ಕ್ರಿಕೆಟ್ ಪಂದ್ಯದಿಂದ ಕೋಮು ಸೌಹಾರ್ದತೆ ಬಿರುಕು
ಮಂಗಳೂರು, ಮೇ.19: ಕ್ರಿಕೆಟ್ ಪಂದ್ಯದಲ್ಲಿ ಬೌಂಡರಿ, ಸಿಕ್ಸರ್ ಗಳ ಲೆಕ್ಕಾಚಾರಕ್ಕಾಗಿ ಸ್ನೇಹಿತರ ಮಧ್ಯೆ ನಡೆದ ಗಲಾಟೆ ಕೋಮು ಸೌಹಾರ್ದತೆ ಕದಡುವ ಸಾಧ್ಯತೆ ಉಂಟು ಮಾಡಿತು. ಆದರೆ, ಸ್ಥಳೀಯರ ಸಮಯಪ್ರಜ್ಞೆಯಿಂದ ದೊಡ್ಡ ಅನಾಹುತ ತಪ್ಪಿದೆ. ಸೌಹಾರ್ದ ಕ್ರಿಕೆಟ್ ಪಂದ್ಯಾಟ ಸಂಘರ್ಷಕ್ಕೆ ಕಾರಣವಾದ ಘಟನೆಯಲ್ಲಿ ಪ್ರೇಮ್ ನಗರದಲ್ಲಿ ನಡೆದಿದೆ.
ಕುಳಾಯಿ - ಮೈಂದಗುರಿ ಪ್ರದೇಶದಲ್ಲಿ ಕ್ರಿಕೆಟ್ ಪಂದ್ಯಾಟದ ರೋಚಕ ಕ್ಷಣದ ಸಂದರ್ಭದಲ್ಲಿ ಇಸ್ಮಾಯಿಲ್ ನೇತೃತ್ವದ ತಂಡವು ಬ್ಯಾಟಿಂಗ್ ಮಾಡುವಾಗ ಬೌಂಡರಿ ಹೊಡೆದ ಬಾಲ್ ಬೌಂಡರಿ ಪ್ರದೇಶದಲ್ಲಿ ಬಿದ್ದಿದೆ. ಚೆಂಡು ಬೌಂಡರಿಗೆ ಮುನ್ನ ತಡೆದಿದ್ದು ಏಕೆ ಮಾತಿಗೆ ಮಾತು ಬೆಳೆದಿದೆ.
ಈ ನಡುವೆ ಎರಡು ತಂಡಗಳ ಮಧ್ಯೆ ಬಾಯಿ ಹಾಕಲು ಬಂದ ಸೋಮನಾಥ, ಪ್ರಜ್ವಲ್ ಕುಮಾರ್ ಅವರ ಮೇಲೆ ಎರಡು ತಂಡಗಳು ತಿರುಗಿ ಬಿದ್ದಿವೆ. ಶಾಂತಿ ಮಾತುಕತೆಗೂ ಮುನ್ನ ಮಾರಾಮಾರಿ ನಡೆದಿದೆ. ಮೂಲತಃ ಗುರುಪುರ ನಿವಾಸಿ ಸೋಮನಾಥ, ಪ್ರಜ್ವಲ್ ಕುಮಾರ್, ಹಾಗೂ ಮೈಂದಗುರಿ ನಿವಾಸಿಗಳಾದ ಅಶ್ರಫ್, ಸಾಧೀಕ್ , ಇಸ್ಮಾಯಿಲ್ ಗಾಯಗೊಂಡಿದ್ದಾರೆ. ಪಾರ್ಕಿಂಗ್ ನಲ್ಲಿದ್ದ ಕಾರು, ಬೈಕುಗಳು ಜಖಂಗೊಂಡಿವೆ. ಇನ್ನಷ್ಟು ವಿವರ ಮುಂದಿದೆ...

ಬೌಂಡರಿ ಗೆರೆಗೂ ಮುನ್ನ ಬಾಲ್ ತಡೆದಿದ್ದು
ಪ್ರೇಕ್ಷಕರಾಗಿ ಕುಳಿತ್ತಿದ್ದವರು ಬೌಂಡರಿ ಗೆರೆಗೂ ಮುನ್ನ ಬಾಲ್ ತಡೆದಿದ್ದು ಇಷ್ಟೆಲ್ಲ ಗಲಾಟೆಗೆ ಮೂಲ ಕಾರಣ. ಕೊಡಿಕೆರೆ ಕಡೆಯಿಂದ ಇಸ್ಮಾಯಿಲ್ ಹುಡುಗರನ್ನು ಕರೆದುಕೊಂಡು ಬಂದ ಮೈಂದಗುರಿ ಕಡೆಯಿಂದ ಸೋಮನಾಥ್ ಬೆಂಬಲಕ್ಕೆ ಕ್ರಿಕೆಟ್ ತಂಡವಿತ್ತು. ಎರಡು ಕಡೆ ಸರಿಯಾಗಿ ಪೆಟ್ಟು ಬಿದ್ದ ವೇಳೆಗೆ....

ಕೆಲವೆಡೆ ಕಲ್ಲು ತೂರಾಟ ಪ್ರಕರಣ
ಎರಡು ಕಡೆ ಸರಿಯಾಗಿ ಪೆಟ್ಟು ಬಿದ್ದ ವೇಳೆಗೆ ಪೊಲೀಸರು ತುಕಡಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದೆ. ಸ್ಥಳದಲ್ಲಿ ಮೀಸಲು ಪಡೆ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಘಟನೆ ನಂತರ ಕೆಲವೆಡೆ ಕಲ್ಲು ತೂರಾಟ ಪ್ರಕರಣಗಳು ನಡೆದಿತ್ತು. ಅದರೆ, ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಪೊಲೀಸ್ ಆಯುಕ್ತ ಹಿತೇಂದ್ರ ಹೇಳಿದ್ದಾರೆ.

ಎರಡು ಸಮುದಾಯಕ್ಕೂ ಆಗಿದೆ ಗಾಯ
407 ಟೆಂಪೊ, ಮಾರುತಿ ಓಮ್ನಿ, ಅಪೆ ಗೂಡ್ಸ್ ವಾಹನ, ಎರಡು ವಾಹನಗಳು ಜಖಂಗೊಂಡಿವೆ. ಐವರಿಗೆ ಗಾಯಗಳಾಗಿವೆ. ಇಬ್ಬರು ಒಂದು ಸಮುದಾಯಕ್ಕೆ ಸೇರಿದ್ದರೆ, ಮೂವರು ಮತ್ತೊಂದು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಆಯುಕ್ತ ಹಿತೇಂದ್ರ ಹೇಳಿದರು.

ಮೀಸಲು ಪಡೆ ಪೊಲೀಸ್ ಸಿಬ್ಬಂದಿ ಮೊಕ್ಕಾಂ
ಘಟನಾ ಪ್ರದೇಶಕ್ಕೆ ಮಂಗಳೂರು ಪೊಲೀಸ್ ಅಯುಕ್ತ ಹಿತೇಂದ್ರ, ಡಿಸಿಪಿ ಅಪರಾಧ ಪತ್ತೆ ದಳದ ವಿಷ್ಣುವರ್ದನ್, ಎಸಿಪಿ ರವಿಕುಮಾರ್, ಸುರತ್ಕಲ್ ಠಾಣಧಿಕಾರಿ ಎಂ.ಎ ನಟರಾಜ್ ಮುಂತಾದವರು ಅಗಮಿಸಿ ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿದರು, ಅತ್ಯಂತ ಸೂಕ್ಷ ಪ್ರದೇಶವಾದುದ್ದರಿಂದ ಹೆಚ್ಚಿನ ಪೊಲೀಸ್ ಬಂದೊಬಸ್ತ್ ನಡೆಸಲಾಗಿದೆ, ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಾಹನ ಹಾನಿ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications