ನಿಶ್ಚಿತಾರ್ಥ ಮುಗಿದ ಬಳಿಕ 5 ಲಕ್ಷದ ಚಿನ್ನಾಭರಣ ನಾಪತ್ತೆ
ಮಂಗಳೂರು, ಫೆ.3 : ನಿಶ್ಚಿತಾರ್ಥದ ದಿನವೇ ಯುವತಿಯ 5 ಲಕ್ಷ ರೂ. ಒಡವೆ ಕಳುವಾದ ಘಟನೆ ಮಂಗಳೂರಿನ ಮೋತಿಮಾಲ್ ಹೋಟೆಲ್‌ನಲ್ಲಿ ನಡೆದಿದೆ. ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ನಾರಾಯಣ ಶೆಟ್ಟಿ ಎಂಬವವ ಪುತ್ರಿ ನವ್ಯ ಅವರ ನಿಶ್ಚಿತಾರ್ಥ ಸೋಮವಾರ ಮೋತಿ ಮಹಲ್ ಹೋಟೆಲ್‌ನಲ್ಲಿತ್ತು. ಭಾನುವಾರವೇ ನವ್ಯ ಮತ್ತು ಆಕೆಯ ಕುಟುಂಬದವರು ಹೋಟೆಲ್‌ಗೆ ಬಂದು ತಂದಿದ್ದರು. ನಿಶ್ಚಿತಾರ್ಥಕ್ಕೆಂದು ಸುಮಾರು 5.06 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮಾಡಿಸಿದ್ದರು.

ವರನ ಕಡೆಯವರು ಪಂಜಾಬ್ ನವರಾಗಿದ್ದರು ಅವರಿಗೂ ನಾರಾಯಣ ಶೆಟ್ಟಿ ಅವರ ಹೆಸರಿಯಲ್ಲಿ ಹೋಟೆಲ್‌ನಲ್ಲಿ ರೂಂಗಳನ್ನು ಬುಕ್ ಮಾಡಲಾಗಿತ್ತು. ನಿಶ್ಚಿತಾರ್ಥಕ್ಕಾಗಿ ನವ್ಯ ಧರಿಸಿದ್ದ ಸುಮಾರು 5.06 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ಜುವೆಲ್‌ಬಾಕ್ಸ್ ನಲ್ಲಿ ಹಾಕಿ ಕೊಠಡಿಯಲ್ಲಿದ್ದ ಕ್ಯಾರಿಯರ್ ಬ್ಯಾಗ್‌ನಲ್ಲಿಟ್ಟಿದ್ದರು. [ಅಡುಗೆ ಭಟ್ಟನ ಸೋಗಿನಲ್ಲಿದ್ದ ಮನೆಗಳ್ಳನ ಬಂಧನ]
ಮಧ್ಯಾಹ್ನ 12.30ರ ಸುಮಾರಿಗೆ ಕೊಠಡಿಗೆ ಬೀಗ ಹಾಕಿಕೊಂಡು ಕಾರ್ಯಕ್ರಮಕ್ಕೆ ಹೋಗಿದ್ದರು. ಮಧ್ಯಾಹ್ನ 3.30ರ ಸುಮಾರಿಗೆ ವಾಪಸ್ ಬಂದು ಕ್ಯಾರಿಯರ್ ಬ್ಯಾಗ್‌ನೊಂದಿಗೆ ಹೋಟೆಲ್‌ನಿಂದ ಮನೆಗೆ ಹೋಗಿದ್ದರು. ಮನೆಯಲ್ಲಿ ಕ್ಯಾರಿಯರ್ ಬ್ಯಾಗ್ ತೆರೆದು ನೋಡಿದಾಗ ಚಿನ್ನಾಭರಣಗಳಿದ್ದ ಬಾಕ್ಸ್ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. [ಚಿನ್ನ ಸಾಗಿಸಲು ಏನ್ ಐಡಿಯಾ ಮಾಡಿದ್ರು, ಸಿಕ್ಕಿಬಿದ್ರು]
ನವ್ಯ ಕುಟುಂಬದವರು ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications