ಭೂಗತ ಪಾತಕಿ ಛೋಟಾ ರಾಜನ್ ಸಹಚರ ವಿನೇಶ್ ಶೆಟ್ಟಿ ಬಂಧನ
ಮುಂಬೈ, ಆಗಸ್ಟ್ 06: ಭೂಗತ ಪಾತಕಿ ಛೋಟಾ ರಾಜನ್ ಸಹಚರ ವಿನೇಶ್ ಶೆಟ್ಟಿಯನ್ನು ಮುಂಬೈನಲ್ಲಿ ಮಂಗಳೂರಿನ ಕೋಣಾಜೆ ಪೊಲೀಸರು ಬಂಧಿಸಿ, ವಶಕ್ಕೆ ಪಡೆದಿದ್ದಾರೆ.
ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿನೇಶ್ ನನ್ನು ಹೆಚ್ಚಿನ ವಿಚಾರಣೆಗಾಗಿ ಮಂಗಳೂರಿಗೆ ಕರೆತರಲಾಗಿದೆ. ಉಡುಪಿ ಜಿಲ್ಲೆಯ ಶಿರ್ವ ಮೂಲದ ವಿನೇಶ್ ಪ್ರಕರಣವೊಂದರಲ್ಲಿ ಥಾಣೆ ಕೋರ್ಟಿಗೆ ಹಾಜರಾಗಿದ್ದ ವೇಳೆ ಬಂಧನವಾಗಿದೆ. ಮಂಗಳೂರು ಕೋರ್ಟಿನಿಂದ ಬಾಡಿ ವಾರೆಂಟ್ ಪಡೆದು ಅರೆಸ್ಟ್ ಮಾಡಲಾಗಿದೆ.

ಮಂಗಳೂರು ಮುಡಿಪು ಬಳಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. 2003 ರಲ್ಲಿ ವೇಣುಗೋಪಾಲ್ ನಾಯಕ್ ಮತ್ತು ಸಂತೋಷ ಶೆಟ್ಟಿ ಎಂಬವರ ಕೊಲೆ ಪ್ರಕರಣ ಪ್ರಮುಖ ಆರೋಪಿ. ಮಂಗಳೂರು ಹೊರವಲಯದ ಮುಡಿಪು ಎಂಬಲ್ಲಿ ನಡೆದಿದ್ದ ಕೊಲೆ ಪ್ರಕರಣ. ನಂತರ ಮುಂಬೈ ನಲ್ಲಿ ತಲೆ ಮರೆಸಿಕೊಂಡಿದ್ದ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಣಾಜೆ ಪೋಲೀಸರಿಂದ ಬಂಧನವಾಗಿದೆ.












Click it and Unblock the Notifications