ಮಂಗಳೂರು : ಗಾಂಜಾ ಮಾರುತ್ತಿದ್ದ ಬಸ್ ಕಂಡಕ್ಟರ್ ಬಂಧನ
ಮಂಗಳೂರು, ಅಕ್ಟೋಬರ್ 18 : ಮಂಗಳೂರು ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ, ಜನರಿಗೆ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಮೊಹಮ್ಮದ್ ಇಝುದ್ದೀನ್ (32) ಎಂದು ಗುರುತಿಸಲಾಗಿದೆ. ಬಂಟ್ವಾಳ ಮೂಲದ ಮೊಹಮ್ಮದ್ ವೃತ್ತಿಯಲ್ಲಿ ಕಂಡೆಕ್ಟರ್ ಆಗಿದ್ದಾರೆ. ನಗರದ ಕಂಕನಾಡಿ, ಪಂಪ್ ವೆಲ್ ವೃತ್ತ ಬಳಿ ವಿದ್ಯಾರ್ಥಿಗಳಿಗೆ ಹಾಗೂ ಜನರಿಗೆ ಈತ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ.

ಮಂಗಳೂರಿನ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಅನ್ವಯ ದಾಳಿ ನಡೆಸಿ, ಮೊಹಮ್ಮದ್ ಇಝುದ್ದೀನ್ ಬಂಧಿಸಿದ್ದಾರೆ. ಬಂಧಿಸುವ ವೇಳೆಯಲ್ಲಿ ಆತನ ಬಳಿ ಗಾಂಜಾ ಇತ್ತು.
ಮೊಹಮ್ಮದ್ ಇಝುದ್ದೀನ್ ಬಳಿಯಿಂದ 200 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಈತ ಗಾಂಜಾವನ್ನು ಕೇರಳದ ಕುಂಜತ್ತೂರು ಬಳಿಯಿಂದ ಖರೀದಿ ಮಾಡಿ ಮಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.












Click it and Unblock the Notifications