ಲೋಕಸಭಾ ಚುನಾವಣೆಯಲ್ಲಿ ಮತ್ತೆ ನಳೀನ್‌ ಕುಮಾರ್‌ ಕಟೀಲ್‌ ಸ್ಪರ್ಧೆ..? ವಿಜಯೇಂದ್ರ ನೀಡಿದ ಸುಳಿವೇನು..?

ಮಂಗಳೂರು, ನವೆಂಬರ್‌ 22: ಮುಂದಿನ ಲೋಕಸಭಾ ಚುನಾವಣೆಯನ್ನ ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ. ಮತ್ತೊಮ್ಮೆ ನಮ್ಮ‌ ಪಕ್ಷದ ಅಭ್ಯರ್ಥಿಯಾದ ನಳಿನ್ ಕುಮಾರ್ ಕಟೀಲ್ ಅವರನ್ನು ಗೆಲ್ಲಿಸುವ ಕೆಲಸ ಮಾಡಬೇಕಿದೆ ಎಂದು ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ಮಂಗಳೂರು ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪರಶುರಾಮ ಸೃಷ್ಟಿಯ ನಾಡು, ಕಂಬಳದ ಬೀಡು ಮಂಗಳೂರಿನ ಜನರಿಗೆ ನಮಸ್ಕಾರಗಳು. ನನಗೆ ಯಡಿಯೂರಪ್ಪ ಮಗ ಅಂತ ಜವಾಬ್ದಾರಿ ಕೊಟ್ಟಿಲ್ಲ. ಹೈಕಮಾಂಡ್ ಕೆಲಸ ಗುರುತಿಸಿ ಈ ಜವಾಬ್ದಾರಿ ಕೊಟ್ಟಿದೆ. ಯಡಿಯೂರಪ್ಪ, ಅನಂತ್ ಕುಮಾರ್ ಸೇರಿ ಹಲವು ನಾಯಕರ ಶ್ರಮದಿಂದ ರಾಜ್ಯದಲ್ಲಿ ಬಿಜೆಪಿ ಬೆಳೆದಿದೆ. ಆದರೆ‌ ಕಾಂಗ್ರೆಸ್ ಮೊನ್ನೆ ಚುನಾವಣೆ ವೇಳೆ ಒಂದು ಸುಳ್ಳನ್ನು ಹತ್ತಾರು ಬಾರಿ ಹೇಳಿ ಅಧಿಕಾರ ಪಡೆದಿದೆ ಎಂದರು.

B.Y Vijayendra Give Hint About Nalin Kumar Kateel Is Again Contesting In The Lok Sabha Elections

ಅಧಿಕಾರಕ್ಕೆ ಬಂದ ಹೊಸ ಸರ್ಕಾರದ ಮೇಲೆ ಭಾರೀ ನಿರೀಕ್ಷೆ ಇತ್ತು. ಆದರೆ ಅಧಿಕಾರ ಸ್ವೀಕರಿಸಿದ ಮೊದಲ ದಿನದಿಂದಲೇ ನಿರೀಕ್ಷೆ ಹುಸಿಯಾಗಿದೆ. ಮೋದಿ ಕ್ರೀಡಾ ಮನೋಭಾವದಿಂದ ಮೊನ್ನೆ ಭಾರತದ ಪರ ಸ್ಟೇಡಿಯಂಗೆ ಬಂದಿದ್ದರು. ಆದರೆ ಪುಣ್ಯಾತ್ಮ ರಾಹುಲ್ ಗಾಂಧಿ ಅದು ಅಪಶಕುನ ಅಂತಾರೆ. ಆದರೆ ನಾವು ರಾಹು ಕಾಲದಲ್ಲಿ ಯಾವುದೇ ಶುಭ ಕಾರ್ಯ ಮಾಡಲ್ಲ. ಆದರೆ ಕಾಂಗ್ರೆಸ್ ಪಕ್ಷದ ನಾಯಕನ ಹೆಸರು ರಾಹುಲ್ ಗಾಂಧಿ. ರಾಹುಕಾಲ ಮತ್ತು ರಾಹುಲ್ ಗಾಂಧಿಗೆ ಯಾವುದೇ ವ್ಯತ್ಯಾಸ ಇಲ್ಲ. ರಾಹುಲ್ ಗಾಂಧಿ ಪಕ್ಷದ ಅಧಿಕಾರ ಪಡೆದ ಬಳಿಕ ಅವರಿಗೆ ರಾಹುಕಾಲ ಶುರುವಾಗಿದೆ ಎಂದು ವ್ಯಂಗ್ಯವಾಡಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಪ್ರಧಾನಿಯಾಗೋದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 28 ಕ್ಕೆ 28 ಸಂಸದರನ್ನ ನಾವು ಕಳುಹಿಸುತ್ತೇವೆ. ಇಡೀ ವಿಶ್ವ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಸಾಗುತ್ತಿದೆ. ಆದರೆ ಸಿದ್ದರಾಮಯ್ಯ, ಡಿಕೆಶಿ ಕುಂತಲ್ಲಿ ನಿಂತಲ್ಲಿ ಮೋದಿ ಅವರನ್ನು ಟೀಕಿಸ್ತಾರೆ. ಇವರ ಯೋಗ್ಯತೆಗೆ ಬರ ನಿಯಂತ್ರಣ ಮಾಡಲು ಆಗಿಲ್ಲ. ರಾಜ್ಯದ ಬರಗಾಲದ ಹೊತ್ತಲ್ಲಿ ಸಚಿವರಿಗೆ ಐಶಾರಾಮಿ ಕಾರು. ಅದರ ಜೊತೆಗೆ ಸಿಎಂ ನಿವಾಸ ಕೋಟ್ಯಾಂತರ ಖರ್ಚಿನಲ್ಲಿ ನವೀಕರಣ ಎಂದು ವಾಗ್ದಾಳಿ ನಡೆಸಿದರು.

B.Y Vijayendra Give Hint About Nalin Kumar Kateel Is Again Contesting In The Lok Sabha Elections

ದೇಶದ ರಾಜಕೀಯ ಇತಿಹಾಸದಲ್ಲಿ ಆರೇ ತಿಂಗಳಲ್ಲಿ ಜನಪ್ರಿಯತೆ ಕಳೆದುಕೊಂಡ ಸರ್ಕಾರ ರಾಜ್ಯದ ಕಾಂಗ್ರೆಸ್ ಸರ್ಕಾರ. ಅಖಂಡ ಶ್ರೀನಿವಾಸ ಮೂರ್ತಿ ಮನೆಗೆ ನುಗ್ಗಿ ಅಲ್ಪಸಂಖ್ಯಾತರು ಬೆಂಕಿ ಹಚ್ಚಿದ್ದರು. ಆದರೆ ಓಲೈಕೆ ರಾಜಕಾರಣಿ ಡಿ.ಕೆ ಶಿವಕುಮಾರ್‌ ಆ ಬಗ್ಗೆ ಮಾತನಾಡಲೇ ಇಲ್ಲ. ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಅಲ್ಲ, ಆದರೆ ನಮ್ಮಲ್ಲಿ ದೇಶದ್ರೋಹ ಕೆಲಸ ಮಾಡುವವರನ್ನು ಕ್ಷಮಿಸಲ್ಲ ಎಂದರು.

ರಾಷ್ಟ್ರೀಯ ಮತ್ತು ರಾಜ್ಯದ ಅಧ್ಯಕ್ಷರಿಗೆ ಕೊಡುವ ಗೌರವ ಬೂತ್ ಅಧ್ಯಕ್ಷರಿಗೂ ಕೊಡಬೇಕು. ನನ್ನ ಜಿಲ್ಲಾ ಪ್ರವಾಸದ ವೇಳೆ ಬೂತ್ ಅಧ್ಯಕ್ಷರ ಮನೆಗೆ ಭೇಟಿ ಕೊಡುತ್ತೇನೆ. ಮುಂದಿನ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಳಿನ್ ಕುಮಾರ್ ಕಟೀಲ್ ಗೆಲ್ಲಿಸುವ ಕೆಲಸ ಮಾಡಬೇಕಿದೆ. ಅವರ ಪರವಾಗಿ ಕಾರ್ಯಕರ್ತರು ಕೆಲಸ ಮಾಡಬೇಕಿದೆ. ನನ್ನ ಅಧಿಕಾರದ ಕೊನೆಯ ದಿನದವರೆಗೂ ಪಕ್ಷದಲ್ಲಿ ಕೆಲಸ ಮಾಡುತ್ತೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ತರುತ್ತೇನೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+