'ಬಿಎಸ್ ವೈ ಪೂಜೆ ಫಲಿಸಲ್ಲ, ಸರ್ಕಾರ ಅಲುಗಾಡಿಸಲು ಆಗಲ್ಲ'

Recommended Video

      ಬಿ ಎಸ್ ಯಡಿಯೂರಪ್ಪನವರ ಯಾವ ಪೂಜೆ ಕೂಡ ಸಫಲವಾಗೋದಿಲ್ಲ ಎಂದ ಸಿ ಎಸ್ ಪುಟ್ಟರಾಜು | Oneindia Kannada

      ಮಂಗಳೂರು, ಸೆಪ್ಟೆಂಬರ್.14: ಮಾಜಿ ಸಿಎಂ ಯಡಿಯೂರಪ್ಪ ಯಾಗದ ಮೊರೆ ಹೋಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಣ್ಣ ನೀರಾವರಿ ಸಚಿವ ಸಿ.ಎಸ್. ಪುಟ್ಟರಾಜು, ದೇವರ ಆಶೀರ್ವಾದ ಪಡೆಯುವುದರಲ್ಲಿ ರಾಜ್ಯದ ಸಿಎಂ ಮುಂದೆಯಿದ್ದಾರೆ.

      ಯಡಿಯೂರಪ್ಪರ ಯಾವ ಪೂಜೆಯ ಫಲವೂ ಫಲಿಸಲ್ಲ. ಅವರು ಇದೇ ರೀತಿ ತೀರ್ಥಯಾತ್ರೆಗೆ ತೆರಳುತ್ತಿರಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.

      ಸುದ್ದಿಗಾರರೊಂದಿಗೆ ಇಂದು ಶುಕ್ರವಾರ ಮಾತನಾಡಿದ ಅವರು, ಐದು ವರ್ಷಗಳ ಕಾಲ ಸರಕಾರ‌ವನ್ನು ಯಾರೂ ಅಲುಗಾಡಿಸುವುದಕ್ಕೆ ಆಗಲ್ಲ. ಬಿಜೆಪಿ ಶಾಸಕರು ನಮ್ಮ‌ ಜತೆ ಸಂಪರ್ಕದಲ್ಲಿದ್ದಾರೆ. ಯಾವ ಸಂದರ್ಭದಲ್ಲಿ ಫೀಲ್ಡ್‌ಗೆ ಇಳಿಸಬೇಕೆಂದು ಬಿಜೆಪಿಯವರ ನಡವಳಿಕೆ ನೋಡಿ ನಿರ್ಧಾರ ತೆಗೆದುಕೊಳ್ಳುತ್ತೇವೆ.

      CS Puttaraju Said Results of any worship of Yeddyurappa have not been fulfilled

      ಕಾಂಗ್ರೆಸ್ -ಜೆಡಿಎಸ್ ಶಾಸಕರು ಯಾರೂ ಅವರ ಸಂಪರ್ಕದಲ್ಲಿಲ್ಲ. ಇದ್ದಿದ್ದರೆ ಈಗಾಗಲೇ ಶೋ ಮಾಡುತ್ತಿದ್ದರು. ಶೋ ಮಾಡುವುದಕ್ಕೆ ಆಗದಿರುವುದರಿಂದ ಯಡಿಯೂರಪ್ಪ ತೀರ್ಥ ಯಾತ್ರೆ ಮಾಡ್ತಿದ್ದಾರೆ. ಅನಿವಾರ್ಯತೆಯಿದ್ದರೆ ನಾವು ಶಾಸಕರನ್ನು ಶೋ ಮಾಡಿ ತೋರಿಸುತ್ತೇವೆ ಎಂದರು.

      ಮಂಗಳೂರು ಹೊರವಲಯದ ಹರೇಕಳದಿಂದ ಅಡ್ಯಾರ್ ವರೆಗೆ ಸೇತುವೆ, ಕಿಂಡಿ ಅಣೆಕಟ್ಟು ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಸಿದ್ಧರಾಮಯ್ಯ 174 ಕೋಟಿ ರೂ. ಬಜೆಟ್ ನಲ್ಲಿರಿಸಿದ್ದರು. ಈ ಬಗ್ಗೆ ಸಿಎಂ ಜತೆ ಮಾತನಾಡಿ ಯೋಜನೆಗೆ ವ್ಯಯಿಸಲಾಗುತ್ತಿದೆ.

      ಈಗಾಗಲೇ ಸ್ಥಳಪರಿಶೀಲನೆ ನಡೆಸಲಾಗಿದೆ. ಪಶ್ಚಿಮದಿಕ್ಕಿಗೆ ಹರಿಯುವ ನೀರನ್ನು ತಡೆದು ಉಪ್ಪು ನೀರಿಗೆ ಸೇರದಂತೆ ತಡೆದು ಕಾಮಗಾರಿ ಮಾಡಲಾಗಿದೆ. ಅಂತರ್ಜಲ ಹೆಚ್ಚಿಸುವುದಲ್ಲದೇ, ರೈತರಿಗೆ ನೀರು ಒದಗಿಸುವುದು ಇದರ ಉದ್ದೇಶ.

      CS Puttaraju Said Results of any worship of Yeddyurappa have not been fulfilled

      ಕೂಡಲೇ ಟೆಂಡರ್ ಕರೆದು ಮೂರೇ ತಿಂಗಳಲ್ಲಿ ಯೋಜನೆ ಪ್ರಾರಂಭಿಸುವ ಚಿಂತನೆಯಿದೆ ಎಂದು ಪುಟ್ಟರಾಜು ತಿಳಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+