ಮಂಗಳೂರು: ಉದ್ಯಮಿ ಅನೀಶ್ ಶೆಟ್ಟಿ ಕೊಚ್ಚಿ ಕೊಂದ್ರು

ಮಂಗಳೂರು, ಮೇ.9: ರಿಯಲ್ ಎಸ್ಟೇಟ್ ಉದ್ಯಮಿ, ದೇವಿ ಟ್ರಾವೆಲ್ ಏಜೆನ್ಸಿ ಮಾಲೀಕನಾಗಿ ಸ್ಥಳೀಯರಿಗೆ ಪರಿಚಯವಿರುವ ಅನೀಶ್ ಶೆಟ್ಟಿ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ಮಧ್ಯಾಹ್ನ ಕೊನೆಯುಸಿರೆಳಿದ್ದಾರೆ. ಕದ್ರಿ ಪಾರ್ಕ್ ಬಳಿ ಶುಕ್ರವಾರ ಬೆಳಗ್ಗೆ ಅನೀಶ್ ಮೇಲೆ ಹಲ್ಲೆ ನಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಅನೀಶ್ ಶೆಟ್ಟಿ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.

ಭೂಗತ ಪಾತಕಿ ಕೊರಗ ವಿಶ್ವನಾಥ್ ಶೆಟ್ಟಿ ಸಹಚರನಾಗಿ ಗುರುತಿಸಿಕೊಂಡಿದ್ದ ಅನೀಶ್ ಶೆಟ್ಟಿ ವಿರುದ್ಧವೂ ವಿವಿಧ ಪೊಲೀಸ್ ಠಾಣೆಗಳಲ್ಲಿ ಏಳೆಂಟು ಪ್ರಕರಣಗಳಿವೆ.ಭೂಗತ ಪಾತಕಿ ಬನ್ನಂಜೆ ರಾಜನ ಸಹಚರ ಹೇಮಂತ್ ಹಾಗೂ ಸಹಚರರ ಗುಂಪು ಅನೀಶ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

40 ವರ್ಷ ವಯಸ್ಸಿನ ಹೋಗೈ ಬಜಾರಿನ ಹೇಮಂತ್ ಎಂಬುವರು ಕದ್ರಿ ಪಾರ್ಕ್ ಬಳಿಯ ಡಿಂಕಿ ಡೈನ್ ಸಮೀಪವಿದ್ದ 34 ವರ್ಷದ ಅನೀಶ್ ಶೆಟ್ಟಿ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಶುಕ್ರವಾರ ಬೆಳಗ್ಗೆ 10.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಜನನಿಬಿಡ ಸ್ಥಳದಲ್ಲಿ ನಡೆದ ಮಾರಾಮಾರಿ ಕಂಡು ಜನತೆ ಬೆಚ್ಚಿಬಿದ್ದಿದ್ದಾರೆ.

Mangalore: Hemanth Hoige Bazar Brutally Assaults Bus Owner Aneesh Shetty - Condition Critical

ಪ್ರಾಥಮಿಕ ವರದಿಗಳ ಪ್ರಕಾರ ಇಬ್ಬರ ನಡುವೆ ಆರ್ಥಿಕ ವಿಷಯವಾಗಿ ಜಗಳ ನಡೆದಿತ್ತು. ಹೀಗಾಗಿ ಹಲ್ಲೆ ಮಾಡಿರಬಹುದು ಎಂದು ಶಂಕಿಸಲಾಗಿದೆ. ಅನೀಶ್ ಅವರ ಗೆಳೆಯರೊಬ್ಬರ ಪ್ರಕಾರ, ಬೆಳಗ್ಗೆ ಅನೀಶ್ ಗೆ ಒಂದು ಫೋನ್ ಕರೆ ಬಂದಿದೆ. ಡಿಂಕಿ ಡೈನ್ ಬಳಿ ಬನ್ನಿ, ಲ್ಯಾಂಡ್ ಡೀಲಿಂಗ್ ಮಾಡಬೇಕಿದೆ ಎಂದಿದ್ದಾರೆ. ಶಕ್ತಿನಗರ ಜಮೀನು ಮಾರಾಟ ಸಂಬಂಧ ಮಾತುಕತೆ ನಡೆಸಲು ಅನೀಶ್ ಅವರು ತೆರಳಿದ್ದಾರೆ.

ಇದೇ ವೇಳೆ ಗೋರಕ್ಷನಾಥ ಜ್ಞಾನ ಮಂದಿರದ ಬಳಿ ಮಾರುತಿ ಜೆನ್ ಕಾರು ಪಾರ್ಕ್ ಮಾಡಿ ಹಂಚು ಹಾಕಿಕೊಂಡು ಹೇಮಂತ್ ಹಾಗೂ ಅವರ ಇಬ್ಬರ ಸ್ನೇಹಿತರು ಕಾದು ಕುಳಿತ್ತಿದ್ದಾರೆ. ಅನೀಶ್ ಅವರು ನಿಗದಿತ ಸ್ಥಳಕ್ಕೆ ಬರುತ್ತಿದ್ದಂತೆ, ಹೇಮಂತ್ ಬಳಿ ಇದ್ದ ಒಬ್ಬ ವ್ಯಕ್ತಿ ಅನೀಶ್ ಬಳಿ ಬಂದು ಕೆಲವು ದಾಖಲೆ ಪತ್ರಗಳನ್ನು ನೀಡಿದ್ದಾನೆ.

ದಾಖಲೆ ಪತ್ರಗಳೆಲ್ಲ ಬೋಗಸ್ ಎಂದು ತಿಳಿದ ಅನೀಶ್ ಡೀಲ್ ಗೆ ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರೆ. ಆದರೆ, ಡೀಲ್ ಕುದುರಿಸಿದರೆ ಒಳ್ಳೆ ದುಡ್ಡು ಇಬ್ಬರಿಗೂ ಸಿಗುತ್ತದೆ ಎಂದು ಆ ವ್ಯಕ್ತಿ ಪುಸಲಾಯಿಸತೊಡಗಿದ್ದಾನೆ. ಈ ಸಮಯದಲ್ಲಿ ದಾಖಲೆ ಪತ್ರ ನೋಡುತ್ತಿದ್ದ ಅನೀಶ್ ಮೇಲೆ ಹಿಂದಿನಿಂದ ಹೇಮಂತ್ ಹಾಗೂ ಆತನ ಗೆಳೆಯ ದಾಳಿ ಮಾಡಿದ್ದಾರೆ.

ನಾನು ಅನೀಶ್ ಸಹಾಯಕ್ಕೆ ತೆರಳುವಷ್ಟರಲ್ಲಿ ಮೂವರು ಸೇರಿ ಅನೀಶ್ ಗೆ ಕಂಡಾಪಟ್ಟೆ ಹೊಡೆದು ಜೆನ್ ಕಾರು ಹತ್ತಿ ಪರಾರಿಯಾಗಿದ್ದಾರೆ. ನಂತರ ಅನೀಶ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ದೇಹ ಪರಿಸ್ಥಿತಿ ಕ್ಷೀಣವಾಗಿದೆ ಎಂದಿದ್ದಾರೆ ಎಂದು ಅನೀಶ್ ಅವರ ಗೆಳೆಯ ವಿವರಿಸಿದ್ದಾರೆ. ಕದ್ರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+