ಬಂಟ್ವಾಳದಲ್ಲಿ ರೌಡಿ ಶೀಟರ್ ಕೊಚ್ಚಿ ಕೊಲೆ
ಮಂಗಳೂರು, ಜೂ.22 : ರೌಡಿಶೀಟರ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಬಂಟ್ವಾಳದ ಸುಜೀರ್ ಶಾಲಾ ಹಿಂಭಾಗದಲ್ಲಿ ನಡೆದಿದೆ. ನೌಶಾದ್ ಮೇಲೆ ಹಲ್ಲೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಶನಿವಾರ ಸಂಜೆ ಅಪರಿಚಿತರು ನೌಶಾದ್ (27) ಮೇಲೆ ಹಲ್ಲೆ ನಡೆಸಿದ್ದಾರೆ. ಅಪರಿಚಿತರ ತಂಡ ಏಕಾಏಕಿ ಹಲ್ಲೆ ನಡೆಸಿದಾಗ ನೌಶಾದ್ ಕೂಗಿಕೊಂಡಿದ್ದು, ಸ್ಥಳೀಯರು ಬಂದು ತಡೆಯುವ ವೇಳೆಗೆ ಆತನ ಕೈ, ಮುಖದ ಮೇಲೆ ಗಂಭೀರಗಾಯಗಳಾಗಿದ್ದವು. ತಕ್ಷಣ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ನೌಶಾದ್ ಅಲ್ಲಿ ಮೃತಪಟ್ಟಿದ್ದಾರೆ.

ಒಟ್ಟು ಆರು ಮಂದಿಯ ತಂಡ ಹತ್ಯೆಯನ್ನು ನಡೆಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಟುಕಾಟ ಆರಂಭಿಸಿದ್ದಾರೆ. ಹತ್ಯೆಗೆ ಹಳೆ ದ್ವೇಷವೇ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಪ್ರಮುಖ ಆರೋಪಿಯಾಗಿದ್ದ : 2012ರ ಜ. 5ರಂದು ನೂರುದ್ದೀನ್ ಎಂಬುವವರ ಹತ್ಯೆಯಾಗಿದ್ದು, ನೌಶಾದ್ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಪ್ರಕರಣವು ಸಾಬೀತಾಗದ ಕಾರಣ 2013ರಲ್ಲಿ ಎಲ್ಲಾ ಆರೋಪಿಗಳು ಖುಲಾಸೆಗೊಂಡಿದ್ದರು. ಈ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಕೊಲೆ ಮಾಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ಪರಿಚಿತರ ಕೈವಾಡ : ತನ್ನ ಫಾಸ್ಟ್ ಫುಡ್ ಅಂಗಡಿಗಾಗಿ ಸಂಜೆ ವೇಳೆ ಮನೆಯಲ್ಲಿ ಆಹಾರ ತಯಾರಿ ನಡೆಸುತ್ತಿದ್ದ ನೌಶಾದ್ ಮೊಬೈಲ್ ಗೆ ಕರೆ ಮಾಡಿ ಬರುವಂತೆ ಹೇಳಿದ ದುಷ್ಕರ್ಮಿಗಳು ಹೇಳಿದ್ದಾರೆ. ಆಲ್ಟೋ ಕಾರಿನಲ್ಲಿ ಮನೆಯಿಂದ ಮಾರಿಪಳ್ಳಕ್ಕೆ ಬಂದ ರಕ್ಷಣ ಆತನ ಮೇಲೆ ಹಲ್ಲೆ ನಡೆಸಲಾಗಿದೆ. ಆದ್ದರಿಂದ ಪರಿಚಯದವರು ಕರೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.












Click it and Unblock the Notifications