ಕರಾವಳಿ ಧಗ ಧಗ: ತಂಪು ಪಾನೀಯಕ್ಕೆ ಡಿಮ್ಯಾಂಡೋ ಡಿಮ್ಯಾಂಡ್

ತಿಂಗಳ ಹಿಂದಷ್ಟೆ ಕಾಫಿ, ಟೀ ಕುಡಿದು ದೇಹ ಬಿಸಿ ಮಾಡಿಕೊಳ್ಳುತ್ತಿದ್ದ ಗ್ರಾಹಕರು, ಇಂದು ದೇಹ ತಂಪಾಗಿಸಿಕೊಳ್ಳಲು ಎಳನೀರು, ಕಲ್ಲಂಗಡಿ, ಐಸ್ ಕ್ರೀಂ, ಹಣ್ಣಿನ ರಸಗಳ ಮೊರೆ ಹೋಗುತ್ತಿದ್ದಾರೆ.

ಮಂಗಳೂರು,

ಮಾರ್ಚ್
2:
ಬೇಸಿಗೆ
ಆರಂಭದಲ್ಲೇ
ಕರಾವಳಿ
ಧಗ
ಧಗ..!
ಹೌದು
ಕರಾವಳಿಯಲ್ಲಿ
ಬಿಸಿಲ
ತಾಪ
ದಿನದಿಂದ
ದಿನಕ್ಕೆ
ಏರತೊಡಗಿದೆ.
ತಿಂಗಳ
ಹಿಂದಷ್ಟೆ
ಕಾಫಿ,
ಟೀ
ಕುಡಿದು
ದೇಹ
ಬಿಸಿ
ಮಾಡಿಕೊಳ್ಳುತ್ತಿದ್ದ
ಗ್ರಾಹಕರು,
ಇಂದು
ದೇಹ
ತಂಪಾಗಿಸಿಕೊಳ್ಳಲು
ಎಳನೀರು,
ಕಲ್ಲಂಗಡಿ,
ಐಸ್
ಕ್ರೀಂ,
ಹಣ್ಣಿನ
ರಸಗಳ
ಮೊರೆ
ಹೋಗುತ್ತಿದ್ದಾರೆ.

id="toptextpromo">
id='are-slot-1'
class='oiad
oi-axt
oiadv'>

ನಗರದಲ್ಲಿ

ತಂಪು
ಪಾನೀಯ
ಮಾರಾಟ
ಮಳಿಗೆಗಳಲ್ಲಿ
ವ್ಯಾಪಾರ
ಜೋರಾಗಿ
ನಡೆಯುತ್ತಿದೆ.
ಅಂದಹಾಗೆ
ಪ್ರಸ್ತುತ
ಕರಾವಳಿಯ
ಉಷ್ಣಾಂಶ
39ಡಿಗ್ರಿ
ಸೆಲ್ಸಿಯಸ್![ಫೆಬ್ರವರಿಯಲ್ಲಿ
ಮಂಗಳೂರು
ಕಸ್ಟಮ್ಸ್
ಅಧಿಕಾರಿಗಳಿಂದ
ಭರ್ಜರಿ
ಬೇಟೆ]

id='are-slot-2'
class='oiad
oi-axt
oiadv'>

ಯಾವುದಕ್ಕೆ ಬೇಡಿಕೆ?

ಯಾವುದಕ್ಕೆ ಬೇಡಿಕೆ?

ಈಗಾಗಲೇ ಬಿಸಿಲ ಹೊಡೆತಕ್ಕೆ ಕಂಗಾಲಾಗಿರುವ ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಮಧ್ಯಾಹ್ನದ ಸಂದರ್ಭದಲ್ಲಿ ಜನ ಸಂಚಾರ ವಿರಳವಾಗಿರುತ್ತದೆ. ಎಳನೀರು, ಕಬ್ಬಿನ ಹಾಲು, ಮಜ್ಜಿಗೆ, ಲಸ್ಸಿ, ನಿಂಬೆ ಪಾನಕ, ಜೀರಾ ಸೋಡಾ, ಕಲ್ಲಂಗಡಿ, ಕರಬೂಜ, ದ್ರಾಕ್ಷಿ, ಮತ್ತಿತರರ ಬ್ರಾಂಡೆಡ್ ಕಂಪೆನಿಗಳ ತಂಪು ಪಾನೀಯ, ಐಸ್‌ಕ್ರೀಮ್‌ಗೆ ಬೇಡಿಕೆ ಹೆಚ್ಚಿದೆ.[ಆನೆ ಹಾವಳಿ ಬಗ್ಗೆ ಪತ್ರ ಬರೆದ ಸುಳ್ಯ ಬಾಲಕಿಗೆ ಪ್ರಧಾನಿ ಕಚೇರಿ ಸ್ಪಂದನೆ]

ಜನದಟ್ಟಣೆ

ಜನದಟ್ಟಣೆ

ನಗರದ ಜ್ಯೂಸ್ ಸೆಂಟರ್ ಮತ್ತು ಐಸ್‌ಕ್ರೀಂ ಪಾರ್ಲರ್‌ಗಳಲ್ಲಿ ಕೂರಲು, ನಿಲ್ಲಲು ಆಗದಷ್ಟು ಜನ ದಟ್ಟಣೆ ಅಧಿಕವಾಗುತ್ತಿದೆ. ಬಗೆ ಬಗೆಯ ತಂಪು ಪಾನೀಯ ಮತ್ತು ಐಸ್‌ಕ್ರೀಂ ತಿಂದು ಫ್ಯಾನ್ ಗಾಳಿಗೆ ಮುಖವೊಡ್ಡಿ ಜನರು ಆಹ್ಲಾದ ಪಡುತ್ತಿದ್ದಾರೆ.

 ಜ್ಯೂಸ್ ಬೆಲೆ ಏರಿಸಲು ನಿರ್ಧಾರ

ಜ್ಯೂಸ್ ಬೆಲೆ ಏರಿಸಲು ನಿರ್ಧಾರ

ಜ್ಯೂಸ್ ಸೆಂಟರ್‌ಗಳಲ್ಲಿ ಕಲ್ಲಂಗಡಿ ಮತ್ತು ಮೊಸಂಬಿ, ಕಿತ್ತಳೆ ಹಾಗೂ ಕರಬೂಜ ಜ್ಯೂಸಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಉಳಿದಂತೆ ಸಪೋಟ, ಪೈನಾಪಲ್, ದ್ರಾಕ್ಷಿ, ಸೇಬಿನ ಜ್ಯೂಸ್‌ಗೆ ಸಾಮಾನ್ಯ ಬೇಡಿಕೆ. ಈಗಾಗಲೇ ಕೆಲವು ಜ್ಯೂಸ್ ಸೆಂಟರ್‌ಗಳಲ್ಲಿ 20 ರಿಂದ 30ರವರೆಗೆ ಬೆಲೆ ಏರಿಸಲಾಗಿದೆ. ಕಾರಣ ಹಣ್ಣುಗಳ ಬೆಲೆ ಏರಿಕೆ. ಮಿನಿರಲ್ ವಾಟರ್ ಬಳಸುತ್ತೇವೆ ಎನ್ನುವುದು ಜ್ಯೂಸ್ ಸೆಂಟರ್ ಮಾಲೀಕರ ಸಮಜಾಯಿಷಿ.[ಮಂಗ್ಳೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಮುಹೂರ್ತ ಫಿಕ್ಸ್]

 ವೈದ್ಯರ ಸಲಹೆ ಏನು

ವೈದ್ಯರ ಸಲಹೆ ಏನು

ಬಿಸಿಲ ದಾಹದಿಂದ ತಪ್ಪಿಸಿಕೊಳ್ಳಲು ಆದಷ್ಟು ಹಣ್ಣಿನಿಂದ ತಯಾರಿಸಿದ ಪಾನೀಯ ಸೇವನೆ ಒಳಿತು ಎಂಬುದು ವೈದ್ಯರ ಸಲಹೆ. ಕಂಪೆನಿ ಪೇಯಗಳಲ್ಲಿ ಇಂಗಾಲದ ಡೈಆಕ್ಸೈಡ್ ಅಂಶ ಇರುವುದರಿಂದ ದಂತಗಳಿಗೆ ತೊಂದರೆಯಾಗುತ್ತದೆ. ಅತ್ಯಧಿಕ ಸೇವಿಸುವುದರಿಂದ ಡಯಾಬಿಟಿಸ್ ಬರುವ ಸಾಧ್ಯತೆ ಇದೆ. ದೇಹದ ಮೂಳೆ ಕೃಶವಾಗುತ್ತವೆ. ದೇಹದ ತೂಕ ಹೆಚ್ಚುತ್ತದೆ. ಬೊಜ್ಜು, ರಕ್ತದ ಒತ್ತಡ ಹೆಚ್ಚುತ್ತದೆ ಎಂಬುದು ವೈದ್ಯಕೀಯ ಪರೀಕ್ಷೆಗಳಿಂದ ಸ್ಪಷ್ಟವಾಗಿದೆ.

ಬದಲಾದ ಪರಿಸ್ಥಿತಿ

ಬದಲಾದ ಪರಿಸ್ಥಿತಿ

ಮಹಿಳೆಯರು ಹಾಗೂ ಹೆಣ್ಣುಮಕ್ಕಳು ಮಳೆಗಾಲಕ್ಕೆ ಮಾತ್ರ ಸೀಮಿತವಾಗಿದ್ದ ಕೊಡೆಗಳನ್ನು ಸೂರ್ಯನ ತಾಪದಿಂದ ತಪ್ಪಿಸಿಕೊಳ್ಳಲು ಬಳಸುತ್ತಿದ್ದಾರೆ. ಆದರೆ ಈಗ ರಸ್ತೆಯಲ್ಲಿ ಓಡಾಡುತ್ತಿದ್ದ ಪುರುಷರು ತಲೆಗೆ ಸ್ಕಾರ್ಫ್ ಕಟ್ಟಿಕೊಂಡು ಓಡಾಡುವ ಪರಿಸ್ಥಿತಿ ಎದುರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+