2009ರಲ್ಲಿ ನಡೆದ ಕೊಲೆ ಪ್ರಕರಣದ ತನಿಖೆಗೆ ಸಿಸಿಬಿಗೆ!

ಮಂಗಳೂರು , ಜೂನ್ 17 : ಮಂಗಳೂರು ನಗರದ ಅಪಾರ್ಟ್‌ಮೆಂಟ್‌ನಲ್ಲಿ 2009ರಲ್ಲಿ ನಡೆದ ಕೊಲೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ. ಸಿಸಿಬಿ ಪೊಲೀಸರು ಕೊಲೆ ಕುರಿತು ಭೂಗತ ಪಾತಕಿ ರವಿ ಪೂಜಾರಿ ವಿಚಾರಣೆ ನಡೆಸಲಿದ್ದಾರೆ.

Recommended Video

      History of India China border dispute | Oneindia Kannada

      ಡಿಜಿ&ಐಜಿಪಿ ಪ್ರವೀಣ್ ಸೂದ್ ಕೊಲೆ ಪ್ರಕರಣದ ತನಿಖೆಯನ್ನು ಕೇಂದ್ರ ಅಪರಾಧ ದಳ (ಸಿಸಿಬಿ)ಗೆ ವಹಿಸಿ ಆದೇಶ ಹೊರಡಿಸಿದ್ದಾರೆ. ಮಂಗಳೂರು ಪೊಲೀಸರು ತನಿಖೆಯನ್ನು ಸಿಸಿಬಿಗೆ ಹಸ್ತಾಂತರ ಮಾಡಿದ್ದಾರೆ.

      2009ರ ಏಪ್ರಿಲ್ 9ರಂದು ಮಂಗಳೂರು ನಗರದ ಅಪಾರ್ಟ್‌ಮೆಂಟ್‌ನಲ್ಲಿ ಯುವ ವಕೀಲ ನೌಶಾದ್ ಕಾಸೀಂಜಿ ಹತ್ಯೆ ನಡೆದಿತ್ತು. ಮಂಗಳೂರು ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದರು. ಈಗ ಸಿಸಿಬಿಗೆ ಪ್ರಕರಣ ಹಸ್ತಾಂತರವಾಗಿದೆ.

      CCB To Probe Lawyer Naushad Kashimji Murder Case

      ನೌಶಾದ್ ಕಾಸೀಂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 12 ಆರೋಪಿಗಳನ್ನು ಹೆಸರಿಸಲಾಗಿತ್ತು. ಏಳು ಆರೋಪಿಗಳನ್ನು ಬಂಧಿಸಲಾಗಿತ್ತು. ಶಿವಪ್ರಕಾಶ್, ದೆಹಲಿಯ ರವಿ ಶುಕ್ವಾನಿ ವಿರುದ್ಧದ ಆರೋಪ ಸಾಬೀತು ಆಗದ ಕಾರಣ ಅವರು ಖುಲಾಸೆಗೊಂಡಿದ್ದರು.

      ಉಳಿದ ಐವರು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಭೂಗತ ಪಾತಕಿ ರಶೀದ್ ಮಲಬಾರಿ ಪರವಾಗಿ ನೌಶಾದ್ ಕಾಸೀಂಜಿ ವಾದಿಸಿದ್ದರು. ಈ ಕಾರಣಕ್ಕಾಗಿ ರವಿ ಪೂಜಾರಿ ಸೂಚನೆಯಂತೆ ನೌಶಾದ್ ಕಾಸೀಂಜಿ ಹತ್ಯೆ ನಡೆದಿದೆ ಎಂಬ ಆರೋಪವಿದೆ.

      ಆದ್ದರಿಂದ, ಪೊಲೀಸ್ ಮಹಾ ನಿರ್ದೇಶಕರು ಪ್ರಕರಣವನ್ನು ಸಿಸಿಬಿಗೆ ವಹಿಸಿದ್ದಾರೆ. ಭೂಗತ ಪಾತಕಿ ರವಿ ಪೂಜಾರಿಯನ್ನು ನೌಶಾದ್ ಕಾಸೀಂಜಿ ಹತ್ಯೆ ಪ್ರಕರಣದ ತನಿಖೆಗಾಗಿಯೇ ಸಿಸಿಬಿ 10 ದಿನಗಳ ಕಾಲ ವಶಕ್ಕೆ ಪಡೆದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+