ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಡೂಟ ಪ್ರಕರಣ, ಅಧಿಕಾರಿಗಳಿಂದ ಮಂಗಳೂರು ಜೈಲಲ್ಲಿ ಪರಿಶೀಲನೆ

|
Google Oneindia Kannada News

ಮಂಗಳೂರು, ಜುಲೈ 20: ನಗರದ ಜಿಲ್ಲಾ ಕಾರಾಗೃಹದಲ್ಲಿ ನಡೆದಿತ್ತು ಎನ್ನಲಾದ ಬಾಡೂಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಬರ್ಕೆ ಠಾಣೆ ಇನ್ ಸ್ಪೆಕ್ಟರ್ ಹಾಗೂ ಇತರ ಸಿಬ್ಬಂದಿ ಇಂದು ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ನಡೆದ ಕರ್ಮಕಾಂಡ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಬೆಂಗಳೂರಿನಿಂದ ಬಂದೀಖಾನೆ ಇಲಾಖೆಯ ಹಿರಿಯ ಅಧಿಕಾರಿಗಳು ಮಂಗಳೂರು ಜೈಲಿನ ಮಾಹಿತಿ ಕೇಳಿದ್ದಾರೆ. ಈ ಹಿನ್ನಲೆಯಲ್ಲಿ ಪರಿಶೀಲನೆ ನಡೆಸುವಂತೆ ಬರ್ಕೆ ಠಾಣೆ ಗೆ ಹಿರಿಯ ಪೊಲೀಸ್ ಅಧಿಕಾರಿಗಳು ಸೂಚನೆ ನೀಡಿದ್ದರು.

Barke Police officials investigates Mangaluru central Jail over ‘Blasting Party’

ಈ ಕುರಿತು 'ಒನ್ಇಂಡಿಯಾ ಕನ್ನಡ'ದ ಅಧಿಕಾರಿಗಳ ಜತೆ ಮಾತನಾಡಿದ ಪ್ರಭಾರ ಜೈಲು ಅಧೀಕ್ಷಕರು 'ಜೈಲ್ ನಲ್ಲಿ ಯಾವುದೇ ಬಾಡೂಟ ಪ್ರಕರಣ ನಡೆದಿಲ್ಲ,' ಎಂದು ಸಮಜಾಯಿಸಿ ನೀಡಿದ್ದಾರೆ.
ಆದರೆ, ಜೈಲ್ ಒಳಗಡೆ ಪಾರ್ಟಿ ಮಾಡುವ ಫೋಟೋಗಳು ಬಯಲಾಗಿದ್ದು, ಹೊರಗಡೆಯಿಂದ ಊಟ ಪೊರೈಕೆಯಾಗಿದ್ದಕ್ಕೆ ಪುಷ್ಟಿ ನೀಡುತ್ತಿವೆ. ಐದಾರು ಆರೋಪಿಗಳು ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದು, ತಟ್ಟೆ ಬಳಿ ಬಾಟಲಿಗಳು ಕಂಡು ಬಂದಿವೆ. ಇದನ್ನು ಗಮನಿಸಿದಾಗ ಜೈಲ್ ಸಿಬ್ಬಂದಿಗಳ ಸಹಕಾರದಿಂದಲೇ ಈ ಭರ್ಜರಿ ಪಾರ್ಟಿ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಆರೋಪಿಗಳು ಹಳೆ ಜೈಲ್ ನ ಕೊಠಡಿ ಒಳಗಡೆ ಬಾಗಿಲಿಗೆ ಕರ್ಟನ್ ಹಾಕಿ ಪಾರ್ಟಿ ಮಾಡುತ್ತಿದ್ದಾರೆ. ಇದು ಆಗಾಗ ನಡೆಯುತ್ತಿದ್ದು, ಕೈದಿಗಳನ್ನು ಇಷ್ಟು ಸಲುಗೆಯಿಂದ ಇಲ್ಲಿ ಬಿಟ್ಟಿರುವುದೇ ಇದಕ್ಕೆ ಕಾರಣ ಎಂದು ಜೈಲ್ ಸಿಬ್ಬಂದಿಗಳು ಅಳಲು ತೋಡಿಕೊಂಡಿದ್ದಾರೆ.

ಈ ಹಿಂದೆ ಮಂಗಳೂರು ಕಾರಾಗೃಹದಲ್ಲಿ ಕುಖ್ಯಾತ ಕ್ರಿಮಿನಲ್ ಆರೋಪ ಹೊತ್ತು ಕೊಂಡ್ಡಿದ್ದ ರಶೀದ್ ಮಲಬಾರಿ ಇದ್ದ ಸಂದರ್ಭ ಆಗಾಗ ಬಾಡೂಟಗಳು, ಪಾರ್ಟಿಗಳು ಆಯೋಜನೆಗೊಳ್ಳುತ್ತಿತ್ತು. ಇದಕ್ಕಾಗಿ ಒಳಗಡೆ ಇರುವ ಸಹ ಕೈದಿಗಳಿಂದಲೇ ಹಫ್ತಾ ಎತ್ತಲಾಗುತ್ತಿತ್ತು ಎಂಬ ಆರೋಪಗಳಿವೆ. ಈ ವಿಚಾರವಾಗಿ ಜೈಲ್ ಒಳಗಡೆ ಹಲವು ಬಾರಿ ಹೊಡೆದಾಟಗಳು ನಡೆದ ಉದಾಹರಣೆಗಳೂ ಇವೆ.

English summary
Barke Police officials investigates Mangaluru central Jail and are preparing a report on alleged party in the Jail by the prisoners. Recently the Mangaluru Jail prisoners had a blasting party and had uploaded the picture on Social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X