ಸೂಲಿಬೆಲೆಗೆ ನಿಂದನೆ, ಸಚಿವ ರೈ ವಿರುದ್ಧ ಖಾಸಗಿ ದೂರು ದಾಖಲು

ಮಂಗಳೂರು, ಸೆಪ್ಟೆಂಬರ್ 26 : ಉಳ್ಳಾಲದ ಅಸೈಗೋಳಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಯುವ ಬ್ರಿಗೇಡ್ ಸಂಚಾಲಕ ಚಕ್ರವರ್ತಿ ಸೂಲಿಬೆಲೆಯವರನ್ನು ಕೆಟ್ಟ ಶಬ್ಧದಿಂದ ನಿಂದಿಸಿದ್ದ ಅರಣ್ಯ ಸಚಿವ ರಮಾನಾಥ್ ರೈ ವಿರುದ್ಧ ಖಾಸಗಿ ದೂರು ದಾಖಲಾಗಿದೆ.

ಬಿಜೆಪಿ ಅಲ್ಪ ಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ ಅವರು ಮಂಗಳವಾರ ಮಂಗಳೂರಿನ ಎರಡನೇ ನ್ಯಾಯಾಲಯದ ನ್ಯಾಯಿಕ ದಂಡಾಧಿಕಾರಿಗೆ ದೂರು ನೀಡಿದ್ದಾರೆ. ರಹೀಂ ಉಚ್ಚಿಲ್ ಪರ ವಕೀಲ ಎಸ್.ಎಸ್ ಖಾಝಿ ವಾದಿಸಲಿದ್ದಾರೆ.

BJP complaint filed against Ramanath Rai deformation words used on Chakravarthy sulibele

ಸೆಪ್ಟೆಂಬರ್ 22ರಂದು ಉಳ್ಳಾಲದ ಅಸೈಗೋಳಿಯ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಯುವ ಬ್ರಿಗೇಡ್ ಸಂಚಾಲಕ ಚಕ್ರವರ್ತಿ ಸೂಲಿಬೆಲೆಯವರನ್ನು ಕೆಟ್ಟ ಶಬ್ಧದಿಂದ ರೈ ನಿಂದಿಸಿದ್ದರು.

ನೆಹರೂ ಕುಟುಂಬದ ಬಗ್ಗೆ ಮಾತನಾಡುವ ಚಕ್ರವರ್ತಿ ಸೂಲಿಬೆಲೆ ದೇಶದ್ರೋಹಿ, ಇಂತವರನ್ನು ಜೈಲಿಗೆ ಹಾಕಬೇಕು ಎಂದು ಸೂಲಿಬೆಲೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ರೈ ಬಾಯಿಚಪಲದ ವಿಡಿಯೋ ವೈರಲ್ ಆಗಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+