ಆಟೋ ಚಾಲಕನ ಕೊಲೆ ಖಂಡಿಸಿ ಪ್ರತಿಭಟನೆ
ಮಂಗಳೂರು, ಆ.14 : ಬಂಟ್ವಾಳದಲ್ಲಿ ನಡೆದ ಆಟೋ ಚಾಲಕನ ಕೊಲೆ ಖಂಡಿಸಿ ಮತ್ತು ಆಟೋ ಚಾಲಕರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ (ಸಿಐಟಿಯು) ನೇತೃತ್ವದಲ್ಲಿ ನೂರಾರು ಆಟೋ ಚಾಲಕರು ಪ್ರತಿಭಟನೆ ನಡೆಸಿದರು.
ಬುಧವಾರ ನಗರದ ಪಂಪ್ವೆಲ್ ವೃತ್ತದಿಂದ ಆರಂಭಗೊಂಡ ಆಟೋ ಚಾಲಕರ ಪ್ರತಿಭಟನಾ ಸಮಾವೇಶ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡಿತು. ಪ್ರತಿಭಟನಾ ಸಭೆಯನ್ನುಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಆಟೋ ಚಾಲಕರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಬಂಟ್ವಾಳ ತಾಲೂಕಿನ ಪುದು ಗ್ರಾಮದ ಸುಜೀರ್ ನಿವಾಸಿ, ರಿಕ್ಷಾ ಚಾಲಕ ಮುಹಮ್ಮದ್ ರಿಫಾಯಿ ಕೊಲೆಯನ್ನು ಖಂಡಿಸಿದ ಪ್ರತಿಭಟನಾಕಾರರು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಒತ್ತಾಯಿಸಿದರು. ಕೃತ್ಯ ವನ್ನು ಖಂಡಿಸಿ ಬಾಡಿಗೆ ನೆಪದಲ್ಲಿ ರಿಕ್ಷಾ ಚಾಲಕರ ಪ್ರತೀಕಾರದ ಕೊಲೆಗಳು ನಡೆಯುತ್ತಿದ್ದರೂ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು. ಪ್ರತಿಭಟನೆ ಚಿತ್ರಗಳು

ಆಟೋ ಚಾಲಕರ ಪ್ರತಿಭಟನೆ
ಬಂಟ್ವಾಳದಲ್ಲಿ ನಡೆದ ಆಟೋ ಚಾಲಕನ ಕೊಲೆ ಖಂಡಿಸಿ ಮತ್ತು ಆಟೋ ಚಾಲಕರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ಫೆಡರೇಶನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್ (ಸಿಐಟಿಯು) ನೇತೃತ್ವದಲ್ಲಿ ನೂರಾರು ಆಟೋ ಚಾಲಕರು ಬುಧವಾರ ಪ್ರತಿಭಟನೆ ನಡೆಸಿದರು.

ರಕ್ಷಣೆ ಕೊಡುವಲ್ಲಿ ಪೊಲೀಸರು ವಿಫಲ
ನಗರದ ಪಂಪ್ವೆಲ್ ವೃತ್ತದಿಂದ ಆರಂಭಗೊಂಡ ರ‍್ಯಾಲಿ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡಿತು. ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಬಾಡಿಗೆ ನೆಪದಲ್ಲಿ ರಿಕ್ಷಾ ಚಾಲಕರ ಪ್ರತೀಕಾರದ ಕೊಲೆಗಳು ನಡೆಯುತ್ತಿದ್ದರೂ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.

ಕೊಲೆ ಪ್ರಕರಣ ಖಂಡಿಸಿದರು
ಬಂಟ್ವಾಳ ತಾಲೂಕಿನ ಪುದು ಗ್ರಾಮದ ಸುಜೀರ್ ನಿವಾಸಿ, ರಿಕ್ಷಾ ಚಾಲಕ ಮುಹಮ್ಮದ್ ರಿಫಾಯಿ ಕೊಲೆ ಕೃತ್ಯವನ್ನು ಆಟೋ ಚಾಲಕರು ಖಂಡಿಸಿದರು. ಕೊಲೆ ಮಾಡಿರುವ ಆರೋಪಿಗಳ ಬಗ್ಗೆ ಮಾಹಿತಿ ಇದ್ದರೂ, ಪೊಲೀಸರು ಅವರನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ದ್ವೇಷಕ್ಕಾಗಿ ನಡೆದ ಕೊಲೆ
ಜೂನ್ 21 ರಂದು ಮಾರಿಪಳ್ಳದ ಬಳಿ ನಡೆದಿದ್ದ ನೌಷಾದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾಗಿದ್ದ ತೌಸೀಫ್ ಎಂಬಾತನ ಸಹೋದರ ಮುಹಮ್ಮದ್ ರಿಫಾಯಿನನ್ನು ಭಾನುವಾರ ಬೆಳಗ್ಗೆ ಕೊಲೆ ಮಾಡಲಾಗಿತ್ತು. ನೌಷಾದ್ ಕೊಲೆಗೆ ಪ್ರತೀಕಾರವಾಗಿ ಈ ಹತ್ಯೆ ನಡೆಸಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು
ಪ್ರತಿಭಟನೆಯಲ್ಲಿ ಆಟೋ ಚಾಲಕರ ಸಂಘದ ಮುಖಂಡರಾದ ಸುನೀಲ್ ಕುಮಾರ್ ಬಜಾಲ್, ಎಲ್.ಟಿ. ಸುವರ್ಣ, ಲಿಂಗಪ್ಪ ನಂತೂರು ಹಾಗೂ ಪುದು, ಮಾರಿಪಳ್ಳ ರಿಕ್ಷಾ ಚಾಲಕರ ಸಂಘಟನೆಗಳ ಮುಖಂಡರಾದ ಕೃಷ್ಣಪ್ಪ ಗೌಡ, ಯೋಗಿಂದರ್, ಸಂಜೀವ, ಸುಲೈಮಾನ್ ಮುಂತಾದವರು ಭಾಗವಹಿಸಿದ್ದರು.












Click it and Unblock the Notifications