ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫಾಜಿಲ್‌ ಹಂತಕರಿಗೆ ಆಶ್ರಯ ನೀಡಿದ ಆರೋಪಿಗೆ ಜಾಮೀನು, ಮುಸ್ಲಿಂ ಸಂಘಟನೆಗಳಿಂದ ಪ್ರತಿಭಟನೆ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 16: ಸುರತ್ಕಲ್‌ನ ಮಂಗಳಪೇಟೆಯ ಫಾಜಿಲ್ ಹತ್ಯೆ ಪ್ರಕರಣದ ಆರೋಪಿಗಳಿಗೆ ಆಶ್ರಯ ನೀಡಿದ ಪ್ರಕರಣದಲ್ಲಿ ಬಂಧಿತನಾಗಿದ್ದ ಬಂಟ್ವಾಳದ ಹರ್ಷಿತ್‌ ಎಂಬಾತನಿಗೆ ನ್ಯಾಯಾಲಯದಿಂದ ಜಾಮೀನು ದೊರೆತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆ ಪ್ರಕರಣಗಳು ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿತ್ತು. ಈ ಸರಣಿ ಹತ್ಯೆಗಳಲ್ಲಿ ಜುಲೈ 28 ರಂದು ನಡೆದ ಫಾಜಿಲ್ ಹತ್ಯೆ ಪ್ರಕರಣವು ಒಂದಾಗಿದ್ದು, ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು. ಆರೋಪಿಗಳ ವಿಚಾರಣೆಯ ಸಂದರ್ಭದಲ್ಲಿ ಇವರಿಗೆ ಆಶ್ರಯ ನೀಡಿದ ಬಂಟ್ವಾಳದ ಹರ್ಷಿತ್‌ನನ್ನು ಬಂಧಿಸಲಾಗಿತ್ತು.

ಬಳ್ಳಾರಿ ವಿಮ್ಸ್‌ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರಬಳ್ಳಾರಿ ವಿಮ್ಸ್‌ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ತಲಾ 5 ಲಕ್ಷ ರೂ ಪರಿಹಾರ

ಆರೋಪಿಗಳು ಕೊಲೆ ಮಾಡಿದ ನಂತರ ಹರ್ಷಿತ್ ಆರೋಪಿಗಳನ್ನು ಕಾರಿನಲ್ಲಿ ತನ್ನ ಮನೆಗೆ ಕರೆದುಕೊಂಡು ಹೋಗಿ ಅವರಿಗೆ ಉಳಿದುಕೊಳ್ಳಲು ಆಶ್ರಯ ನೀಡಿದ್ದನು. ಈ ಪ್ರಕರಣದಲ್ಲಿ ಆತನನ್ನು ಆಗಸ್ಟ್ 17 ರಂದು ಬಂಧಿಸಲಾಗಿತ್ತು. ಆ ಪೈಕಿ ಹರ್ಷಿತ್‌ಗೆ ಮೂರನೇ ಜಿಲ್ಲಾ ಸತ್ರ ನ್ಯಾಯಾಲಯವು ಸೆಪ್ಟೆಂಬರ್ 7ರಂದು ಜಾಮೀನು ಮಂಜೂರು ಮಾಡಿನು, ಇದೀಗ ಜಾಮೀನು ಸಿಕ್ಕಿದ್ದು ಎರಡು ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ.

Bail Granted for one of Accused of who gave shelter to Mohammed Fazil

ಬೆಳ್ಳಾರೆಯಲ್ಲಿ ಹತ್ಯೆಯಾಗಿದ್ದ ಬಿಜೆಪಿ ಯುವ ಮುಖಂಡ ಪ್ರವೀಣ್‌ ನೆಟ್ಟಾರು ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದ ದಿನವೇ ಸುರತ್ಕಲ್‌ನಲ್ಲಿ ಫಾಜಿಲ್‌ನನ್ನು ಜುಲೈ 29ರಂದು ಬಟ್ಟೆ ಅಂಗಡಡಿ ಮುಂಭಾಗ ಕೊಲೆ ಮಾಡಲಾಗಿತ್ತು. ಬಜ್ಪೆ ನಿವಾಸಿ ಸುಹಾಸ್ ಶೆಟ್ಟಿ(29), ಕುಳಾಯಿ ಕಾವಿನಕಲ್ಲು ನಿವಾಸಿ ಮೋಹನ್ ಸಿಂಗ್(26), ಕುಳಾಯಿ ವಿದ್ಯಾನಗರ ನಿವಾಸಿ ಗಿರಿಧರ್(23), ಕಾಟಿಪಳ್ಳ ನಿವಾಸಿಗಳಾದ ಅಭಿಷೇಕ್(21), ಶ್ರೀನಿವಾಸ(23), ದೀಕ್ಷಿತ್(21) ಕೊಲೆ ಮಾಡಿದ್ದರು. ಆಗಸ್ಟ್‌ 2 ರಂದು ಈ ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದರು.

ಮುಸ್ಲಿಂ ಸಂಘಟನೆ ಪ್ರತಿಭಟನೆ

ಹರ್ಷಿತ್‌ಗೆ ಜಾಮೀನು ಸಿಕ್ಕ ವಿಷಯ ತಿಳಿಯುತ್ತಿದ್ದಂತೆ ಇದನ್ನು ವಿರೋಧಿಸಿ ಶುಕ್ರವಾರ ಪ್ರತಿಭಟನೆಗೆ ಕೆರೆ ಕೊಟ್ಟಿವೆ. ಈ ಪ್ರತಿಭಟನೆಯಲ್ಲಿ ಹತ್ಯೆಗೊಳಗಾದ ಫಾಜಿಲ್ ತಂದೆ ಕೂಡ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟನೆ ತಿಳಿಸಿದೆ.

English summary
A 28-year-old named Harshit grated bail by a district court on Thursday, who arrested for sheltering the seven prime accused of Mohammed Fazil murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X