"ಐಟಿ ದಾಳಿ ನೋವಿತ್ತು, ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿಯಲ್ಲ"

Recommended Video

      ಐಟಿ ದಾಳಿ ನೋವಿತ್ತು, ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿಯಲ್ಲ | Oneindia Kannada

      ಮಂಗಳೂರು, ಜುಲೈ 30: ಕೆಫೆ ಕಾಫಿ ಡೇ ಮಾಲೀಕ ವಿ.ಜಿ ಸಿದ್ದಾರ್ಥ ಅವರ ನಾಪತ್ತೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ನೇತ್ರಾವತಿ ನದಿಪಾತ್ರದಲ್ಲಿ ಶೋಧ ಕಾರ್ಯ ಮುಂದುವರೆದಿದೆ.

      ಈ ನಡುವೆ ಘಟನೆ ಬಗ್ಗೆ ತಿಳಿದ ಕುಟುಂಬಸ್ಥರು, ಸ್ನೇಹಿತರು ಮಂಗಳೂರಿನ ಕಡೆಗೆ ಧಾವಿಸುತ್ತಿದ್ದಾರೆ. ಕಂಕನಾಡಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಮಂಗಳೂರು- ಉಳ್ಳಾಲ ಸಮೀಪದ ಕೇರಳ ಕಡೆಗೆ ಸಂಪರ್ಕ ಒದಗಿಸುವ ನೇತ್ರಾವತಿ ಸೇತುವೆ ಬಳಿಯಿಂದ ಸಿದ್ದಾರ್ಥ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

      ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಸಿದ್ದಾರ್ಥ ಅವರು ಕಣ್ಮರೆಯಾದ ಬಳಿಕ ಅವರ ಕಾರಿನ ಚಾಲಕ ಬಸವರಾಜ ಪಾಟೀಲ್, ಕುಟುಂಬಸ್ಥರಿಗೆ, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

      Cafe Coffee Day VG Siddhartha missing his friend Halappa Gowda reaction

      ಘಟನಾ ಸ್ಥಳದಿಂದ ವರದಿ: ಈ ನಡುವೆ ನಮ್ಮ ಪ್ರತಿನಿಧಿ ಕಿರಣ್ ಸಿರ್ಸಿಕರ್ ಜೊತೆ ಮಾತನಾಡಿದ ಶೃಂಗೇರಿ ಶಾಸಕ ಟಿಡಿ ರಾಜೇಗೌಡ, "ನಿಜಕ್ಕೂ ಇದು ಆಘಾತಕಾರಿ ಸುದ್ದಿ, ಐಟಿ ದಾಳಿಯಿಂದ ಅವರಿಗೆ ತುಂಬಾ ನೋವಾಗಿತ್ತು. ಮಾನಸಿಕವಾಗಿ ಬೇಜಾರು ಮಾಡಿಕೊಂಡಿದ್ದರು. ಇಷ್ಟೆಲ್ಲ ಪ್ರಾಮಾಣಿಕವಾಗಿ ಕೆಲಸ ಮಾಡಿ, ಇಷ್ಟೆಲ್ಲ ಜನರಿಗೆ ಉದ್ಯೋಗ ಕೊಟ್ಟು, ದೇಶಕೋಸ್ಕರ ದುಡಿದು, ಕೋಟ್ಯಂತರ ರುಪಾಯಿ ತೆರಿಗೆ ಕಟ್ಟಿ ಕೂಡಾ ಹಿಂದೆ ಆಯ್ತಲ್ಲ ಅಂತಾ ನೊಂದಿದ್ದರು. ಬಹಳ ಮೃದು ಸ್ವಭಾವದವರು, ಇಲ್ಲೆಲ್ಲ ತುಂಬಾ ಗೌರವವಿದೆ. ಆದರೆ, ಇದೆ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾದರು" ಎಂದು ಹೇಳಲಾಗದು ಎಂದಿದ್ದಾರೆ.

      "ನನಗೆ ರಾತ್ರಿ 11.30ರ ಸುಮಾರಿಗೆ ನಾಪತ್ತೆ ವಿಷಯ ತಿಳಿಯಿತು, ಮಳೆ ಇದ್ದಿದ್ದರಿಂದ ಬೆಳಗ್ಗೆ 6.30 ಸುಮಾರಿಗೆ ಇಲ್ಲಿಗೆ ಬಂದಿದ್ದೇನೆ, ಮಾಜಿ ಸಚಿವ ಯುಟಿ ಖಾದರ್, ಡಿಸಿ ಸೆಸಿಕಾಲ್ ಸೆಂಥಿಲ್, ಡಿಸಿಪಿಗಳ ಜೊತೆ ಮಾತನಾಡಿದೆ, ಶೋಧಕಾರ್ಯ ಮುಂದುವರೆದಿದೆ" ಎಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+