ದೊರೆಸ್ವಾಮಿಗೆ ಅವಮಾನ; ಬಿಜೆಪಿ ವಿರುದ್ಧ ಯು ಟಿ ಖಾದರ್ ಕಿಡಿ

ಮಂಗಳೂರು, ಫೆಬ್ರವರಿ 27: 'ದೊರೆಸ್ವಾಮಿಯಂತಹ ಹಿರಿಯ ಸ್ವಾತಂತ್ರ್ಯ ಹೋರಾಟಗಾರರ ವಿರುದ್ಧ ಮಾತನಾಡುವವರೇ ನಿಜವಾದ ದೇಶದ್ರೋಹಿಗಳು. ಬಿಜೆಪಿ ಮನೋಭಾವನೆಯನ್ನು ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ' ಎಂದು ಕಾಂಗ್ರೆಸ್ ಮುಖಂಡ ಯುಟಿ ಖಾದರ್ ಯತ್ನಾಳ ವಿರುದ್ಧ ಕಿಡಿಕಾರಿದರು.

Recommended Video

      ಖಾದರ್ ಹೇಳಿಕೆಯಿಂದ ಗಲಭೆ ಹೆಚ್ಚಾಯಿತು: ಸದಾನಂದಗೌಡ | D. V. Sadananda Gowda | Oneindia Kannada

      ಮಂಗಳೂರಿನಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಸ್ವಾತಂತ್ರ‍್ಯ ಹೋರಾಟಗಾರ ದೊರೆಸ್ವಾಮಿ ಅವರ ಕುರಿತು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೀಡಿದ ಹೇಳಿಕೆಯ ಕುರಿತು ಅವರು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿ, ಇದು ಸ್ವಾತಂತ್ರ್ಯ ಹೋರಾಟಗಾರರಿಗೆ ಬಿಜೆಪಿ ಮಾಡಿದ ಬಹುದೊಡ್ಡ ಅವಮಾನ ಇದಾಗಿದೆ. ಬಿಜೆಪಿ ವರಿಷ್ಠರಿಗೆ ಸ್ವಾತ್ರಂತ್ರ್ಯ ಹೋರಾಟಗಾರರ ಬಗ್ಗೆ ನಿಜವಾದ ಗೌರವ ಇದ್ದರೆ ಯತ್ನಾಳ ಮೇಲೆ ಮೊದಲು ಕ್ರಮ ಕೈಗೊಳ್ಳಲಿ' ಎಂದರು.

      'ದೆಹಲಿಯಲ್ಲಿನ ಅಶಾಂತಿ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು ಜನರು ಸಾವಿಗೀಡಾಗಿರುವುದು ಬೇಸರದ ಸಂಗತಿ. ವಿಶ್ವ ಮಟ್ಟದಲ್ಲಿ ಇದು ಭಾರತಕ್ಕೆ ಕಪ್ಪುಚುಕ್ಕೆಯಾಗಿದೆ. ಕೇಂದ್ರ ಸರಕಾರ ಗಲಾಟೆ ಬಗೆಹರಿಸಲು ವಿಫಲವಾಗಿದೆ ಎಂದರು.

      Congress Leader UT Khader Attacks On BJP MLA Yatnal

      'ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ದೆಹಲಿಯ ಘಟನೆಗೆ ಕಾಂಗ್ರೆಸ್ ಕಾರಣ ಅಂತಾರೆ. ಇದು ನಗುವಿನ ಸಂಗತಿಯಾಗಿದೆ. ನಳಿನ್ ಕುಮಾರ್ ಅಲಂಕಾರಕ್ಕೆ ಸ್ಥಾನ ಪಡೆದವರು ಅವರಿಗೆ ಯಾವುದೇ ಅಧಿಕಾರವಿಲ್ಲ. ಅವರಿಗೆ ಪಕ್ಷ ನೀಡಿರುವ ಕೆಲಸ ಕಾಂಗ್ರೆಸ್ ಅನ್ನು ದೂರುವುದಾಗಿದೆ' ಎಂದು ಆರೋಪಿಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+