ಎಂಥ ವಿಷವನ್ನಾದರೂ ದೇಹದಿಂದ ಇಳಿಸುವ ಬೆಳ್ತಂಗಡಿಯ ವಿಷ ಧನ್ವಂತರಿ ಬೇಬಿ ಪಿಲ್ಯ
ಮಂಗಳೂರು, ಅಕ್ಟೋಬರ್ 11: ವೈದ್ಯ ಜಗತ್ತು ಅದೆಷ್ಟೋ ಮುಂದುವರಿದರೂ, ವೈದ್ಯ ಲೋಕಕ್ಕೇ ಸವಾಲೆನಿಸುವ ಘಟನೆಗಳು ಪ್ರಕೃತಿಯಿಂದ ಆಗಿದೆ. ಪ್ರಸಿದ್ಧ ವೈದ್ಯರಿಂದ ಆಗದ ಕಾರ್ಯ ನಾಟಿ ವೈದ್ಯರ ಮೂಲಕ ನಡೆದಿದೆ. ವಿಷ ಏರಿದ ಕಾಲು ತುಂಡು ಮಾಡಬೇಕು ಎಂದು ವೈದ್ಯರೇ ಸಲಹೆ ನೀಡಿದರೂ ನಾಟಿ ವೈದ್ಯರ ಮೂಲಕ ಕಾಲಿನ ವಿಷ ಇಳಿಸಿದ ಕಾರ್ಯ ನಡೆದಿದೆ. ಹಾವು ಕಡಿತಕ್ಕೊಳಗಾದವರ ಪಾಲಿನ ದೇವರು, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ ನಾಟಿ ವೈದ್ಯರಲ್ಲಿ ಒಬ್ಬರು ಪಿಲ್ಯ ಗ್ರಾಮದ ಬೇಬಿ ಪೂಜಾರಿ. ಅದೆಷ್ಟೋ ಜನರು ಪ್ರಸಿದ್ಧ ವೈದ್ಯರಿಂದ ಆಗದ ಪರಿಹಾರವನ್ನು ಬೇಬಿ ಪೂಜಾರಿಯವರ ಬಳಿ ಕಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಅಳದಂಗಡಿ ಸಮೀಪದ ಪಿಲ್ಯ ಗ್ರಾಮದ ನಾಟಿ ವೈದ್ಯರಾದ ಬೇಬಿ ಪೂಜಾರಿ ನಾಟಿ ವೈದ್ಯಕೀಯದಲ್ಲಿ ಪ್ರವೀಣರಾಗಿದ್ದಾರೆ. ತನ್ನ ತಂದೆ ತಿಮ್ಮಪ್ಪ ಪೂಜಾರಿಯವರಿಂದ ಬಳುವಳಿಯಾಗಿ ಬಂದ ನಾಟಿ ವೈದ್ಯಕೀಯವನ್ನು ಮುಂದುವರಿಸಿದ ಬೇಬಿ ಸಾವಿರಾರು ಜನರ ಬಾಳನ್ನು ಬೆಳಗಿಸಿದ್ದಾರೆ.
ಮೂರನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿರುವ ಇವರು ಬಳಿಕ ತನ್ನ ತಂದೆಯೊಂದಿಗೆ ನಾಟಿ ವೈದ್ಯವನ್ನು ಕರಗತ ಮಾಡಿಕೊಂಡಿದ್ದಾರೆ. ತಂದೆ ಕೊಡುತ್ತಿದ್ದ ಆಯುರ್ವೇದ ನಾಟಿ ಔಷಧಿಗಳನ್ನು ನೋಡುತ್ತಾ ಅನುಭವವನ್ನು ಹೆಚ್ಚಿಸಿಕೊಂಡು, ತಂದೆ ಇಲ್ಲದ ಸಮಯದಲ್ಲಿ ತಾವೇ ಔಷಧಿಯನ್ನು ಕೊಡುತ್ತಿದ್ದರು. ತಂದೆಯ ನಿಧನದ ಬಳಿಕ ನಾಟಿ ವೈದ್ಯ ಪರಂಪರೆಯನ್ನು ಮುಂದುವೆರಿಸಿದ ಬೇಬಿ ಪೂಜಾರಿಯವರು ಚರ್ಮರೋಗ, ಕೆಮ್ಮು, ಸರ್ಪಕೆಂಪು, ಸರ್ಪಸುತ್ತು, ಅಲರ್ಜಿ, ವಾತ, ಮುಟ್ಟು ದೋಷ, ಶರೀರಕ್ಕೆ ಬೆಂಕಿ ಬಿದ್ದಾಗ ಉರಿ ತೆಗೆಯುವುದು, ಹಾವು ಕಡಿತವಾದಾಗ ವಿಷ ತೆಗೆಯುವುದು ಹೀಗೆ ಹಲವಾರು ರೋಗಗಳಿಗೆ ಆಯುರ್ವೇದ ನಾಟಿ ಔಷಧಿಯನ್ನು ಕೊಡುತ್ತಿದ್ದಾರೆ.

ಹಾವು-ವಿಷಕಾರಿ ಹುಳಗಳ ಕಡಿತಕ್ಕೆ ಚಿಕಿತ್ಸೆ
ಸಾವಿರಾರು ಜನರ ಜೀವವನ್ನು ಬದುಕಿಸಿದ ಇವರು ಸಹಸ್ರಾರು ಗೋವುಗಳಿಗೆ ಔಷದಿಯನ್ನು ನೀಡಿ ಬದುಕಿಸಿದ್ದಾರೆ. ಅದರಲ್ಲೂ ಹಾವು ಕಚ್ಚಿದಾಗ ಜನರು ಅತೀ ಹೆಚ್ಚು ಬೇಬಿ ಅವರ ಮನೆಗೆ ಔಷಧಿಗಾಗಿ ಬರುತ್ತಾರೆ. ವರ್ಷದಲ್ಲಿ 500ಕ್ಕೂ ಅಧಿಕ ಹಾವು ಮತ್ತು ವಿಷಕಾರಿ ಹುಳ ಕಚ್ಚಿದ ರೋಗಿಗಳೇ ಇವರ ಬಳಿ ಬರೋದು ಇವರ ನಾಟಿ ಪಾಂಡಿತ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಹಾವು ಕಡಿತವಾದ ಸಂದರ್ಭದಲ್ಲಿ ವಿಷ ತೆಗೆದರೂ ಕೆಲವರ ಕಾಲಿನಲ್ಲಿ ಗಾಯ ತೀವ್ರ ಸ್ವರೂಪ ಪಡೆದ ಸಂದರ್ಭದಲ್ಲಿ ವೈದ್ಯರು ಕಾಲನ್ನು ತೆಗೆಯಬೇಕು ಎಂದು ಹೇಳಿದ ಸಂದರ್ಭದಲ್ಲಿ ಅವರನ್ನು ಮನೆಗೆ ಕರೆದುಕೊಂಡು ಬಂದು ಚಿಕಿತ್ಸೆ ಮಾಡಿ ಆಯುರ್ವೇದ ನಾಟಿ ಔಷಧಿಯನ್ನು ನೀಡಿ ಸಾವಿರಾರು ರೋಗಿಗಳಿಗೆ ಧೈರ್ಯದ ಮಾತನ್ನು ಹೇಳಿ ಅವರನ್ನು ಗುಣಪಡಿಸಿದ ಉದಾಹರಣೆಗಳಿವೆ.

ಮನೆಯಂಗಳದಲ್ಲೇ 80 ಕ್ಕೂ ಹೆಚ್ಚು ಔಷಧ ಗಿಡ
ನಾಟಿ ಔಷಧಿಗೆ ಬೇಕಾದ ಗಿಡ ಮೂಲಿಕೆಗಳನ್ನು ಬೇಬಿ ಪೂಜಾರಿಯವರೇ ಕಾಡಿಗೆ ಹೋಗಿ ಆರಿಸಿಕೊಂಡು ತರುತ್ತಾರೆ. ಎಣ್ಣೆಯನ್ನು ಮತ್ತು ಲೇಪವನ್ನು ಮನೆಯಲ್ಲಿ ಗಿಡ ಮೂಲಿಕೆಗಳಿಂದ ತಯಾರು ಮಾಡುತ್ತಾರೆ. ತನ್ನ ಜಾಗದಲ್ಲಿ ನಾಟಿ ಔಷಧಿಗೆ ಬೇಕಾದ 80 ಗಿಡಗಳನ್ನು ಬೆಳೆಸಿದ್ದಾರೆ. ಯಾವ ಚಿಕಿತ್ಸೆಗೂ ಇಂತಿಷ್ಟೇ ದರ ಎಂದು ನಿಗದಿಪಡಿಸದ ಬೇಬಿ ಪೂಜಾರಿಯವರು ಇಲ್ಲಿಯವರೆಗೆ ಚಿಕಿತ್ಸೆಗೆ ಯಾರ ಬಳಿಯಿಂದಲೂ ಹಣ ಕೇಳಿದವರಲ್ಲ. ಔಷಧ ಸ್ವೀಕರಿಸಿದ ರೋಗಿ ಶಕ್ತಿಯನುಸಾರ ನೀಡಿದ ಹಣವನ್ನು ಬೇಬಿಯವರು ತೆಗೆದುಕೊಳ್ಳುತ್ತಾರೆ.

ಮಗನಿಗೆ ನಾಟಿ ವೈದ್ಯ ಕಲಿಸಿರುವ ನಾಟಿ ವೈದ್ಯ ಪೂಜಾರಿ
ಬೇಬಿ ಪೂಜಾರಿರವರು ತನ್ನ ವಿದ್ಯೆಯನ್ನು ಹಿರಿಯ ಮಗ ಸತೀಶ್ ಪೂಜಾರಿಯವರಿಗೆ ನಾಟಿ ವೈದ್ಯ ಪದ್ಧತಿಯ ಗಿಡಮೂಲಿಕೆಗಳ ಪರಿಚಯ ಮಾಡಿ ಅವರಿಗೆ ಔಷದಿ ಕೊಡಲು ಕಲಿಸಿದ್ದಾರೆ. ತಂದೆ ಇಲ್ಲದ ಸಮಯದಲ್ಲಿ ನಾಟಿವೈದ್ಯರಾಗಿ ಸತೀಶ್ ಪೂಜಾರಿಯವರು ಔಷಧಿ ಕೊಡುತ್ತಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಸಿಂಧಿ ಹೋರಿಯೊಂದಕ್ಕೆ ಚಿಕಿತ್ಸೆ ನೀಡಿ, ಜೀವನ್ಮರಣ ಹೋರಾಟದಲ್ಲಿದ್ದ ಹೋರಿಗೆ ಪುನರ್ ಜನ್ಮನೀಡಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದಲೂ ಬೇಬಿ ಪೂಜಾರಿ ಶಹಬ್ಬಾಸ್ ಅನ್ನಿಸಿಕೊಂಡಿದ್ದಾರೆ.

ವಾರದೊಳಗೆ ಹಾವು ಕಡಿತದ ಗುರುತು ಮಾಯ
ವಿಷ ಚಿಕಿತ್ಸೆಯ ಧನ್ವಂತರಿ ಎಂದೇ ತಾಲೂಕಿನಾದ್ಯಂತ ಪ್ರಖ್ಯಾತರಾಗಿರುವ ಬೇಬಿ ಪೂಜಾರಿ ತಾವು ಮಾಡಿದ ಯಾವುದೇ ಚಿಕಿತ್ಸೆ ವಿಫಲವಾದದ್ದೇ ಇಲ್ಲವೆಂದು ತುಂಬು ವಿಶ್ವಾಸದಿಂದ ನುಡಿಯುತ್ತಾರೆ. ನಾಗರ ಹಾವಿನಂತಹ ವಿಷಕಾರಿ ಹಾವುಗಳ ಕಡಿತವುಂಟಾದವರಲ್ಲಿಗೇ ತೆರಳಿ ಧೈರ್ಯದ ಮಾತು ಆಡಿ ವಾರದೊಳಗೆ ಗಾಯದ ಗುರುತು ಕೂಡಾ ಇಲ್ಲದಂತೆ ಮಾಡಿದ್ದು ಬೇಬಿಯವರ ಹೆಗ್ಗಳಿಕೆಯಾಗಿದೆ.

ಬೇಬಿ ಪೂಜಾರಿಯವರ ವಿಳಾಸ
ಪಶ್ಚಿಮ ಘಟ್ಟದ ತಪ್ಪಲಿನ ಸನಿಹದಲ್ಲಿರುವ ಗ್ರಾಮ ಪಿಲ್ಯವಾಗಿದ್ದು, ಬೆಳ್ತಂಗಡಿಯಿಂದ 12 ಕಿ.ಮೀ ದೂರ, ಬೆಳ್ತಂಗಡಿ, ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಸಾಗಿದರೆ ಪಿಲ್ಯ ಗ್ರಾಮ ಸಿಗಲಿದೆ. ಅಲ್ಲಿ ಬೇಬಿ ಪೂಜಾರಿಯವರನ್ನು ಕಾಣಬಹುದಾಗಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications