೇಸಿಗೆಯ ಹಿನ್ನಲೆಯಲ್ಲಿ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಸೂಚನೆಗಳನ್ನು ಪಾಲಿಸುವಂತೆ ದ.ಕ ಜಿಲ್ಲಾಧಿಕಾರಿ ಸಲಹೆ‌ ನೀಡಿದ್ದಾರೆ.

ಬೇಸಿಗೆ ಕಾಲದಲ್ಲಿ ಆಹಾರ ಮತ್ತು ನೀರಿನ ಮೂಲಕ ಹರಡುವ ರೋಗಗಳು ಹೆಚ್ಚಾಗುವ ಕಾರಣ ಉಪಹಾರ ಗೃಹಗಳು, ಕ್ಯಾಂಟೀನ್‌ಗಳು, ಹೋಟೆಲ್‌ಗಳು, ಬಾರ್‌ಗಳು ಮತ್ತು ಬೇಕರಿಗಳು ಮುಂತಾದ ಸಿದ್ಧಪಡಿಸಿದ ಆಹಾರಗಳನ್ನು ಮಾರಾಟ ಮಾಡುವ ಆಹಾರ ಉದ್ಯಮಿಗಳು ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಕೆಲವೊಂದು ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ತಿಳಿಸಿದ್ದಾರೆ.

ಬೇಸಿಗೆ ಕಾಲದಲ್ಲಿ ನೀರಿನ ಅಭಾವ ಇರುವುದರಿಂದ ಅಶುದ್ಧ ನೀರಿನ ಮೂಲಗಳಿಂದ ಕುಡಿಯಲು ಹಾಗೂ ಆಹಾರ ಪದಾರ್ಥಗಳನ್ನು ಬೇಯಿಸಲು ನೀರನ್ನು ಬಳಕೆ ಮಾಡುವ ಸಾಧ್ಯತೆ ಇರುವುದರಿಂದ ಆಹಾರೋದ್ಯಮಿಗಳು ನೀರಿನ ಸಂಪು, ನೀರಿನ ಸಂಗ್ರಹಣಾ ಟ್ಯಾಂಕ್, ತೆರೆದ ಬಾವಿ ಕೊಳವೆಬಾವಿ ಮುಂತಾದ ನೀರಿನ ಮೂಲಗಳನ್ನು ಶುಚಿಗೊಳಿಸಬೇಕು.

ಬೇಸಿಗೆ ಕಾಲದಲ್ಲಿ ಸರಿಯಾದ ತಾಪಮಾನದಲ್ಲಿ ಆಹಾರವನ್ನು ಸಂಗ್ರಹಿಸದಿರುವುದರಿಂದ ಆಹಾರ ವಿಷಪೂರಿತವಾಗುವ ಸಾಧ್ಯತೆ ಜಾಸ್ತಿ ಇರುವುದರಿಂದ ಸೂಕ್ಷ್ಮಾಣು ಜೀವಿಗಳು ಮತ್ತು ಅವುಗಳಿಂದ ಬಿಡುಗಡೆಯವಾಗುವ ರಾಸಾಯನಿಕಗಳಿಂದ ಹೊಟ್ಟೆ ನೋವು, ವಾಂತಿ ಭೇದಿ, ನಿರ್ಜಲೀಕರಣ, ಕರುಳು ಬೇನೆ, ಮುಂತಾದ ರೋಗಗಳು ಬರುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು.

ಸಾರ್ವಜನಿಕರಿಗೆ ಕುಡಿಯಲು ಶುದ್ಧೀಕರಿಸಿದ ಹಾಗೂ ಬಿಸಿನೀರು ಪೂರೈಕೆ ಮಾಡಲು ಕ್ರಮವಹಿಸಬೇಕು. ಅವಧಿ ಮೀರಿದ ಅಥವಾ ಹಳಸಿದ ಆಹಾರವನ್ನು ಸರಬರಾಜು ಮಾಡಬಾರದು. ಉಳಿದ ಆಹಾರವನ್ನು ಮರುಬಳಕೆ ಮಾಡಬಾರದು ಎಂದು ಜಿಲ್ಲಾಧಿಕಾರಿ ಎಂ ಆರ್ ರವಿಕುಮಾರ್ ಹೇಳಿದ್ದಾರೆ..

ಇನ್ನು ಕಾರ್ಮಿಕರ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ. ಬೇಸಿಗೆ ಪ್ರಾರಂಭವಾಗಿದ್ದು, ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದು, ಕಾರ್ಮಿಕರ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಈ ದಿಸೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವರ್ಗದ ಕಾರ್ಮಿಕರಿಗೆ ಕೆಲಸದ ಸ್ಥಳಗಳಲ್ಲಿ ಕಾರ್ಮಿಕರ ಸುರಕ್ಷತೆ ಬಗ್ಗೆ ಅಗತ್ಯ ಸೌಲಭ್ಯ, ಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ, ಶುದ್ಧ ಕುಡಿಯುವ ನೀರು ಮತ್ತು ಆಹಾರದ ಲಭ್ಯತೆ ಮತ್ತು ಇತರೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಎಲ್ಲಾ ಉದ್ಯೋಗದಾತರ, ಗುತ್ತಿಗೆದಾರರ ಹಾಗೂ ನಿಯೋಜಕರ ಆದ್ಯ ಕರ್ತವ್ಯವಾಗಿದೆ.

ವಿಶೇಷವಾಗಿ ನಿರ್ಮಾಣ ಕಾಮಗಾರಿಗಳಲ್ಲಿ ತೊಡಗಿರುವ ಎಲ್ಲಾ ವಿವಿಧ ಕಾರ್ಮಿಕರು, ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು, ವಾಣಿಜ್ಯ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಕಾರ್ಮಿಕರು, ಹೋಟೆಲ್ ಸಂಬಂಧಿತ ಸಂಸ್ಥೆಗಳಲ್ಲಿನ ಕಾರ್ಮಿಕರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ವಿಧದ ಕಾರ್ಮಿಕರಿಗೆ ಈ ಕೆಳಕಂಡ ಅಗತ್ಯ ಸೌಲಭ್ಯಗಳನ್ನು ಒದಗಿಸಿಕೊಡುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

1.ಕೆಲಸದ ಸ್ಥಳಗಳಲ್ಲಿ ಕಾರ್ಮಿಕರ ಸುರಕ್ಷತೆಯ ಬಗ್ಗೆ ಅಗತ್ಯವಾದ ಮುನ್ನೆಚ್ಚರಿಕಾ ಕ್ರಮಗಳನ್ನು ತಪ್ಪದೇ ಕೈಗೊಳ್ಳುವುದು ಮತ್ತು ಕಾರ್ಮಿಕರಿಗೆ ಅಗತ್ಯವಿರುವ ಸುರಕ್ಷತಾ ಸಾಮಾಗ್ರಿಗಳನ್ನು ತಪ್ಪದೇ ಒದಗಿಸುವುದು. (ಶೂಗಳು, ಹೆಲ್ಮೆಟ್, ಗ್ಲೌಸ್ ಇತ್ಯಾದಿ)

2. ಕೆಲಸದ ಸ್ಥಳದಲ್ಲಿ ಕಾರ್ಮಿಕರಿಗೆ ಅಗತ್ಯ ಸಂದರ್ಭದಲ್ಲಿ ಆರೋಗ್ಯ ತಪಾಸಣಾ ವ್ಯವಸ್ಥೆಯನ್ನು ಕೈಗೊಳ್ಳುವುದು. ಕೆಲಸದ ಸ್ಥಳದಲ್ಲಿ ಪ್ರಥಮ ಚಿಕಿತ್ಸಾ ಸೌಲಭ್ಯಗಳನ್ನು ಕಡ್ಡಾಯವಾಗಿ ವ್ಯವಸ್ಥೆಗೊಳಿಸುವುದು.

3. ಕಾರ್ಮಿಕರಿಗೆ ಶುದ್ಧ ಕುಡಿಯುವ ನೀರು ಮತ್ತು ಆಹಾರ ಸೌಲಭ್ಯವನ್ನು ವ್ಯವಸ್ಥೆಗೊಳಿಸುವುದು.

4. ಬಿಸಿಲಿನಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಅಗತ್ಯ ನೆರಳಿನ ಸೌಲಭ್ಯ ಕಲ್ಪಸುವುದು.

5. ವಯಸ್ಸಾದ ಹಿರಿಯ ಕಾರ್ಮಿಕರಿಗೆ ಮತ್ತು ಮಹಿಳಾ ಕಾರ್ಮಿಕರಿಗೆ ವಿಶೇಷವಾಗಿ ಗರ್ಭೀಣಿಯರಿಗೆ/ ಬಾಣಂತಿಯರಿಗೆ ಅಗತ್ಯ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳುವುದು.

6. ಕಾರ್ಮಿಕದ ಚಿಕ್ಕ ಮಕ್ಕಳಿಗೆ ಕೆಲಸದ ಸ್ಥಳದಲ್ಲಿ ಅಗತ್ಯ ಶಿಶುಪಾಲನಾ ವ್ಯವಸ್ಥೆ ಕೈಗೊಳ್ಳುವುದು.

7. ಅಂತರ ಜಿಲ್ಲೆ ಮತ್ತು ಅಂತರ ರಾಜ್ಯಗಳಿಂದ ಕೆಲಸಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿರುವ ಕಾರ್ಮಿಕರಿಗೆ ನಿರ್ಮಾಣ ಕಾಮಗಾರಿಗಳ ಮಾಲಕರು, ಗುತ್ತಿಗೆದಾರರು/ ನಿರ್ವಾಹಕರು ಕಲ್ಪಿಸಿರುವ ತಾತ್ಕಾಲಿಕ ಕಾರ್ಮಿಕರ ಶೆಡ್‍ಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳು ದೊರೆಯುವಂತೆ ಕ್ರಮವಹಿಸುವುದು, (ಕುಡಿಯುವ ನೀರು, ಶೌಚಾಲಯ, ವಸತಿ)

8. ಕಾರ್ಮಿಕರಿಗೆ ವಿವಿಧ ಕಾರ್ಮಿಕ ಕಾಯ್ದೆಗಳನ್ವಯ ದೊರೆಯಬೇಕಾದ ಕನಿಷ್ಠವೇತನ, ಸಕಾಲದಲ್ಲಿ ವೇತನ ಪಾವತಿ, ಶಾಸನಬದ್ಧ ಕಟಾವಣೆಗಳಾದ (ಇಎಸ್‌ಐ) ಹಾಗೂ ಇತರ ಸೌಲಭ್ಯಗಳನ್ನು ತಪ್ಪದೇ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಗಳನ್ವಯ ನೀಡಬೇಕು.

ಈ ಎಲ್ಲ ಸೌಲಭ್ಯಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕಾರ್ಮಿಕರಿಗೆ ದೊರೆಯುವಂತೆ ಕ್ರಮವಹಿಸಲು ಸಂಬಂಧಿಸಿದವರಿಗೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+