ಮಂಗಳೂರಿನಲ್ಲಿ ಲಿಫ್ಟ್‌ ಬಾಗಿಲಿಗೆ ಸಿಲುಕಿ 8 ವರ್ಷದ ಬಾಲಕ ಸಾವು

ಮಂಗಳೂರು, ಮಾರ್ಚ್ 28:ಬಾಲಕನೋರ್ವ ಲಿಫ್ಟ್ ನ ಬಾಗಿಲಿಗೆ ಸಿಲುಕಿ ಮೃತಪಟ್ಟ ಘಟನೆ ನಗರದ ಚಿಲಿಂಬಿ ಎಂಬಲ್ಲಿ ಸಂಭವಿಸಿದೆ.ಇಲ್ಲಿಗೆ ಸಮೀಪದ ಭಾರತೀ ಹೈಟ್ಸ್ ವಸತಿ ಸಮುಚ್ಚಯದಲ್ಲಿ ಈ ಘಟನೆ ನಡೆದಿದ್ದು, ವಸತಿ ಸಮುಚ್ಚಯದ ಲಿಫ್ಟ್‌ನಲ್ಲಿ ಸಿಲುಕಿ 8 ವರ್ಷದ ಬಾಲಕ ಮೃತಪಟ್ಟಿದ್ದಾನೆ.

ಮೃತಪಟ್ಟ ಬಾಲಕನನ್ನು ಭಾರತೀ ಹೈಟ್ಸ್ ವಸತಿ ಸಮುಚ್ಚಯದ ಸೆಕ್ಯೂರಿಟಿ ಗಾರ್ಡ್‌ನ ಮಗ ಮಂಜುನಾಥ್ ಎಂದು ಗುರುತಿಸಲಾಗಿದೆ. ಬಾಲಕ ಮಂಜುನಾಥ್ ನಿನ್ನೆ (ಮಾ.28) ಮಧ್ಯಾಹ್ನ ಲಿಫ್ಟ್ ಓಪನ್ ಆದಾಗ ಅದರೊಳಗೆ ಹೋಗಿದ್ದಾನೆ. ಒಳ ಹೋಗುವ ಸಂದರ್ಭ ಏಕಾಏಕಿ ಲಿಫ್ಟ್ ಚಾಲನೆ ಆಗಿರುವುದೇ ಈ ದುರ್ಘಟನೆಗೆ ಕಾರಣ ಎಂದು ಹೇಳಲಾಗಿದೆ.

ಆದರೆ ಈ ವಸತಿ ಸಮುಚ್ಚಯದ ಲಿಫ್ಟ್ ಹೇಗೆ ಚಾಲನೆ ಆಯಿತು ಎಂಬ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ. ಈ ಕುರಿತು ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Boy died after getting trapped in lift at Mangaluru

ಸೆಕ್ಯೂರಿಟಿ ಗಾರ್ಡ್‌ ಮಂಜುನಾಥ್ ಮೂಲತಃ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ನಿವಾಸಿ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+